ಬಿಜೆಪಿ – ನುಡಿದಂತೆ ನಡೆದಿದ್ದೀರಾ? – ಕಾಂಗ್ರೆಸ್‌ ಪ್ರಶ್ನೆ

Did you do as you said

ಕೊಟ್ಟಿದ್ದ ಭರವಸೆಗಳು ಆರು ನೂರು , ಆಗಿದ್ದು  ಮೂರು. ವಚನಭ್ರಷ್ಟತೆ ಹಾಗೂ ಅಭಿವೃದ್ಧಿ ವೈಫಲ್ಯತೆಯನ್ನ ಮರೆಮಾಚುತ್ತಿರುವ ಬಿಜೆಪಿ(BJP) ರಾಜ್ಯದ ಜನರಿಗೆ ಉತ್ತರಿಸುವ ಸಮಯವಿದು.

ನುಡಿದಂತೆ ನಡೆದಿದ್ದೀರಾ?  ಎಂದು ಕಾಂಗ್ರೆಸ್‌ (CONGRESS) ರಾಜ್ಯ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದೆ.

ಈ ಕುರಿತು ಟ್ವೀಟ್‌ (Twitter) ಮಾಡಿರುವ ರಾಜ್ಯ ಕಾಂಗ್ರೆಸ್‌, ನಿಮ್ಮ ಪ್ರಣಾಳಿಕೆಯಲ್ಲಿ ಸಹಕಾರಿ – ರಾಷ್ಟ್ರೀಕೃತ ಬ್ಯಾಂಕಿ(Nationalized Bank) 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಿರಿ.

https://vijayatimes.com/bjp-congress-sarcasm-with-each-other/

ಆದರೆ, ಡಬಲ್ ಎಂಜಿನ್ (Double engine) ಸರ್ಕಾರದಿಂದ ರೈತರ ಸಾಲ ಮನ್ನಾ ಸಾಧ್ಯವಾಗಲಿಲ್ಲ, ರೈತರ ಆದಾಯವೂ ದ್ವಿಗುಣವಾಗಲಿಲ್ಲ,ಆಗಿದ್ದು ಬೆಲೆ ಏರಿಕೆ ಮಾತ್ರ ಇಂತಹ ಹೊಣೆಗೇಡಿತನ ಏಕೆ?

ಕೊಟ್ಟ 90% ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾದ ಬಿಜೆಪಿ ಸರ್ಕಾರದ ‘ವಚನ ವಂಚನೆ’ಗೆ ಉತ್ತರ ಕೊಡುವ ಸಮಯ ಬಂದಿದೆ. ನೇಮಕಾತಿ‌ (Recruitment) ಅಕ್ರಮ, ಭ್ರಷ್ಟಾಚಾರ,

https://vijayatimes.com/bjp-congress-sarcasm-with-each-other/

ಕಮಿಷನ್ ‌ದಂಧೆಯಲ್ಲಿ‌ ಮುಳುಗಿರುವ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನಸಾಮಾನ್ಯರ ಧ್ವನಿಯಾಗಿ ನಮ್ಮ ನೇರ ಪ್ರಶ್ನೆಗಳು, ಉತ್ತರಿಸುವ ಧೈರ್ಯವಿದೆಯೇ? ಎಂದು ಪ್ರಶ್ನಿಸಿದೆ.

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು, ಬಿಜೆಪಿ ಸರ್ಕಾರದ ಎಲ್ಲಾ  ಕೆಲಸಗಳಲ್ಲೂ ಭ್ರಷ್ಟಾಚಾರ, ಕಮಿಷನ್ (#40commission) ದಂಧೆ ನಡೆಯುತ್ತಿದೆ. ಸಚಿವ ಮಾಧುಸ್ವಾಮಿ ಅವರೇ, ಸರ್ಕಾರ ನಡೆಯುತ್ತಿಲ್ಲ,

Siddaramaiah

ಕೇವಲ ಮ್ಯಾನೇಜ್‌ ಮಾಡುತ್ತಿದ್ದೇವೆ ಎಂದಿದ್ದಾರೆ. ಇಂತಹ ಭ್ರಷ್ಟ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟು, ಉತ್ತರ ನೀಡಿ ಎಂದು ಕೇಳುತ್ತಿದ್ದೇವೆ. ಸಹಕಾರಿ  ರಾಷ್ಟ್ರೀಕೃತ ಬ್ಯಾಂಕುಗಳ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ (loan waiver) ಮಾಡುವ ಭರವಸೆ ನೀಡಿದ್ದರು.

ನಂತರ, ಸಾಲ ಮನ್ನಾ ಮಾಡಲು ನಮ್ಮ ಬಳಿ ನೋಟು ಪ್ರಿಂಟ್‌ ಮಾಡುವ ಮೆಷಿನ್‌ ಇದೆಯಾ ಎಂದರು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಬೆಲೆ ಏರಿಕೆಯಿಂದ ರೈತರ ಖರ್ಚು ದುಪ್ಪಟ್ಟು ಮಾಡಿದರು ಎಂದು ಟೀಕಿಸಿದ್ದಾರೆ.
Exit mobile version