‘ಮಹದಾಯಿ ವಿವಾದ ಇತ್ಯರ್ಥ ಮಾಡಬೇಡಿ’ ಮೋದಿಗೆ ಬಿಜೆಪಿ ನಾಯಕರೇ ಹೇಳಿದ್ದಾರೆ: ಸಿದ್ದು ಗಂಭೀರ ಆರೋಪ

ಯಡಿಯೂರಪ್ಪ(Yediyurappa), ಸದಾನಂದ ಗೌಡ(Don’t settle Mahadayi dispute), ಪ್ರಹ್ಲಾಜ್‌ ಜೋಶಿ(Prahlad joshi) ಅವರು ಪ್ರಧಾನಿ ಕಚೇರಿಯ ಒಳಗಡೆ ಹೋಗಿ ವಿವಾದವನ್ನು ಇತ್ಯರ್ಥ ಮಾಡಬೇಡಿ, ಜೀವಂತವಾಗಿಡಿ ಎಂದು ಗುಟ್ಟಾಗಿ ಹೇಳಿ ಬಂದಿದ್ದರು.

ನನ್ನೊಂದಿಗೆ ಬಂದಿದ್ದ ಸ್ವಾಮೀಜಿಗಳು, ರೈತ ಮುಖಂಡರೇ ಇದಕ್ಕೆ ಸಾಕ್ಷಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು,

2018ರಲ್ಲಿ ಹುಬ್ಬಳ್ಳಿಯ(Hubli) ಇದೇ ಮೈದಾನದಲ್ಲಿ ಯಡಿಯೂರಪ್ಪ ಅವರು ತಾವು ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ಮಹದಾಯಿ(Don’t settle Mahadayi dispute) ವಿವಾದವನ್ನು ಇತ್ಯರ್ಥ ಮಾಡುತ್ತೇವೆ,

ಇದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಹೇಳಿದ್ದರು. ಅವರು ನುಡಿದಂತೆ ನಡೆದುಕೊಂಡಿದ್ದಾರ?

ಶ್ರೀಮತಿ ಇಂದಿರಾ ಗಾಂಧಿ(Indira gandhi) ಅವರು ಪ್ರಧಾನಿಯಾಗಿದ್ದಾಗ ತೆಲುಗು ಗಂಗಾ ಯೋಜನೆ ವಿಚಾರದಲ್ಲಿ

ಆಂದ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿಗಳನ್ನು ಕರೆದು ಮಾತುಕತೆ ಮೂಲಕ ವಿವಾದ ಇತ್ಯರ್ಥ ಮಾಡಿದ್ದರು.

ಇಂದಿರಾ ಗಾಂಧಿ ಅವರಂತೆ ಇಚ್ಛಾಶಕ್ತಿ ಮೋದಿ ಅವರಿಗಿದ್ದಿದ್ದರೆ ಮಹದಾಯಿ ವಿವಾದ ಎಂದೋ ಬಗೆಹರಿಯುತ್ತಿತ್ತು ಎಂದು ಟೀಕಿಸಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, ಸರ್ವಪಕ್ಷಗಳ ನಿಯೋಗದ ಎದುರೇ ಪ್ರಧಾನಿ ಮೋದಿ(Narendra modi) ಅವರಿಗೆ ಕೈಮುಗಿದು ಗೋವಾ ಮತ್ತು ಮಹಾರಾಷ್ಟ್ರದಲ್ಲಿ ನಿಮ್ಮದೇ ಸರ್ಕಾರ ಇದೆ.

ಈ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಯಿರಿ, ಸಭೆಗೆ ನಾನೂ ಬರುತ್ತೇನೆ. ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಡಿ ಎಂದು ಗೋಗರೆದರೂ ಮೋದಿ ಅವರು ಒಪ್ಪಲಿಲ್ಲ.

ನಾನು ಮುಖ್ಯಮಂತ್ರಿಯಾಗಿರುವಾಗ ಯಡಿಯೂರಪ್ಪ, ಸದಾನಂದಗೌಡ, ಪ್ರಹ್ಲಾದ್‌ಜೋಶಿ, ಅನಂತ ಕುಮಾರ್‌, ಕಳಸಾ ಬಂಡೂರಿ(Kalasa banduri) ನಾಲೆಗಾಗಿ ಹೋರಾಟ ಮಾಡುತ್ತಿದ್ದ ಎಲ್ಲ ರೈತ ಮುಖಂಡರು,

ಸಂಘ ಸಂಸ್ಥೆಗಳು, ಸ್ವಾಮೀಜಿಗಳನ್ನು ಒಳಗೊಂಡ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ಮೋದಿ ಅವರ ಬಳಿ ಕರೆದುಕೊಂಡು ಹೋಗಿದ್ದೆ.

ನಾವು ಅಧಿಕಾರಕ್ಕೆ ಬಂದ ಮೇಲೆ ಮಹದಾಯಿ ನದಿ ವಿವಾದ ನ್ಯಾಯಮಂಡಳಿಯ ಮುಂದೆ ಸಮರ್ಥವಾಗಿ ವಾದ ಮಂಡಿಸಿದ್ದರಿಂದ ರಾಜ್ಯಕ್ಕೆ 13.42 ಟಿಎಂಸಿ, ಗೋವಾಗೆ 24 ಟಿಎಂಸಿ, ಮಹಾರಾಷ್ಟ್ರಕ್ಕೆ 1.3 ಟಿಎಂಸಿ ನೀರು ಸಿಕ್ಕಿತ್ತು.

ಇದನ್ನೂ ಓದಿ: https://vijayatimes.com/lord-siddeshwar-is-immortal/

ಈ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ನಾವೇ ಸಲ್ಲಿಸಿದ್ದೆವು. ಮಹದಾಯಿ ಯೋಜನೆಯ ಗೆಜೆಟ್‌ ನೋಟಿಫಿಕೇಷನ್‌ ಆದದ್ದು 27-02-2020 ರಲ್ಲಿ. ಕೇಂದ್ರದಲ್ಲಿ, ರಾಜ್ಯದಲ್ಲಿ,

ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಎಲ್ಲಾ ಕಡೆ ಬಿಜೆಪಿ ಅವರದೇ ಸರ್ಕಾರ ಇದ್ದರೂ 2 ವರ್ಷ 10 ತಿಂಗಳಿಂದ ಯೋಜನೆ ವಿಳಂಬವಾದದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಕಾಂಗ್ರೆಸ್ ಪಕ್ಷ ಮಹದಾಯಿ ಜನಾಂದೋಲನ ಸಭೆ ಘೋಷಣೆ ಮಾಡಿದ ಮೇಲೆ ಬಿಜೆಪಿ(BJP) ಪಕ್ಷದವರು ಎಚ್ಚೆತ್ತುಕೊಂಡು,

ಚುನಾವಣೆ ಹತ್ತಿರ ಇದೆ ಎಂಬ ಕಾರಣಕ್ಕೆ ಕಳಸಾ ಬಂಡೂರಿ ನಾಲಾ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ಪಡೆದು ವಿಜಯೋತ್ಸವ ಆಚರಣೆ ಮಾಡಿದ್ದಾರೆ.

ಮಹದಾಯಿ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಳಂಬ ನೀತಿ ವಿರೋಧಿಸಿ ಹುಬ್ಬಳ್ಳಿಯಲ್ಲಿ ಜನವರಿ 2ರಂದು ಜನಾಂದೋಲನೆ ಸಭೆ ನಡೆಸಬೇಕು ಎಂದು ಹಲವು ದಿನಗಳ ಹಿಂದೆ ಪಕ್ಷದ ನಾಯಕರು ಚರ್ಚಿಸಿ, ತೀರ್ಮಾನಿಸಿದ್ದೆವು ಎಂದಿದ್ದಾರೆ.

Exit mobile version