ಈ ಮೊದಲು ಸಿದ್ದುಗೆ ಸಹಕಾರ ಕೊಟ್ಟಿದ್ದೆ, ಅವರೂ ನನಗೆ ಕೊಡ್ತಾರೆ ಅನ್ನೋ ವಿಶ್ವಾಸವಿದೆ : ಡಿ.ಕೆ.ಶಿವಕುಮಾರ್‌

Tumakuru : ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ (KPCC President D. K Shivakumar), ಸಿದ್ದರಾಮಯ್ಯ (Siddaramaiah) ಮತ್ತು ತಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ನನ್ನ ಹಾಗೂ ಸಿದ್ದರಾಮಯ್ಯ (DK Shivakumar Vs Siddaramaiah) ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.

ನನಗೆ ಬೇರೆಯವರೊಂದಿಗೂ ಯಾವುದೇ ರಾಗ ದ್ವೇಷಗಳಿಲ್ಲ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಾನು ಸಚಿವರಾಗಿರದಿದ್ದರೂ ತಾಳ್ಮೆಯಿಂದ ಅವರಿಗೆ ಸಹಕಾರ ನೀಡಿದ್ದೆ.

ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಹಿರಿಯ ಕಿರಿಯ ನಾಯಕರು ನನಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಂದೆಯೂ ತಮಗೆ ಇದೇ ರೀತಿ ಸಹಕಾರ ನೀಡ್ತಾರೆ ಅನ್ನೋ ವಿಶ್ವಾಸ ಇದೆ.

ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ ಡಿಕೆಶಿ ಅವರು ತಮ್ಮ ಆಶಯಗಳನ್ನು ವಿಶ್ವಾಸದಿಂದ ತಿಳಿಸಿದರು.

ಚುನಾವಣೆಯಲ್ಲಿ ತಮ್ಮ ಪಕ್ಷದ ಯಶಸ್ಸಿನ ಹಿನ್ನೆಲೆಯಲ್ಲಿ ಡಿಕೆಶಿ ಮತ್ತು ಅವರ ಕುಟುಂಬ ಭಾನುವಾರ ತಿಪಟೂರಿನ ನೊಣವಿನಕೆರೆಯ ಕಾಡಸಿದ್ಧೇಶ್ವರ ಮಠಕ್ಕೆ ಪ್ರಯಾಣ ಬೆಳೆಸಿದರು.

ಇದನ್ನೂ ಓದಿ : https://vijayatimes.com/gt-vs-srh-ipl-2023/

ಅಲ್ಲಿ ಕರಿವೃಷಭ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿಕೆಶಿ ಅವರ ಪತ್ನಿ ಉಷಾ, ಪುತ್ರ ಆಕಾಶ್, ಪುತ್ರಿ ಐಶ್ವರ್ಯ, ಅಳಿಯ ಅಮಾರ್ಥ್ಯ ಸಿದ್ದಾರ್ಥ್ ಪುತ್ರಿ ಆಭರಣ ಸೇರಿದಂತೆ ಕುಟುಂಬದವರು ಪಾಲ್ಗೊಂಡಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯರ ತೀರ್ಮಾನದ ಮೇರೆಗೆ ಶಾಸಕಾಂಗ ಪಕ್ಷದ (DK Shivakumar Vs Siddaramaiah) ಸಭೆಯಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುವುದು.

ನಾನು ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದೇನೆ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಾನು ಸಚಿವನಾಗದೇ ಇದ್ದರೂ ಅಸಹನೆಗೆ ಒಳಗಾಗದೆ ಅವರೊಂದಿಗೆ ಕೆಲಸ ಮಾಡಿದ್ದೇನೆ.

ಈಗ ಅವರು ನನಗೆ ಸಹಕರಿಸುತ್ತಾರೆ ಎಂದು ನಂಬಿದ್ದೇನೆ. ಮಂಡ್ಯ ಜಿಲ್ಲೆಯ (Mandya District) ಎಲ್ಲ ಶಾಸಕರು, ಬೇಳೂರು ಗೋಪಾಲಕೃಷ್ಣ ಇಲ್ಲಿದ್ದಾರೆ.

ಅಜ್ಜಯ್ಯನವರ ಆಶೀರ್ವಾದದಿಂದ ಮುಂದೆ ಹೋಗುವ ವಿಶ್ವಾಸವಿದೆ ಎಂದರು.

ಮೊಳಗಿದ ಡಿಕೆಶಿ ಸಿಎಂ ಘೋಷಣೆ :
ಕಾಡಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿದ ಡಿಕೆಶಿಗೆ ತಿಪಟೂರಿನ ನೂತನ ಶಾಸಕ ಷಡಕ್ಷರಿ ಮಾಲಾರ್ಪಣೆ ಮಾಡಿದರು.

ಈ ವೇಳೆ ಅಭಿಮಾನಿಗಳು ‘ಮುಂದಿನ ಸಿಎಂ ಡಿಕೆಶಿ’ ಎಂದು ಘೋಷಣೆ ಕೂಗಿದರು.

ಈ ವೇಳೆ ಸಿಟ್ಟಿಗೆದ್ದ ಅವರು, ‘ಇದು ದೇವಸ್ಥಾನ, ಸುಮ್ಮನಿರಿ’ ಎಂದು ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಿದ್ಧಗಂಗಾ ದೇವಸ್ಥಾನಕ್ಕೂ ಭೇಟಿ ನೀಡಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

ಗುರು ಮಾರ್ಗದರ್ಶನ ಬೇಕಾಗುತ್ತದೆ :
ನನ್ನ ಕಷ್ಟದ ದಿನಗಳಲ್ಲಿ ಪೀಠ ಹಾಗೂ ಶ್ರೀಗಳು ನನ್ನ ಜೊತೆ ನಿಂತಿದ್ದಾರೆ. ಗೃಹಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಉಚಿತ ಬಸ್‌ ಪಾಸ್‌ ಕೊಡುವ ಯೋಜನೆ ಶ್ರೀಗಳ ಮಾರ್ಗದರ್ಶನದ ಮೇರೆಗೆ ಘೋಷಣೆ ಮಾಡಿದ್ದೇವೆ ಎಂದರು. ಗಂಗಾಧರ ಅಜ್ಜನವರ ಆಶೀರ್ವಾದ, ಮಾರ್ಗದರ್ಶನ ಪಡೆದಿರುವೆ ಎಂದರು.

Exit mobile version