ಜಾತಿ ,ಧರ್ಮದ ಕುರಿತಾದ ಪ್ರಚೋದನಕಾರಿ ಭಾಷಣಗಳಿಗಿಂತ ಅಭಿವೃದ್ಧಿ ಮುಖ್ಯ ಎಂದ ದಿನೇಶ್ ಗುಂಡೂರಾವ್

Mangaluru:ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿರುವಂತೆ ಬಿಜೆಪಿ (BJP) ಹಾಗೂ ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ  ಆಯೋಜಿಸಿದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ (Dinesh Gundurao) ಮಂಗಳೂರಲ್ಲಿ ನಾವು ಪಾರ್ಲಿಮೆಂಟ್ ಗೆಲ್ಲೋದಕ್ಕೆ ಆಗಿಲ್ಲ‌ ಇದನ್ನ ಒಪ್ಪಿಕೊಳ್ತೇವೆ. ಆದ್ರೆ ನಮ್ಮ ಪ್ರಯತ್ನವನ್ನು ನಾವು ಮಾಡ್ತೇವೆ.

ಜನರ ಮುಂದೆ ಕೊಟ್ಟಿರುವ ಮಾತು ಉಳಿಸಿಕೊಂಡಿರುವ ಸರ್ಕಾರ ನಮ್ಮದು. ಒಳ್ಳೆಯ ಕೆಲಸ ಮಾಡಲು ಮುಖ್ಯಮಂತ್ರಿಗಳು ಮುಂದೆ ಹೆಜ್ಜೆ ಇಡ್ತಿದ್ದಾರೆ. ಕರ್ನಾಟಕಕ್ಕೆ (Karnataka) ಆಗಿರುವ ಅನ್ಯಾಯದ ಬಗ್ಗೆ ಪ್ರತಿಪಾದನೆ ಮಾಡ್ತಿದ್ದಾರೆ. ಜನರ ವಿಶ್ವಾಸ ಗಳಿಸಲು ನಮ್ಮ ಪ್ರಾಮಾಣಿಕ ಪ್ರಯತ್ನ ಇದ್ದೇ ಇರುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಕೊಡಗಿನಲ್ಲಿ ನಾವು ಗೆದ್ದೇ ಇಲ್ಲ ಗೆದ್ದೇ ಇಲ್ಲ ಅಂತಿದ್ರು. ಮೊನ್ನೆ ಎರಡು ಶಾಸಕ‌ ಸ್ಥಾನಗಳನ್ನ ಗೆದ್ದಿದೇವೆ. ಅದೇ ರೀತಿ ಜ‌ನರ ಮನಸ್ಸನ್ನ ನಾವು ಗೆಲ್ಲಬೇಕು.

ಈ ಸಲ ದಕ್ಷಿಣಕನ್ನಡ (Dakshina Kannada) ಜಿಲ್ಲೆಯಲ್ಲಿ ಒಂದು ಬದಲಾವಣೆ ಆಗುತ್ತೆ. ಜನರಿಗೂ ಇದನ್ನು‌ ನೋಡಿ‌ನೋಡಿ‌ ಅವರಿಗೂ ಸಾಕಾಗಿ ಹೋಗಿದೆ ಎಂದು ಹೇಳಿದ್ದಾರೆ. ಬರೀ ಧರ್ಮ, ಜಾತಿ, ಸ್ವಾರ್ಥ, ಪ್ರಚೋದನಕಾರಿ ಮಾತು ಇದೇ ಅಗಿದೆ. ಈ ಬಗ್ಗೆ ಜನರಿಗೆ ಅರ್ಥವಾಗುವ ರೀತಿ ನಾವು ಪ್ರಚಾರ ಮಾಡ್ತೇವೆ. ನಿಮಗೆ ಅಭಿವೃದ್ಧಿ, ಶಾಂತಿ, ನೆಮ್ಮದಿ ಬೇಕಾ? ಅಥವಾ ಈ ಮಾತುಗಳನ್ನೇ ಕೇಳಿಕೊಂಡು ಹೋಗ್ಬೇಕಾ? ಎಂಬ ಪ್ರಶ್ನೆಯನ್ನು ಜನರ ಮುಂದಿಡುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಪ್ರಚೋದನಾಕಾರಿ ಭಾಷಣ ಮಾಡುವುದೇ ಬಿಜೆಪಿ ನಾಯಕರ ಅಭ್ಯಾಸ.ರಾಜ್ಯ ಬಜೆಟ್ (Budget)​ ಬಗ್ಗೆ ಬಿಜೆಪಿ ನಾಯಕರಿಂದ ಟೀಕೆ ವಿಚಾರವಾಗಿ ಮಾತನಾಡಿದ ಗುಂಡೂರಾವ್, ಬಿಜೆಪಿಯವರು ಬಾಯಿ ತೆರೆದರೆ ಬರೀ ಸುಳ್ಳೇ ಹೊರಗೆ ಬರುತ್ತಿದೆ. ಕೇವಲ ಪ್ರಚೋದನೆ ಮಾಡುವುದೇ ಬಿಜೆಪಿಯವರ ಅಭ್ಯಾಸ ಆಗಿದೆ. ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೊಂಡೆ ರಾಜಕಾರಣ ಮಾಡುತ್ತಿದ್ದಾರೆ ಈ ಸಲ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.

Exit mobile version