ಡೋಲೋ 650 ತಯಾರಕರು ವೈದ್ಯರಿಗೆ 1000 ಕೋಟಿ ಖರ್ಚು ಮಾಡಿದ್ದಾರೆ ಎಂಬ ಆರೋಪ ಆಧಾರ ರಹಿತ!

Dolo 650

ದೆಹಲಿ : ಪ್ಯಾರೆಸಿಟಮಾಲ್(Paracetomal) ಔಷಧಿ ಡೋಲೋ 650(Dolo 650) ತಯಾರಕರು, ವೈದ್ಯರಿಗೆ(Doctor) 1000 ಕೋಟಿ ರೂಪಾಯಿಗಳನ್ನು ಉಚಿತವಾಗಿ ಖರ್ಚು ಮಾಡಿದ್ದಾರೆ ಎಂಬ ಆರೋಪವನ್ನು ಕಂಪನಿ ನಿರಾಕರಿಸಿದೆ.

Dolo-650

ಡೋಲೋ 650 ಮಾತ್ರೆ ಉತ್ಪಾದಕ ಕಂಪನಿ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ನ ಕಮ್ಯುನಿಕೇಶನ್ನ ಉಪಾಧ್ಯಕ್ಷ ಜಯರಾಜ್ ಗೋವಿಂದರಾಜು ಅವರು ಆರೋಪಗಳನ್ನು “ಆಧಾರ ರಹಿತ” ಎಂದು ಹೇಳಿದ್ದಾರೆ. ಕೋವಿಡ್ನಲ್ಲಿ(Covid 19) ಡೋಲೋ 650 ಔಷಧಿಯನ್ನೇ ನಿರ್ದೇಶಿಸುವಂತೆ ವೈದ್ಯರಿಗೆ ನಾವು 1,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿಲ್ಲ.

ಏಕೆಂದರೆ ಕಳೆದ ವರ್ಷದಲ್ಲಿ ಸುಮಾರು 350 ಕೋಟಿ ರೂಪಾಯಿಗಳ ಗರಿಷ್ಠ ಮಾರಾಟವನ್ನು ಸಾಧಿಸಿದ ಬ್ರ್ಯಾಂಡ್ಗೆ, ಅಷ್ಟು ಮೊತ್ತವನ್ನು ಖರ್ಚು ಮಾಡಲು ಯಾವುದೇ ಕಂಪನಿಗೆ ಸಾಧ್ಯವಿಲ್ಲ ಎಂದು ಜಯರಾಜ್ ಗೋವಿಂದರಾಜು ಹೇಳಿದ್ದು, ಆರೋಪದಲ್ಲಿ ಉಲ್ಲೇಖಿಸಲಾದ 1000 ಕೋಟಿ ಮೊತ್ತವು ಕಳೆದ ಹಲವಾರು ವರ್ಷಗಳಿಂದ ಇಡೀ ಕಂಪನಿಯಿಂದ ಮಾರ್ಕೆಟಿಂಗ್ ವೆಚ್ಚವಾಗಿ ಖರ್ಚು ಮಾಡಿದ ಮೊತ್ತವಾಗಿದೆ ಎಂದಿದ್ದಾರೆ.

ಇನ್ನು ಪ್ಯಾರೆಸಿಟಮಾಲ್ನ ಎಲ್ಲಾ ಮಾತ್ರೆಗಳಂತೆ ಡೋಲೋ 650 ಬೆಲೆ ಕೂಡಾ ನಿಯಂತ್ರಣದಲ್ಲಿದೆ. ಡೊಲೊ 650 ಜನಪ್ರಿಯ ಮತ್ತು ವಿಶ್ವಾಸಾರ್ಹ ಬ್ರಾಂಡ್ ಆಗಿದ್ದು, ಇದು ಒಂದು ದಶಕದಿಂದಲೂ ಬ್ರ್ಯಾಂಡ್ ಲೀಡರ್ ಆಗಿದೆ. ಆದರೆ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಇದು ಹೆಚ್ಚು ಜನಪ್ರಿಯವಾಯಿತು.

ಏಕೆಂದರೆ ಇದು ಚಿಕಿತ್ಸೆಯ ಪ್ರೋಟೋಕಾಲ್ ಪ್ರಕಾರ ಜ್ವರವನ್ನು ನಿರ್ವಹಿಸಲು ಮುಂಚೂಣಿಯ ಚಿಕಿತ್ಸೆಯಾಗಿದೆ. ಇನ್ನು ಫೆಡರೇಶನ್ ಆಫ್ ಮೆಡಿಕಲ್ ಸೇಲ್ಸ್ ರೆಪ್ರೆಸೆಂಟೇಟಿವ್ ಆಫ್ ಇಂಡಿಯಾ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ದಾಖಲಿಸಿದ್ದು, ನ್ಯಾಯಾಲಯ ಕೇಳಿದರೆ ಯಾವುದೇ ಡೇಟಾವನ್ನು ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.

Exit mobile version