Belgavi (ಜೂ.30): ಗೃಹಲಕ್ಷ್ಮಿ ಯೋಜನೆಗೆ (Dont pay Grilahakshmi Yojana) ಅರ್ಜಿ ಸಲ್ಲಿಸುವಾಗ ಯಾರೂ ಕೂಡ ಒಂದು ರೂಪಾಯಿ ಸಹ ದುಡ್ಡು ಕೊಡಬಾರದು ಎಂದು ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ(Lakshmi Hebbalkar) ಮನವಿ ಮಾಡಿದರು. ಗುರುವಾರ ಸುದ್ದಿಗಾರರೊಂದಿಗೆ ಬೆಳಗಾವಿಯಲ್ಲಿ(Belgaum) ಮಾತನಾಡಿದ ಅವರು,ಮಹಿಳೆಯರಿಗೆ
ಒಂದು ರುಪಾಯಿ ಕೂಡ ಖರ್ಚಿಲ್ಲದೆ ಹಣ ನೀಡಬೇಕೆನ್ನುವುದು ಸರ್ಕಾರದ ಉದ್ದೇಶ (Dont pay Grilahakshmi Yojana) ಎಂದು ಹೇಳಿದರು.

ಹಾಗಾಗಿ ಸರ್ಕಾರವೇ ಸೇವಾ ಶುಲ್ಕ ಎಂದು ಒಂದು ಅರ್ಜಿಗೆ 20 ರೂ ಅನ್ನು ಸೇವೆ ನೀಡುವ ಕೇಂದ್ರ ಮತ್ತು ವ್ಯಕ್ತಿಗಳಿಗೆ ನೀಡಲು ನಿರ್ಧರಿಸಿದೆ. ಹಾಗಾಗಿ ಯಾರಾದರೂ ಬಂದು ಹಣ ಕೊಡಿ ಎಂದು ಕೇಳಿದರೆ
ಕೊಡಬೇಡಿ ಎಂದು ವಿನಂತಿಸಿದರು. ಕೆಲವು ಕಡೆ ಹಣ ವಸೂಲಿಯನ್ನು ಮಧ್ಯವರ್ತಿಗಳು ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿದ್ದೇನೆ. ಮಹಿಳೆಯರ ಖಾತೆಗೆ ಹಣವು ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ತಲುಪಬೇಕು
ಎನ್ನುವುದು ನಮ್ಮ ಉದ್ದೇಶ. ಇದಕ್ಕೆ ಯಾರೂ ಅವಕಾಶ ಕೊಡಬಾರದು.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಇಲ್ಲಿಯವರೆಗೆ ಯಾವುದೇ ಸಮಯ ಮಿತಿಯನ್ನು ಅರ್ಜಿ ಸಲ್ಲಿಸಲು ನಿಗದಿ ಪಡಿಸಿಲ್ಲ ಆದ್ದರಿಂದ ಯಾವುದೇ ಅವಸರವಿಲ್ಲದೆ ನಿಧಾನವಾಗಿ ಅರ್ಜಿ ಹಾಕಲು ಅವಕಾಶ ನೀಡಲಾಗುವುದು. ಹಾಗಾಗಿ ಯಾರೂ ಕೂಡ ಹಣ
ಕಳೆದುಕೊಳ್ಳಬೇಡಿ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳೆದ 4 ತಿಂಗಳಿಂದ ಹಾಲಿನ ಪೌಡರ್ ಪೂರೈಕೆಯಾಗುತ್ತಿಲ್ಲ.ಕೆಎಂಎಫ್‌ನವರು(KMF) ದರ ಹೆಚ್ಚಳವಾಗಿದ್ದರಿಂದ
ಹಾಲು ಪೂರೈಸಲು ಸಾಧ್ಯವಿಲ್ಲ ಎಂದು ನಿಲ್ಲಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಹೇಳಿದರು.
ಗೃಹಲಕ್ಷ್ಮಿ ಹೆಸರಲ್ಲಿ ವಂಚನೆ:
ನಗರದ ಖಾಸಗಿ ಏಜೆನ್ಸಿಯವರು(Private Agency) ರಾಜ್ಯ ಸರ್ಕಾರದ ಮಹತ್ವದ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡುವ ನೆಪದಲ್ಲಿ ಹಣ ಪಡೆಯುತ್ತಿದ್ದರು ಇದನ್ನು ಅಲ್ಲಿಯ ಮಹಿಳೆಯರೇ
ತೀವ್ರ ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ ಘಟನೆ ಇತೀಚೆಗೆ ಜರುಗಿದೆ. ಗೃಹಲಕ್ಷ್ಮಿ ಯೋಜನೆಗೆ ಇನ್ನೂ ಸಹ ನೋಂದಣಿ ಪ್ರಕ್ರಿಯೆಯೇ ಆರಂಭಗೊಂಡಿಲ್ಲ. ಅದಾಗಲೇ ದಿಶಾ ಒನ್
(Disha One)’ಎಂಬ ಹೆಸರಿನಲ್ಲಿ ಕೆಲವರು ನಗರದ ಮಹಿಳೆಯರಿಂದ .150 ಹಣ ಪಡೆಯುತ್ತಿದ್ದು ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಭರ್ತಿ ಮಾಡಿ ನೋಂದಣಿ ಮಾಡಿ ಕೊಡುವುದಾಗಿ
‘ಫಲಾನುಭವಿಗಳಿಗೆ ರಶೀದಿಯನ್ನೂ (Dont pay Grilahakshmi Yojana) ನೀಡಿದ್ದಾರೆ.

ನಾವೇ ಅರ್ಜಿಯನ್ನು ವಿವಿಧ ಯೋಜನೆ ಗಳಿಗೆ ತುಂಬಿಕೊಡುತ್ತೇವೆ. ನಾವು ನೀಡಿರುವ ರಶೀದಿಯನ್ನು ತೋರಿಸಿದ ನಂತರವಷ್ಟೇ ಅರ್ಜಿ ನೋಂದಣಿಯಾಗಲಿದೆ ಎಂದು ನಂಬಿಸಿದ್ದಾರೆ. ಈ ಬಗ್ಗೆ ಅನುಮಾನಗೊಂಡ
ಕೆಲವರು ಈ ಬಗ್ಗೆ ವಿಚಾರಣೆ ನಡೆಸಿದರು ನಂತರ ಕೆಲವರು ದಿಶಾ ಏಜೆನ್ಸಿ ಹೆಸರಿನಲ್ಲಿ ಮಹಿಳೆಯರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ವಂಚಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ರಶ್ಮಿತಾ ಅನೀಶ್