ಮಕ್ಕಳ ಶೂ, ಸಾಕ್ಸ್ಗಾಗಿ ಕಾಂಗ್ರೆಸ್ ಪಕ್ಷವೇ ರಾಜ್ಯಾದ್ಯಂತ ಜನರ ಬಳಿ ಭಿಕ್ಷೆ ಬೇಡಲಿದೆ : ಡಿಕೆಶಿ

Congress

ಮಕ್ಕಳ ಶೂ, ಸಾಕ್ಸ್, ಸಮವಸ್ತ್ರದ ವಿಚಾರದಲ್ಲಿ ಶಿಕ್ಷಣ ಸಚಿವರ(Education Minister) ಹೇಳಿಕೆಯಿಂದ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ಸರ್ಕಾರದ ಬಳಿ ಹಣ ಇಲ್ಲ ಎಂದಾದರೆ ಕಾಂಗ್ರೆಸ್ ಪಕ್ಷವೇ(Congress Party) ರಾಜ್ಯಾದ್ಯಂತ ಜನರ ಬಳಿ ಭಿಕ್ಷೆ ಬೇಡಲಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ(Congress State President) ಡಿ.ಕೆ.ಶಿವಕುಮಾರ್(DK Shivkumar) ಹೇಳಿದ್ದಾರೆ. ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಬಳಿ ಹಣ ಇಲ್ಲ ಎಂದಾದರೆ ಕಾಂಗ್ರೆಸ್ ಪಕ್ಷವೇ ರಾಜ್ಯಾದ್ಯಂತ ಜನರ ಬಳಿ ಭಿಕ್ಷೆ ಬೇಡಲಿದೆ.

ಆ ಹಣದಲ್ಲಿ ರಾಜ್ಯದ ಎಲ್ಲಾ ಶಾಲೆಯ ಮಕ್ಕಳಿಗೆ ಶೂ, ಸಾಕ್ಸ್, ಬಟ್ಟೆ ಕೊಡಿಸಲು ಕಾಂಗ್ರೆಸ್ ಬದ್ಧವಾಗಿದೆ . ಇನ್ನು ಇದೇ ವೇಳೆ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದು, ಸಾಮಾನ್ಯ ಜೀವನ ನಿರ್ವಹಣೆಯೂ ಕಷ್ಟವಾಗಿದೆ. ಹೀಗಾಗಿ ನಾವು ಹೋರಾಟ್ಕಕೆ ಸಿದ್ದತೆ ನಡೆಸಿದ್ದೇವೆ. ಬಿಜೆಪಿ ಸರ್ಕಾರಗಳ ವೈಫಲ್ಯಗಳನ್ನು ಜನರ ಮುಂದಿಡುತ್ತೇವೆ ಎಂದರು. ಬಡವರ ಅನ್ನಕ್ಕೆ ಕನ್ನ ಹಾಕುವ ಮನಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಅಕ್ಕಿ ಮೇಲೆ 5% GST ವಿಧಿಸಿದೆ. ಅಕ್ಕಿಯಷ್ಟೇ ಅಲ್ಲ, ಬೇಯಿಸುವ ಗ್ಯಾಸ್ ಬೆಲೆಯನ್ನೂ ಏರಿಸಿ ಬಡವರು ಹೊಟ್ಟೆ ತುಂಬಿಸಿಕೊಳ್ಳಲು ‘ದುಬಾರಿ ಬೆಲೆ’ ತೆರಬೇಕಾದ ಸ್ಥಿತಿ ಒದಗಿದೆ.

ಕ್ವಿಂಟಲ್ ಅಕ್ಕಿಯ ಬೆಲೆ ₹300 ರಿಂದ ₹400 ಏರಿಕೆಯಾದರೆ ಬಡವರ ಬದುಕು ನಿರ್ನಾಮವಾಗಲಿದೆ ಎಂದು ರಾಹುಲ್ ಗಾಂಧಿ(Rahul Gandhi) ಟ್ವೀಟ್ ಮಾಡಿದ್ದಾರೆ. ಕೇವಲ 1 ವರ್ಷದಲ್ಲಿ 8 ಬಾರಿ ಅಡುಗೆ ಅನಿಲ ಬೆಲೆಯನ್ನು ಏರಿಸಿದ ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕೆಪಿಎಂಸಿ ಅಧ್ಯಕ್ಷರಾದ ಡಾ.ಪುಪ್ಪಾ ಅಮರನಾಥ್, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಸೇರಿ ಮಹಿಳಾ ಕಾಂಗ್ರೆಸ್ನ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು.

Exit mobile version