ಇಂಧನ ಹೊಂದಾಣಿಕೆ ಶುಲ್ಕ ನೆಪ, ಡಬಲ್ ಆಯ್ತು ಕರೆಂಟ್ ಬಿಲ್ ; ಹಲವೆಡೆ ಪ್ರತಿಭಟನೆ

bill

ಬೆಂಗಳೂರು : ನೂತನ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಉಚಿತವಾಗಿ 200 ಯೂನಿಟ್ ವಿದ್ಯುತ್ ಸಿಗುತ್ತದೆ ಎಂದು ಖುಷಿಯಲ್ಲಿದ್ದವರಿಗೆ ಕಾಂಗ್ರೆಸ್ (Double current bill) ಸರ್ಕಾರ ಬಿಗ್ ಶಾಕ್ ನೀಡಿದೆ.

ಇಂಧನ ಇಲಾಖೆ ಇಂಧನ ಹೊಂದಾಣಿಕೆ ಶುಲ್ಕ ಎಂಬ ಹೊಸ ಮಾರ್ಗಸೂಚಿಯ ಮೂಲಕ ಹೆಚ್ಚುವರಿ ಹಣ ಪಡೆಯುತ್ತಿದೆ. ಇನ್ನೊಂದೆಡೆ ವಿದ್ಯುತ್ ದರವನ್ನೂ ಹೆಚ್ಚಿಸಿರುವುದರಿಂದ ವಿದ್ಯುತ್ ಬಿಲ್ ರಾಜ್ಯಾದ್ಯಂತ ಡಬಲ್ ಆಗಿದೆ.

ಸರ್ಕಾರದ ಈ ನೀತಿಯ ವಿರುದ್ದ ಹಲವೆಡೆ ಪ್ರತಿಭಟನೆಯನ್ನೂ (Double current bill) ನಡೆಸಲಾಗಿದೆ.

ಇದನ್ನು ಓದಿ: ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಕೇಸ್‌ಗೆ ಬಿಗ್ ಟ್ವಿಸ್ಟ್ : ಶ್ರುತಿ ಹರಿಹರನ್‌ಗೆ ನೋಟಿಸ್​ ಜಾರಿ ಮಾಡಿದ ಖಾಕಿ


ಕಳೆದ ತಿಂಗಳು 1 ಸಾವಿರ ಬಂದಿದ್ದ ವಿದ್ಯುತ್ ಬಿಲ್ ಈ ತಿಂಗಳು 2500 ರಿಂದ 3000 ಸಾವಿರ ಬಿಲ್ ಬಂದಿದೆ. ಬೀದರ್ ನ ಶಿವರಾಜ್ ಬಿರಾದರ್ ಎಂಬವರಿಗೆ ಕಳೆದ ತಿಂಗಳು 950 ವಿದ್ಯುತ್ ಬಿಲ್ ಬಂದಿತ್ತು.

ಆದರೆ ಈ ಬಾರಿ 2007 ವಿದ್ಯುತ್ ಬಿಲ್ ಬಂದಿದೆ. ಪ್ರಕಾಶ್ ಪಾಟೀಲ್ ಎಂಬವರಿಗೆ ಕಳೆದ ತಿಂಗಳು 1500 ಬಂದಿತ್ತು. ಈ ಬಾರಿ 3800 ಕರೆಂಟ್ ಬಿಲ್ ಬಂದಿದೆ. ಇದೇ ರೀತಿ ರಾಜ್ಯಾದ್ಯಂತ ಅನೇಕ ಕಡೆ ಹೆಚ್ಚುವರಿ ಬಿಲ್ ಬಂದಿದೆ.

ಕೊಪ್ಪಳದಲ್ಲಿ ಇದಕ್ಕೆ ಸಂಬಂಧಿಸಿದಂತೆ ಬಡಾವಣೆಯೊಂದರ ಜನರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆಯು ನಡೆದಿದೆ. ಇಂಧನ ಹೊಂದಾಣಿಕೆ ಶುಲ್ಕ ಎಂಬ ನೆಪದಲ್ಲಿ

ಸರ್ಕಾರ ಜನರಿಂದ ಸುಲಿಗೆ ಮಾಡುತ್ತಿದೆ. ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳಿ, ಇದೀಗ ವಿದ್ಯುತ್ ದರ ಹೆಚ್ಚಿಸಿ, ಟ್ಯಾಕ್ಸ್ ಹಾಕಿ, ಇದೀಗ ಇಂಧನ ಹೊಂದಾಣಿಕೆ ಶುಲ್ಕವನ್ನೂ ಗ್ರಾಹಕರ ಮೇಲೆ ಹೇರುತ್ತಿರುವುದು ಹಗಲು

ದರೋಡೆ ಎನ್ನಬಹುದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇನ್ನು ಕೆಲವರು ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿಯ ಯೋಜನೆಯ ಉಚಿತ 200 ಯೂನಿಟ್ ವಿದ್ಯುತ್ ನಮಗೆ ಬೇಡ. ನಮಗೆ ಮೊದಲಿನ ಹಾಗೆ ವಿದ್ಯುತ್ ಬಿಲ್ ಮಾಡಿ ಸಾಕು. ಈ ರೀತಿಯಾಗಿ ಬೇಕಾಬಿಟ್ಟಿಯಾಗಿ ದರಗಳನ್ನು

ಹೆಚ್ಚಿಸುತ್ತಾ, ಹೋದರೆ ನಾವು ಯಾರು ಕರೆಂಟ್ ಬಿಲ್ ಕಟ್ಟೋದಿಲ್ಲ. ಸರ್ಕಾರ ವಿರುದ್ದ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.

Exit mobile version