ಹೌದು, ನಾವು ಗಾಂಧಿ ಕುಟುಂಬದ ಗುಲಾಮರು : ಡಿ.ಕೆ.ಶಿವಕುಮಾರ್

Sonia Gandhi

ಬೆಂಗಳೂರು : ಹೌದು, ನಾವು ಗಾಂಧಿ ಕುಟುಂಬದ ಗುಲಾಮರೇ. ನಾವು ಭಾರತಾಂಬೆಯ ಕೆಲಸ ಮಾಡ್ತಿದ್ದೇವೆ. ಜನರ ಸೇವೆ ಮಾಡ್ತಿದ್ದೇವೆ. ಸೋನಿಯಾ ಗಾಂಧಿಯವರು(Sonia Gandhi) ನಮ್ಮ ತಾಯಿ, ರಾಹುಲ್‌ ಗಾಂಧಿಯವರು(Rahul Gandhi) ನಮ್ಮ ಸಹೋದರ. ಅವರ ಜೊತೆಗೆ ನಾವು ನಿಲ್ಲುತ್ತೇವೆ ಎಂದು ಕಾಂಗ್ರೆಸ್‌ ರಾಜ್ಯಾಧ್ಯಕ್ಷ(Congress StatePresident) ಡಿ.ಕೆ.ಶಿವಕುಮಾರ್(DK Shivkumar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮೌನ ಪ್ರತಿಭಟನೆಯಲ್ಲಿ ಭಾಗಿಯಾದ ನಂತರ ಮಾತನಾಡಿದ ಅವರು, ಪ್ರಧಾನ ಮಂತ್ರಿ ಸ್ಥಾನ ತ್ಯಾಗ ಮಾಡಿದ್ದ ಮಹಿಳೆಗೆ ಕಿರುಕುಳ ಕೊಡುತ್ತಿದ್ದಾರೆ.

ಅವರು ಯಾವ ಆಸ್ತಿ ಮಾಡಿಕೊಂಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಗಾಂಧಿ ಕುಟುಂಬದ ಸ್ವಂತ ಆಸ್ತಿಯೆಂದು ಹೇಳಿಲ್ಲ. ರಾಜಕೀಯ ಉದ್ದೇಶದಿಂದಲೇ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್‌, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್‌, ಅದರಿಂದಲೇ ಪ್ರಧಾನಿಯಾದ ನೀವು ಇಂದು ಅವುಗಳನ್ನೇ ಒಡೆದು ಹಾಕುತ್ತೀದ್ದೀರಿ ಎಂದು ಬಿಜೆಪಿ(BJP) ವಿರುದ್ದ ವಾಗ್ದಾಳಿ ನಡೆಸಿದರು.
ಶಾಂತಿಯಿಂದಲೇ ಎಲ್ಲವನ್ನೂ ಜಯಿಸಿದ ಇತಿಹಾಸ ಈ ದೇಶಕ್ಕಿದೆ. ಅವರು ದ್ವೇಷದ ಸಂದೇಶ ಸಾರಿದರೆ ನಾವು ಶಾಂತಿ ಮಂತ್ರ ಪಠಿಸುತ್ತೇವೆ.

ಪ್ರತೀಕಾರದ ರಾಜಕೀಯಕ್ಕೆ ನಾವು ಮಣಿಯುವುದಿಲ್ಲ. ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಇ.ಡಿ ಸಮನ್ಸ್(ED Summons) ವಿರೋಧಿಸಿ ಬೆಂಗಳೂರಿನ ಗಾಂಧಿ ಪ್ರತಿಮೆಯ ಬಳಿ ಮೌನ ಪ್ರತಿಭಟನೆ ಆರಂಭವಾಗಿದೆ ಎಂದರು. “ಸೌಮ್ಯ ರೀತಿಯಲ್ಲಿ ಇಡೀ ಜಗತ್ತನ್ನೇ ಅಲುಗಾಡಿಸಬಹುದು” ಎಂಬ ಮಹಾತ್ಮ ಗಾಂಧಿ(Mahathma Gandhi) ಅವರ ಸಂದೇಶ ಇಂದಿನ ಕಾಲಘಟ್ಟದಲ್ಲಿ ಹೆಚ್ಚು ಪ್ರಸ್ತುವಾಗಿದೆ. ಕೇಂದ್ರ ಸರ್ಕಾರದ ದ್ವೇಷ ರಾಜಕೀಯ, ದಮನಕಾರಿ ನೀತಿಗಳನ್ನು ಇಂದು ಮೌನ ಸತ್ಯಾಗ್ರಹದ ಮೂಲಕ ಖಂಡಿಸಿದೆ.

ನ್ಯಾಯಕ್ಕಾಗಿ ನಮ್ಮ ಶಾಂತಿಯುತ ಹೋರಾಟ ನಿರಂತರವಾಗಿರಲಿದೆ ಎಂದು ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. ಇನ್ನು ಈ ಪ್ರತಿಭಟನೆಯಲ್ಲಿ ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌, ಯುಟಿ ಖಾದರ್‌, ಪ್ರಿಯಾಂಕ್‌ ಖರ್ಗೆ, ಬಿ.ಕೆ.ಹರಿಪ್ರಸಾದ್‌ ಮತ್ತು ಎಐಸಿಸಿ ಕಾರ್ಯದರ್ಶಿಗಳಾದ ಮಯೂರ್ ಜೈಕುಮಾರ್, ಅಭಿಷೇಕ್ ದತ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Exit mobile version