ಡಯಾಬಿಟಿಸ್ ರೋಗಿಗಳಿಗೆ ಪ್ರಕೃತಿ ನೀಡಿದ ವರದಾನ ಈ ಆಹಾರ ಪದಾರ್ಥಗಳು!

diabetes

ಈ ಕಾಲದಲ್ಲಂತೂ ಮಧುಮೇಹ(Diabetes) ಎನ್ನುವುದು ಅತ್ಯಂತ ಸಾಮಾನ್ಯ ಕಾಯಿಲೆಯಾಗಿಬಿಟ್ಟಿದೆ. ಡಯಾಬಿಟಿಸ್ ಒಮ್ಮೆಲೇ ವ್ಯಕ್ತಿಯ ಆರೋಗ್ಯವನ್ನು ಗಂಭೀರ ಸ್ಥಿತಿಗೆ ತಳ್ಳುವುದಿಲ್ಲವಾದರೂ ಇದರ ಬಗ್ಗೆ ಬಹಳ ಕಾಳಜಿ ಹಾಗೂ ತಪಾಸಣೆಯನ್ನು ನಡೆಸುತ್ತಲೇ ಇರಬೇಕು.

ಇದನ್ನು ನಿಯಂತ್ರಿಸಲು ಇರುವ ಪ್ರಮುಖ ವಿಧಾನ ಎಂದರೆ ಅದು ನಾವು ಸೇವಿಸುವ ಆಹಾರ. ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸದಂತಹ ಆಹಾರ ಪದಾರ್ಥವನ್ನು ಸೇವಿಸಬೇಕಾಗುತ್ತೆ. ಅಲ್ಲದೆ ಬಹಳ ಕಾಲ ಖಾಲಿ ಹೊಟ್ಟೆಯನ್ನು ಬಿಡದೆ ಆಗಾಗ ಆಹಾರವನ್ನು ಸೇವಿಸುತ್ತ ಇರಬೇಕು. ಮಧುಮೇಹ ಹೊಂದಿರುವವರು ಕೆಲವು ಆಯ್ದ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು. ಹಾಗಾದರೆ ಆ ಆಹಾರ ಪದಾರ್ಥಗಳು ಯಾವುದು ಎಂಬುದನ್ನು ಮುಂದೆ ತಿಳಿಯೋಣ ಬನ್ನಿ.

ಹಸಿರು ಎಲೆಗಳಿಂದ ಕೂಡಿರುವ ತರಕಾರಿಗಳು ಆರೋಗ್ಯಕ್ಕೆ ಅತ್ಯುತ್ತಮವಾದದ್ದು ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಇವು ಕಡಿಮೆ ಕ್ಯಾಲೋರಿ ಪ್ರಮಾಣ ಹಾಗೂ ಅತ್ಯುತ್ತಮ ಪೌಷ್ಟಿಕಾಂಶವನ್ನು ಒಳಗೊಂಡಿರುತ್ತದೆ. ಅಧಿಕ ಪ್ರಮಾಣದ ಪೋಷಕಾಂಶಗಳು, ಖನಿಜಗಳು ಮತ್ತು ವಿಟಮಿನ್-ಸಿ ಒಳಗೊಂಡಿರುವ ಪಾಲಕ್ ಸೇರಿದಂತೆ ಇನ್ನಿತರ ಸೊಪ್ಪುಗಳು ಅತ್ಯುತ್ತಮವಾದದ್ದು. ಇದು ಮಧುಮೇಹ 2 ರಂತಹ ರೋಗಿಗಳಲ್ಲಿ ರಕ್ಕದಲ್ಲಿರುವ ಸಕ್ಕರೆ ಮಟ್ಟವನ್ನು ಬಹುಬೇಗ ಕಡಿಮೆ ಮಾಡುತ್ತದೆ.

ಇನ್ನು ಮಸಾಲೆ ತಯಾರಿಕೆಯಲ್ಲಿ ಬಳಸುವ ಹಾಗೂ ಸುಗಂಧದಿಂದ ಕೂಡಿದ ಪದಾರ್ಥವೆಂದರೆ ದಾಲ್ಚಿನ್ನಿ. ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ತಗ್ಗಿಸಲು ಮತ್ತು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುವಲ್ಲಿ ಅತ್ಯುತ್ತಮ ರೀತಿಯಲ್ಲಿ ಸಹಕರಿಸುವುದು.
ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಬಯಸಿದರೆ ಚಿಯಾ ಸೀಡ್ಸ್ ಅತ್ಯುತ್ತಮ ಆಯ್ಕೆ. ಇವು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತವೆ. ಚಿಯಾ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯಕರವಾದ ತೂಕವನ್ನು ಹೊಂದಬಹುದು.

ದೀರ್ಘಕಾಲದವರೆಗಿನ ಹಸಿವನ್ನು ದೂರ ಇಡುತ್ತದೆ. ಉರಿಯೂತದ ಗುರುತುಗಳು ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಬ್ರೊಕೊಲಿ 3 ಗ್ರಾಂ ಜೀರ್ಣಕಾರಿ ಕಾರ್ಬ್ ಮತ್ತು 27ಗ್ರಾಂ ಕ್ಯಾಲೋರಿಗಳನ್ನು ಹೊಂದಿದೆ. ಇದರಲ್ಲಿ ಮೆಗ್ನಿಸಿಯಮ್, ವಿಟಮಿನ್-ಸಿ, ಸಮೃದ್ಧವಾಗಿದೆ ಎಂದು ಹೇಳಲಾಗುವುದು. ಇದರಲ್ಲಿರುವ ಪೌಷ್ಟಿಕಾಂಶವು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಲುಟೀನ್ ನಂತಹ ಉತ್ಕರ್ಷಣ ನಿರೋಧಕಗಳಿರುವುದರಿಂದ ಕಣ್ಣಿಗೆ ಸಂಬಂಧಿಸಿದ ಕಾಯಿಲೆಯನ್ನು ನಿಯಂತ್ರಿಸುವುದು.


ಆಂಚೋವಿ, ಸಲ್ಮೂನ್, ಹೆರಿಂಗ್, ಮ್ಯಾಕೆರೆಲ್ ಮತ್ತು ಸಾರ್ಡಿನೆಸ್ ಎನ್ನುವ ಆರೋಗ್ಯಕರವಾದ ಕೊಬ್ಬಿನಿಂದ ಕೂಡಿದ ಮೀನುಗಳು ಮಧುಮೇಹಿ ರೋಗಿಗಳಿಗೆ ಉತ್ತಮವಾದದ್ದು. ಇಪಿಎ ಮತ್ತು ಡಿಎಚ್‍ಎ ನಂತಹ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಕೊಬ್ಬಿನ ಮೀನುಗಳು ಹೃದಯದ ಸ್ಥಿರತೆಯನ್ನು ಕಾಪಾಡುತ್ತವೆ. ರಕ್ತನಾಳಗಳ ಆರೋಗ್ಯ ಕಾಪಾಡುವುದರ ಮೂಲಕ ಅಪಧಮನಿಗಳ ಕಾರ್ಯವನ್ನು ಸುಧಾರಿಸುತ್ತವೆ.

ಉರಿಯೂತವನ್ನು ಕಡಿಮೆಮಾಡುತ್ತವೆ. ನಿತ್ಯವು ಮೀನುಗಳನ್ನು ಸೇವಿಸುವ ಜನರು ಹೃದಯಘಾತದಿಂದ ಮರಣ ಹೊಂದುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತದೆ.

Exit mobile version