ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಏರಿಸಿದ ದಿಶಾ ಪಟಾನಿ!

ಬಾಲಿವುಡ್ ಅಂಗಳದಲ್ಲಿ ಸದ್ಯ ಸಿಕ್ಕಾಪಟ್ಟೆ ಹಾಟ್ ಆಗಿರುವ ನ‌ಟಿ ಎಂದರೆ ಅದು ಎಂ.ಎಸ್.ಧೋನಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದಿಶಾ ಪಟಾನಿ. ತಮ್ಮ ಅದ್ಭುತ ಫಿಟ್‌ನೆಸ್, ಡ್ಯಾನ್ಸ್ ಮೂವ್ಸ್, ಹಾಟ್ ಫೋಟೊಗಳ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸದಾ ಸದ್ದು ಮಾಡುವಂತ ನಟಿ ದಿಶಾ ಪಟಾನಿ. ನಟನಾ ಕೌಶಲ್ಯವೇ ಆಗಿರಲಿ, ದಿಶಾ ಪಟಾನಿ ಯಾವಾಗಲೂ ಅಭಿಮಾನಿಗಳೊಡನೆ ಸಂಪರ್ಕ ಇಟ್ಟುಕೊಂಡಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿ ದಿಶಾ, ಅನೇಕ ಅಭಿಮಾನಿಗಳ ಹೃದಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ರೀತಿ ಟ್ರೆಂಡ್ ಆಗುವ ದಿಶಾ ಪಟಾನಿ, ಇತ್ತೀಚೆಗೆ ಆರೆಂಜ್ ಬಣ್ಣದ ಬಿಕಿನಿಯಲ್ಲಿ ಬೀಚ್ ಬಳಿ ಮಲಗಿರುವ ಫೋಟೊವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದ ತಾಪವನ್ನು ಹೆಚ್ಚಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಳೆಯ ಫೋಟೋ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ದಿಶಾ ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೊವೊಂದನ್ನು ಹಂಚಿಕೊಂಡಿದ್ದಕ್ಕೆ ಅಭಿಮಾನಿಗಳು ಫಿದಾ ಆಗಿ ಕಾಮೆಂಟ್ ಬಾಕ್ಸ್ನಲ್ಲಿ ಜಾಗಕೊಡದೆ ಕಾಮೆಂಟ್ ತುಂಬಿಸಿದ್ದಾರೆ. ದಿಶಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ್ಗ ತನ್ನ ಬಿಕಿನಿ ಧರಿಸಿದ ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ ಮತ್ತು ಅತ್ಯಂತ ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ.

ಈ ತಿಂಗಳ ಆರಂಭದಲ್ಲಿ ತಮಗೆ ರಜೆ ಇದ್ದ ಕಾರಣ, ದಿಶಾ ಮಾಲ್ಡೀವ್ಸ್ ಪಯಣ ಬೆಳೆಸಿ, ಅಲ್ಲಿನ ಪರಿಸರವನ್ನು ಆನಂದಿಸಿ ಕೆಲ ಚಿತ್ರಗಳನ್ನು ತೆಗೆದುಕೊಂಡಿದ್ದರು. ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ ವೈರಲ್ ಆಗಿದ್ದು, ನೆ‌ಟ್ಟಿಗರು ಈ ಫೋಟೊಗೆ ಸಿದಾಸಾದ ಫಿದಾ ಆಗಿದ್ದಾರೆ.

Exit mobile version