ಸ್ಥಳೀಯ ಕರೆನ್ಸಿ ಮೌಲ್ಯ ಕುಸಿತ ; ಹಲವು ದೇಶಗಳ ಆರ್ಥಿಕ ಸಂಕಷ್ಟ ಹೆಚ್ಚಳ!

Washington : ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳ ಸ್ಥಳೀಯ(Dollar Value Increases) ಕರೆನ್ಸಿಗಳ ಮೌಲ್ಯವು ಕುಸಿತ ಕಾಣಿತ್ತಿರುವುದರಿಂದ, ಜಗತ್ತಿನ ಅನೇಕ ದೇಶಗಳಲ್ಲಿ ತೀವ್ರ ನೋವು ಮತ್ತು ಹತಾಶೆ ಪರಿಸ್ಥಿತಿ ಉಂಟಾಗಿದೆ ಎಂದು ಜಾಗತಿಕ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಅಮೇರಿಕಾದ ಡಾಲರ್‌(Dollar) ಮೌಲ್ಯ ದಿನೇ ದಿನೇ ಹೆಚ್ಚುತ್ತಿರುವುದು ಸ್ಥಳೀಯ ಕರೆನ್ಸಿ ಮೌಲ್ಯಗಳ(Dollar Value Increases) ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಸ್ಥಳೀಯ ಕರೆನ್ಸಿ ಮೌಲ್ಯ ಕುಸಿತದಿಂದ ಜಗತ್ತಿನ ಅನೇಕ ದೇಶಗಳಲ್ಲಿ ಅಗತ್ಯ ಸರಕಗಳು ಮತ್ತು ಸೇವೆಗಳ ಬೆಲೆಗಳು ತೀವ್ರ ಮಟ್ಟದಲ್ಲಿ ಹೆಚ್ಚಾಗುತ್ತಿವೆ. ‘

ಈಗಾಗಲೇ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ದದ ಪರಿಣಾಮ ಜಾಗತಿಕ ಮಟ್ಟದಲ್ಲಿ ಆಹಾರ ಕೊರತೆ ಉಂಟಾಗಿದೆ.

ಅನೇಕ ದೇಶಗಳು ಆಹಾರ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಮಯದಲ್ಲಿ, ಸ್ಥಳೀಯ ಕರೆನ್ಸಿ ಮೌಲ್ಯ ಕುಸಿತ ಹಲವು ದೇಶಗಳ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಇದನ್ನೂ ಓದಿ : https://vijayatimes.com/15-year-old-was-beaten/

ಜಾಗತಿಕವಾಗಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವೈನ್ ಆಮದುದಾರರು, ಇಸ್ತಾನ್‌ಬುಲ್‌ನಲ್ಲಿ ಮಕ್ಕಳ ಬಟ್ಚೆ ವ್ಯಾಪಾರಿಗಳು ಮತ್ತು, ನೈರೋಬಿಯಲ್ಲಿನ ವಾಹನ ಬಿಡಿಭಾಗಗಳ ವ್ಯಾಪಾರಿಗಳು ಕೂಡಾ ಸ್ಥಳೀಯ ಕರೆನ್ಸಿ ಮೌಲ್ಯಗಳ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಡಾಲರ್ ಮೌಲ್ಯ ಗಗನಮುಖಿಯಾಗುತ್ತಿರುವುದು ಪ್ರಪಂಚದ ಅನೇಕ ದೇಶಗಳಲ್ಲಿ ಕೆಟ್ಟ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಈಶ್ವರ್ ಪ್ರಸಾದ್ ಹೇಳಿದ್ದಾರೆ.

ಜಾಗತಿಕ ಅರ್ಥಶಾಸ್ತ್ರಜ್ಞರ ಪ್ರಕಾರ, ಡಾಲರ್‌ ಮೌಲ್ಯ ಏರಿಕೆಯು ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆಯನ್ನು ಹೆಚ್ಚಿಸಲಿದೆ.

2022ರಲ್ಲಿ ಡಾಲರ್ ಮೌಲ್ಯ ಶೇಕಡಾ 18 ರಷ್ಟು ಏರಿಕೆಯಾಗಿದೆ. ಅಮೆರಿಕದ ಹಣದುಬ್ಬರ ನಿಯಂತ್ರಿಸಲು, ಅಮೇರಿಕಾದ ಫೆಡರಲ್ ರಿಸರ್ವ್ ಬ್ಯಾಂಕ್ ಅಲ್ಪಾವಧಿಯ ಬಡ್ಡಿದರವನ್ನು ಈ ವರ್ಷ ಐದು ಬಾರಿ ಹೆಚ್ಚಿಸಿದೆ.

ಹೀಗಾಗಿ ಡಾಲರ್‌ ಮೌಲ್ಯವು ತೀವ್ರ ಗತಿಯಲ್ಲಿ ಹೆಚ್ಚುತ್ತಿದೆ.

https://fb.watch/gef5xQM3H5/

ಅಮೆರಿಕದ ಡೌಲರ್ ಮೌಲ್ಯಕ್ಕೆ ಹೋಲಿಸಿದಾಗ ಸ್ಥಳೀಯ ದೇಶಗಳ ಕರೆನ್ಸಿಗಳ ಮೌಲ್ಯ ಹೆಚ್ಚು ದುರ್ಬಲವಾಗಿದೆ.

ಈ ವರ್ಷ ಡಾಲರ್ ಎದುರು ಟರ್ಕಿಶ್ ಲಿರಾ ಮೌಲ್ಯ ಶೇ. 28 ರಷ್ಟು, ಪಾಕಿಸ್ತಾನ ರೂಪಾಯಿ ಮೌಲ್ಯ ಶೇ. 35ರಷ್ಟು, ಭಾರತೀಯ ರೂಪಾಯಿ ಮೌಲ್ಯ ಶೇ. 10, ಈಜಿಪ್ಟ್ ಪೌಂಡ್ ಮೌಲ್ಯ ಶೇ.20, ಕುಸಿದಿದೆ ಎನ್ನಲಾಗಿದೆ.

Exit mobile version