• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಈ 5 ಕನ್ನಡ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್ಗೆ ಸಮ ; ಸತ್ಯ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್..!

Bhavya by Bhavya
in ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಈ 5 ಕನ್ನಡ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್ಗೆ ಸಮ ; ಸತ್ಯ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್..!
0
SHARES
2.3k
VIEWS
Share on FacebookShare on Twitter

ಕಾವೇರಿ ಹೋರಾಟ ತೀವ್ರಗೊಂಡಿರುವ ಮಧ್ಯೆಯೇ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಶಶಾಂಕ್ (Director Shashank Viral Tweet) ಅವರು ಒಂದು ಸುದಿರ್ಘ ಚಿತ್ರದ ಮೂಲಕ

ಚಿತ್ರರಂಗದ ಕೆಲವು ಒಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪತ್ರ ಇಲ್ಲಿದೆ.

Director Shashank Viral Tweet

“ಪ್ರೀತಿಯ ಕನ್ನಡಿಗರೇ, ಅನಾದಿ ಕಾಲದಿಂದಲೂ ಕನ್ನಡ ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ಸೂಪರ್ ಸ್ಟಾರ್ಗಳಾಗುವ (Super Star) ಮುಂಚೆ ಹೊಸಬರಾಗಿದ್ದ ನಟರು ಬಹಿರಂಗವಾಗಿ

ಹೇಳಿದರೆ ಏನಾಗುತ್ತದೋ ಎಂಬ ಭಯದಲ್ಲಿ, ಒಳಗೇ ಅನುಭವಿಸುತ್ತಿದ್ದ ಒಂದು ಸಂಕಟದ ವಿಚಾರವನ್ನು ದರ್ಶನ್ ಸರ್ ಮೊನ್ನೆ ಧೈರ್ಯವಾಗಿ ಹೇಳಿದ್ದಾರೆ ಮತ್ತು ನಾನು ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇನೆ.

ನಾನು ಇದುವರೆಗೂ ಜನರನ್ನು ಮೆಚ್ಚಿಸಲು ಸಿನಿಮಾ ಮಾಡಿದ್ದೇನೆಯೇ ಹೊರತು, ಯಾವ ನಾಯಕ ನಟರನ್ನು ಮೆಚ್ಚಿಸಲು ಅಲ್ಲ ಎಂಬುದನ್ನು ನನ್ನ ಚಿತ್ರಗಳೇ ಹೇಳುತ್ತವೆ.

ದರ್ಶನ್ (Darshan) ಸರ್ ಮಾತಿಗೆ ನಾನು ಬೆಂಬಲ ಸೂಚಿಸಿದ್ದು ಒಬ್ಬ ಕನ್ನಡಿಗನಾಗಿ ಮತ್ತು ಕನ್ನಡ ಸಿನಿಮಾ ಪ್ರೇಮಿಯಾಗಿ ಅಷ್ಟೇ! ಎಂಥದ್ದೇ ಪರಿಸ್ಥಿತಿ ಬಂದರೂ, ಎಷ್ಟೇ ಅಮಿಷಗಳಿದ್ದರೂ, ಇದುವರೆಗೂ

ರೀಮೇಕ್ (Remake) ಚಿತ್ರಗಳನ್ನು ಮಾಡದಿರುವುದು ಮತ್ತು ಪ್ರತಿ ಚಿತ್ರದಲ್ಲೂ ಕನ್ನಡದ ಕಲಾವಿದರಿಗೆ ಪ್ರಾಮುಖ್ಯತೆ ನೀಡಿರುವುದೇ, ಕನ್ನಡ ಭಾಷೆಯ ಮೇಲಿನ ನನ್ನ ಬದ್ಧತೆಗೆ ಸಾಕ್ಷಿಯಾಗಿದೆ. ನನ್ನ

ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ (Kausalya Supraja Rama) ಸೇರಿದಂತೆ ನನ್ನ ಬಹುತೇಕ ಚಿತ್ರಗಳು ಗೆಲ್ಲಲು ಕಾರಣ, ನಿಜವಾದ ಕನ್ನಡ ಸಿನಿಮಾ ಪ್ರೇಮಿಗಳೇ.. ಅವರಿಗೆ ನಾನು

ಸದಾ ಚಿರಋಣಿ. ಆದರೆ, ಅಂಥವರ ಸಂಖ್ಯೆ ತುಂಬಾ(Director Shashank Viral Tweet) ಕಡಿಮೆ ಇದೆ ಎನ್ನುವುದು ದುಃಖದ ಸಂಗತಿ.

ಒಟ್ಟಾರೆ ಕನ್ನಡ (Kannada) ಚಿತ್ರರಂಗದ ಆರ್ಥಿಕತೆಯ ಅಂಕಿ-ಅಂಶವೇ ಅದಕ್ಕೆ ಸಾಕ್ಷಿ. ಆದರೆ, ಅದು ಸಾಮಾನ್ಯ ಪ್ರೇಕ್ಷಕರಿಗೆ ತಿಳಿಯದ ವಿಚಾರ, ಕಹಿ ಸತ್ಯವೇನೆಂದರೆ, ಈ ವರ್ಷದಲ್ಲಿ ಪ್ರೇಕ್ಷಕರು ಮತ್ತು

ವಿಮರ್ಶಕರಿಂದ ಉತ್ತಮ ಚಿತ್ರಗಳು ಎನಿಸಿಕೊಂಡ ‘ಡೇರ್ ಡೆವಿಲ್ ಮುಸ್ತಫಾ’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಕೌಸಲ್ಯಾ ಸುಪ್ರಜಾ ರಾಮ’, ‘ಆಚಾರ್ ಅಂಡ್ ಕೋ’ ,’ಸಪ್ತ ಸಾಗರದಾಚೆ ಎಲ್ಲೋ’

ಚಿತ್ರಗಳ ಒಟ್ಟು ಕಲೆಕ್ಷನ್ (Collection) ಒಂದು ತಮಿಳು (Tamilu) ಚಿತ್ರದ ಕಲೆಕ್ಷನ್ಗೆ ಸಮ! ಐದೂ ಗೆದ್ದ ಚಿತ್ರಗಳೇ.. ಆದರೆ, ಇನ್ನೂ ಹೆಚ್ಚಿನ ಗಳಿಕೆಗೆ ಅರ್ಹತೆ ಇದ್ದ ಚಿತ್ರಗಳು’ ಎಂದು ಶಶಾಂಕ್ ಹೇಳಿದ್ದಾರೆ.

ನಾವು ಭಾರತೀಯರು, ನಮ್ಮದು ಭಾರತ ಚಿತ್ರರಂಗ, ಈಗ ನಮ್ಮ ಚಿತ್ರಗಳನ್ನು ಬೇರೆ ರಾಜ್ಯದ ಪ್ರೇಕ್ಷಕರು ನೋಡುತ್ತಿದ್ದಾರೆ, ನಾವು ಅವರ ಚಿತ್ರಗಳನ್ನು ನೋಡುವುದು ತಪ್ಪಲ್ಲ, ಎಲ್ಲವೂ ನಿಜ. ಆದರೆ

ಒಂದು ದೊಡ್ಡ ವ್ಯತ್ಯಾಸವೇನೆಂದರೆ, ಅವರು ಪರಭಾಷೆಯ ಕೆಲವು ಚಿತ್ರಗಳನ್ನು ಮಾತ್ರ ನೋಡುತ್ತಾರೆ, ತಮ್ಮ ಭಾಷೆಯ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಸ್ಟಾರ್ ಸಿನಿಮಾಗಳ ಜೊತೆ ಜೊತೆಗೆ,

ಇತರೆ ನಗರ, ಹೊಸಬರ, ಉತ್ತಮ ಕಥಾವಸ್ತುವಿನ ಚಿತ್ರಗಳನ್ನೂ ದೊಡ್ಡ ಪ್ರಮಾಣದಲ್ಲಿ ನೋಡುತ್ತಾರೆ. ಹಾಗಾಗಿಯೇ, ಆ ಚಿತ್ರರಂಗಗಳ ಆರ್ಥಿಕತೆ ನಮಗಿಂತ 10 ಪಟ್ಟು ಹೆಚ್ಚಾಗಿದೆ.

Director Shashank Viral Tweet

ಆದರೆ ನಮ್ಮಲ್ಲಿ ಎಲ್ಲವೂ ಉಲ್ವಾ. ವಾರ್ಷಿಕ ವಹಿವಾಟಿನ ಲೆಕ್ಕದಲ್ಲಿ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗಿಂತಲೂ ಪರಭಾಷೆಯ ಚಿತ್ರಗಳ ಗಳಿಕೆಯೇ ಹೆಚ್ಚು. ಕನ್ನಡ ಚಿತ್ರೋದ್ಯಮದ ಸಂಕಟ ಕೇವಲ

ಚಿತ್ರಮಂದಿರಕ್ಕಷ್ಟೇ ಸೀಮಿತವಾಗಿಲ್ಲ.. ಒಟಿಟಿ ಪ್ಲಾಟ್ಫಾರ್ಮ್ಗಳಲ್ಲೂ (OTT Platform) ಇದೇ ವ್ಯಥೆ. ಎಲ್ಲಾ ಭಾಷೆಯ ಚಿತ್ರಗಳನ್ನು ಕೊಳ್ಳುವ, ಹಾಟ್ ಸ್ಟಾರ್, ಸೋನಿ, ನೆಟ್ ಫಿಕ್ಸ್ನಂತಹ ಪ್ಲಾಟ್ಫಾರ್ಮ್ಗಳು,

ಕನ್ನಡ ಚಿತ್ರಗಳಿಂದ ವಿಮುಖವಾಗಿರುವುದಕ್ಕೇ, ಕನ್ನಡ ಭಾಷೆಯಲ್ಲಿ ವೆಬ್ ಸೀರೀಸ್ಗಳು ನಿರ್ಮಾಣವಾಗದಿರುವುದಕ್ಕೆ ಕಾರಣ ಕೂಡ, ಕನ್ನಡ ಪ್ರೇಕ್ಷಕರ ಕೊರತೆ. ಎಲ್ಲಾ ಭಾಷೆಯಲ್ಲೂ ಚಿತ್ರಗಳನ್ನು ನಿರ್ಮಿಸುವ

ದೊಡ್ಡ ದೊಡ್ಡ ಮಲ್ಟಿ-ನ್ಯಾಷನಲ್ ಕಂಪನಿಗಳು (Multi National Company) ಕನ್ನಡದಲ್ಲಿ ಚಿತ್ರ ನಿರ್ಮಿಸಲು ಹಿಂದೇಟು ಹಾಕುವುದಕ್ಕೂ ಇದೇ ಕಾರಣ.

ಇವೆಲ್ಲವನ್ನು ಅವರು ಸುಮ್ಮನೆ ಹೇಳುವುದಿಲ್ಲ, ಅವರ ಬಳಿ ಇರುವ ಅಂಕಿ-ಅಂಶಗಳ ಆಧಾರದೊಂದಿಗೆ ಹೇಳುತ್ತಾರೆ. ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದರೆ, ಆ ಊರು ಸಮೃದ್ಧವಾಗಿದೆ ಎಂದು ಅರ್ಥವಲ್ಲ,

ಒಂದು ‘ಕೆಜಿಎಫ್’ (KGF) ಒಂದು ‘ಕಾಂತಾರ’ ಕನ್ನಡ ಚಿತ್ರರಂಗಕ್ಕೆ ಅಳತೆಗೋಲಾಗಲಾರವು. ‘ಕಾವೇರಿ ಸಮಸ್ಯೆ-ಕನ್ನಡ ಚಿತ್ರೋದ್ಯಮದ ಸಮಸ್ಯೆ ಎರಡೂ ಬೇರೆ ನಿಜ. ಆದರೆ, ಸಾಮ್ಯತೆ ಇರುವುದು

‘ನಮ್ಮದು’ ಎಂಬ ಭಾವದಲ್ಲ.. ಕಾವೇರಿ ನಮ್ಮದು. ನಮಗೇ ಮೊದಲ ಆದ್ಯತೆ ನೀಡಬೇಕು ಎಂಬುದು ಎಷ್ಟು ನ್ಯಾಯವೋ, ಕನ್ನಡ ಭಾಷೆಯ ಚಿತ್ರಕ್ಕೇ ಮೊದಲ ಆದ್ಯತೆ ನೀಡಿ ಎಂಬ ಮನವಿಯು ಅಷ್ಟೇ ನ್ಯಾಯ.

ಕಾವೇರಿ ನೀರನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ರೈತರ ಕುಟುಂಬಗಳಂತೆ, ಕನ್ನಡ ಚಿತ್ರೋದ್ಯಮವನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿವೆ. ಸಮಸ್ಯೆಗಳು ಎದುರಾದಾಗ, ಪರಸ್ಪರರ

ನೆರವಿಗೆ ನಿಲ್ಲುವುದೇ ನಿಜವಾದ ಮಾನವೀಯತೆ. ನಮ್ಮ ಚಿತ್ರಗಳನ್ನು ಪ್ರೇಕ್ಷಕರಾಗಿ ನೀವು ವಿಮರ್ಶೆ, ಟೀಕೆ ಮಾಡಿದಾಗ, ನಾವು ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಮುಂದಿನ ಚಿತ್ರಗಳಲ್ಲಿ ಅದನ್ನು

ತಿದ್ದಿಕೊಳ್ಳುವ ಪ್ರಯತ್ನ ಮಾಡುವುದಿಲ್ಲವೆ? ಹಾಗೇ, ನಿಮ್ಮ ತಪ್ಪುಗಳನ್ನು ಚಿತ್ರೋದ್ಯಮಕ್ಕೆ ಸಂಬಂಧಪಟ್ಟವರು ತೋರಿಸಿದಾಗ, ನೀವೂ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವುದು ನ್ಯಾಯವಲ್ಲವೇ?

ಎಂದು ಪ್ರಶ್ನಿಸಿದ್ದಾರೆ.

ವಿಮರ್ಶೆ-ಪರಾಮರ್ಶೆಗಳು ಎರಡೂ ಕಡೆಯಿಂದ ಇದ್ದರಷ್ಟೇ, ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತದೆ ಎಂಬುದು ನನ್ನ ಅನಿಸಿಕೆ. ಕನ್ನಡ ಚಿತ್ರಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆ

ಇರಬಹುದು ಆದರೆ, ನಾವೆಲ್ಲರೂ ಇಂದು ನೆಲೆ ಕಂಡಿರುವುದೇ ಅವರ ಪ್ರೀತಿ ಮತ್ತು ಅಭಿಮಾನದಿಂದ, ಅಂತಹ ಪ್ರೇಕ್ಷಕರಿಗಾಗಿ ನಮ್ಮ ಕಾಯಕ ಮುಂದುವರೆಯುತ್ತದೆ. ಸತ್ಯ ಹೇಳಿದರೂ ಅದನ್ನು ಒಪ್ಪದೇ,

ಪರಾಮರ್ಶಿಸದೆ, ಆತ್ಮಾವಲೋಕನ ಮಾಡಿಕೊಳ್ಳದೆ, ಕಾಲು ಎಳೆಯುವುದನ್ನೇ ಕಾಯಕ ಮಾಡಿಕೊಳ್ಳುವ ಜನರಿಗೆ ತಾಯಿ ಭುವನೇಶ್ವರಿ, ಸದ್ಭುದ್ಧಿ ನೀಡಲಿ. ಏನೇ ಸಂಕಟಗಳಿದ್ದರೂ, ಕನ್ನಡ ನಾಡಿನ

ಸಮಸ್ಯೆಗಳಿಗೆ ಕನ್ನಡ ಚಿತ್ರರಂಗ ಸದಾ ಧ್ವನಿಯಾಗಿದೆ. ಮುಂದೆಯೂ ಆಗಿರುತ್ತದೆ’ ಎಂದು ಶಶಾಂಕ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಒದಿ: 2029ಕ್ಕೆ ‘ಒಂದು ದೇಶ, ಒಂದು ಎಲೆಕ್ಷನ್’: ಕಾನೂನು ಆಯೋಗದಿಂದ ಬುಧವಾರ ಅಂತಿಮ ವರದಿ

Tags: box officeDarshan Toogudeepadirector shashankfilm industrieskannadaKarnatakatamil

Related News

ತಿಂಗಳಿಗೆ ₹10,000 ಹೂಡಿಕೆ ಮಾಡಿದರೆ ನಿವೃತ್ತಿ ಜೀವನ ಭದ್ರ: ಪೋಸ್ಟ್ ಆಫೀಸ್ FD ಮತ್ತು RD ಯೋಜನೆಗಳಿಂದ ಸುರಕ್ಷಿತ ಭವಿಷ್ಯ ಕಟ್ಟಿಕೊಳ್ಳುವ ಸುಲಭ ಮಾರ್ಗ
ಪ್ರಮುಖ ಸುದ್ದಿ

ತಿಂಗಳಿಗೆ ₹10,000 ಹೂಡಿಕೆ ಮಾಡಿದರೆ ನಿವೃತ್ತಿ ಜೀವನ ಭದ್ರ: ಪೋಸ್ಟ್ ಆಫೀಸ್ FD ಮತ್ತು RD ಯೋಜನೆಗಳಿಂದ ಸುರಕ್ಷಿತ ಭವಿಷ್ಯ ಕಟ್ಟಿಕೊಳ್ಳುವ ಸುಲಭ ಮಾರ್ಗ

May 9, 2026
ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯ: ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ
ಪ್ರಮುಖ ಸುದ್ದಿ

ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯ: ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ

May 9, 2026
ಪಂಚರಾಜ್ಯ ಫಲಿತಾಂಶ: ಬಂಗಾಳದಲ್ಲಿ ಅರಳಿದ ಕಮಲ, ತಮಿಳುನಾಡಿನಲ್ಲಿ ವಿಜಯ್ ಜಯ,ದೀದಿ-ಸ್ಟಾಲಿನ್-ಪಿಣರಾಯಿ ಮಹಾ ಪತನ
ಪ್ರಮುಖ ಸುದ್ದಿ

ಮ್ಯಾಜಿಕ್ ಸಂಖ್ಯೆಗೆ ಇನ್ನೂ ಎರಡು ಸ್ಥಾನ ಕೊರತೆ: ಟಿವಿಕೆ ಸರ್ಕಾರ ರಚನೆಗೆ ಮುಂದುವರಿದ ಕಸರತ್ತು

May 9, 2026
ಮನರೇಗಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾದ ರಾಜ್ಯ ಸರ್ಕಾರ
ಪ್ರಮುಖ ಸುದ್ದಿ

ಮನರೇಗಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾದ ರಾಜ್ಯ ಸರ್ಕಾರ

May 8, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.