ಧರ್ಮೆಗೌಡರದ್ದು ಆತ್ಮಹತ್ಯೆ ಅಲ್ಲ, ರಾಜಕೀಯ ಪ್ರೇರಿತ ಕೊಲೆ; ಎಚ್.ಡಿ.ಕೆ

ಬೆಂಗಳೂರು, ಡಿ. 29: ಸ್ವಲ್ಪ ದಿನಗಳ ಹಿಂದೆ ನಡೆದ ವಿಧಾನಪರಿಷತ್ ಕುರ್ಚಿ ಕಿತ್ತಾಟದಲ್ಲಿ ಉಪಸಭಾಪತಿ ಎಸ್. ಎಲ್. ಧರ್ಮೇಗೌಡರಿಗೆ ಬಹಳ ಮುಜುಗರ ಉಂಟಾಗಿತ್ತು. ಇದರಿಂದ ಮನನೊಂದ ಉಪಸಭಾಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಈ ಪ್ರಕರಣವು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ. ನನ್ನ ಜೀವನದ ಅತ್ಯಂತ ಮರೆಯಲಾಗದ ದುರಂತ ದಿನ ಇದಾಗಿದೆ. ಅಲ್ಲದೇ ನನ್ನ ಜೀವನದಲ್ಲಿ ಅನೇಕ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ, ಆದರೆ ಧರ್ಮಣ್ಣನ ಈ ರೀತಿಯ ಸಾವು ನನಗೆ ಬಹಳ ನೋವು ನೀಡಿದೆ. ಈ ಸಾವು ಬರಿ ಆತ್ಮಹತ್ಯೆ ಅಂತ ಹೇಳಲ್ಲ, ಇದು ರಾಜಕೀಯ ಪ್ರೇರಿತ ಕೊಲೆ ಎಂದು ಹೇಳಬಹುದಾಗಿದೆ.

ಅವರ ತಂದೆ 2004ರಲ್ಲಿ ಬೀರೂರಿನಿಂದ ಆಯ್ಕೆಯಾಗಿದ್ದು, ಮಗ ಮಂತ್ರಿ ಆಗಬೇಕು ಎಂಬುದು ಅವರ ತಂದೆಯ ಕನಸ್ಸಾಗಿತ್ತು. ಅದನ್ನು ನನಸಾಗಿಸಲು ಉಪಸಭಾಪತಿಯಾಗಿ ಮಾಡಿದೆ. ಆದರೆ, ಉಪ ಸಭಾಪತಿ ಮಾಡಿದ್ದೆ ತಪ್ಪಾಯ್ತೇನೋ ಎಂಬ ಭಾವ ನನಗೆ ಕಾಡುತ್ತಿದೆ. ಆದರೆ ಕಾಂಗ್ರೆಸ್‍ನ ಪ್ರತಿನಿಧಿಗಳು ಆ ರೀತಿ ನಡೆದುಕೊಂಡಿದ್ದು ವಿಪರ್ಯಾಸವೇ ಸರಿ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ.

Exit mobile version