ಟೀ ಕುಡಿಯಲು ರಸ್ತೆ ಮಧ್ಯದಲ್ಲೇ ಬಸ್‌ ನಿಲ್ಲಿಸಿದ ಚಾಲಕ ; ʼಪ್ರಿಯೊರಿ-ಟೀ’ ಎಂದ ನೆಟ್ಟಿಗರು

New Delhi : ದೆಹಲಿ ಸಾರಿಗೆ ನಿಗಮದ (driver stopped bus) ಬಸ್ ಚಾಲಕ ದೆಹಲಿಯ ಕಮಲಾ ನಗರ ಮಾರುಕಟ್ಟೆಯಲ್ಲಿರುವ ಪ್ರಸಿದ್ಧ ಟೀ ಸ್ಟಾಲ್‌ನಲ್ಲಿ ಟೀ(Tea) ಕುಡಿಯಲು ರಸ್ತೆಯ ಮಧ್ಯದಲ್ಲಿಯೇ ಬಸ್‌ ಅನ್ನು ನಿಲ್ಲಿಸಿ ಟೀ ಸವಿದಿದ್ದಾರೆ.

ಭಾರತದಲ್ಲಿ(India) ಚಹಾಗೆ ಒಂದು ವಿಶೇಷ ಸೆಳೆತವಿದೆ. ಹೌದು, ಅನೇಕ ಜನರ ದಿನ ಪ್ರಾರಂಭವಾಗುವುದು ಒಂದು ಕಪ್‌ ಚಹಾದಿಂದ,

ಇನ್ನು ಕೆಲವರ ದಿನ ಚಹಾದಿಂದಲೇ ದಿನದ ಅಂತ್ಯ ಕೂಡ ಆಗುವುದು! ನಿಜವಾಗಲೂ ಚಹಾ ಜನರ ದಿನಚರಿ ಮೇಲೆ ಅಂಥ ಪ್ರಭಾವ ಬೀರಿದೆಯಾ ಎಂಬ ಪ್ರಶ್ನೆಗೆ

ಈ ಘಟನೆ ಕೂಡ ಒಂದು ಅದ್ಬುತ ನಿದರ್ಶನ ಎಂದರೆ ತಪ್ಪಾಗಲಾರದು. ಅಷ್ಟಕ್ಕೂ ಈ ಘಟನೆ ಏನು? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಸಾಮಾಜಿಕ ಜಾಲತಾಣವಾದ(Social media) ಟ್ವಿಟರ್‌(Twitter) ನಲ್ಲಿ ವೈರಲ್‌ ಆಗಿರುವ ಈ ವೀಡಿಯೊವನ್ನು ಶುಭ್ ಎಂಬ ಬಳಕೆದಾರರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿ ಡಿಟಿಸಿ ಬಸ್ ಡ್ರೈವರ್ ತಮ್ಮ ನೆಚ್ಚಿನ ಟೀ ಅಂಗಡಿಯಲ್ಲಿ ಟೀ ಸವಿಯಲು ಮನಸ್ಸಾಗಿ, ಚಾಲನೆ ಮಾಡುತ್ತಿದ್ದ ಬಸ್‌ ಅನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ,

ಅನ್ಯ ಸವಾರರ ಬಗ್ಗೆ ಹಿಂದೆ ಮುಂದೆ ಯೋಚಿಸದೆ ಚಹಾ ಕುಡಿಯಲು ಓಡಿ ಹೋಗಿದ್ದಾರೆ.

ವೀಡಿಯೋ ಮಾಹಿತಿ ಪ್ರಕಾರ, ಚಹಾ ಸವಿಯಲು ಹೆಸರುವಾಸಿಯಾಗಿರುವ ಸುದಾಮಾ ಟೀ ಸ್ಟಾಲ್‌ನಿಂದ(Sudama tea stall) ಚಹಾ ಕುಡಿಯಲು ಬಸ್ ಚಾಲಕ ರಸ್ತೆ ಮಧ್ಯದಲ್ಲಿ ಬಸ್‌ ಅನ್ನು ನಿಲ್ಲಿಸಿದ್ದಾರೆ.

ಇದು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ್ದಲ್ಲದೇ, ರಸ್ತೆಯ ಮಧ್ಯೆ ಟ್ರಾಫಿಕ್ ಜಾಮ್(driver stopped bus) ಉಂಟು ಮಾಡಿದಕ್ಕೆ ಬಸ್ ಚಾಲಕನನ್ನು ಹಲವರು ಖಂಡಿಸಿದರೆ,

ಇನ್ನು ಕೆಲವರು ಅವರ ಚಹಾ ಪ್ರೀತಿಯನ್ನು ಮೆಚ್ಚಿ ಮಾತನಾಡಿದ್ದಾರೆ. ಈ ಒಂದು ವೀಡಿಯೊಗೆ ಪಾಸಿಟಿವ್‌ ಮತ್ತು ನೆಗಟಿವ್‌ ಕಮೆಂಟ್‌ ಎರಡು ಸಮಬಲವಾಗಿ ಬಂದಿದ್ದು,

ನೆಟ್ಟಿಗರ ಗಮನ ಸೆಳೆದು ವೀಡಿಯೋ ಭಾರಿ ವೈರಲ್‌ ಆಗಿದೆ. ಟ್ವಿಟರ್‌ನಲ್ಲಿ ಮೂರು ದಿನಗಳ ಹಿಂದೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಅಂದಿನಿಂದ ಇಲ್ಲಿಯವರೆಗೂ 69,200 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 3,200 ಕ್ಕೂ ಹೆಚ್ಚು ಲೈಕ್‌ಗಳು ಪಡೆದುಕೊಂಡಿದೆ.

ಈ ವೀಡಿಯೊಗೆ ಹಲವು ನೆಟ್ಟಿಗರು ಹಲವಾರು ರೀತಿಯಲ್ಲಿ ಕಮೆಂಟ್‌ ಮಾಡಿದ್ದು, ಪಾಸಿಟಿವ್‌ ಮತ್ತು ನೆಗೆಟಿವ್ ಕಮೆಂಟ್‌ಗಳು ಹೀಗಿದೆ ನೋಡಿ.

ಕೆಲವು ದಿನಗಳ ಹಿಂದೆ ರೈಲ್ವೇ ಮಾರ್ಗದ ಬಳಿ ಮಾರಾಟಗಾರರಿಂದ ತಿಂಡಿ ಪ್ಯಾಕ್ ಸಂಗ್ರಹಿಸಲು ಎಕ್ಸ್‌ಪ್ರೆಸ್ ರೈಲು ಚಾಲಕ ಉದ್ದೇಶಪೂರ್ವಕವಾಗಿ ರೈಲನ್ನು ನಿಲ್ಲಿಸಿದ ವೀಡಿಯೊ ಇತ್ತು.

ಅದಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ! ಎಂದು ಅಭಿಪ್ರಾಯಿಸಿದ್ದಾರೆ.

ಬಸ್‌ ಚಾಲಕ ಬಹುಶಃ ಎಲ್ಲರ ನೆಚ್ಚಿನ ಸುದಾಮಾ ಟೀ ಸ್ಟಾಲ್ ಬಳಿ ಇದ್ದಂತೆ ಕಾಣಿಸುತ್ತಿದೆ ಎಂದು ಕಮೆಂಟ್‌ ಮಾಡಿದ್ದಾರೆ.

ಮತ್ತೊಬ್ಬರು ಈ ವೀಡಿಯೊಗೆ “ಪ್ರಿಯೊರಿ-ಟೀ”(Priory tea) ಎಂದು ಶೀರ್ಷಿಕೆಯನ್ನು ನೀಡಿ ತಮ್ಮ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ನಾನು ಅನುಮೋದಿಸುವ ಏಕೈಕ ರೀತಿಯ ಡ್ರಿಂಕ್ ಅಂಡ್ ಡ್ರೈವ್(Drink and drive) ಅಂದರೇ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದಿಷ್ಟು ಪಾಸಿಟಿವ್‌ ಅಭಿಪ್ರಾಯಗಳಾದರೇ, ನೆಗಟಿವ್‌ ಹೀಗಿದೆ ನೋಡಿ, ದಯವಿಟ್ಟು ಒಂದು ನಿರ್ದಿಷ್ಟ ಸಮಯದವರೆಗೆ ಅವರ ಪರವಾನಗಿಯನ್ನು ಅಮಾನತುಗೊಳಿಸಿ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇಂತಹ ಕೃತ್ಯಗಳು ಶಿಕ್ಷಿಸದಿದ್ದರೆ ಮತ್ತೆ ಮತ್ತೆ ಹೆಚ್ಚಳಕ್ಕೆ ಕಾರಣವಾಗುತ್ತವೆ. ನಾವು ಇದನ್ನು ಒಂದು ಮೀಮ್ ಅಥವಾ ಜೋಕ್ ಎಂದು ತೆಗೆದುಕೊಳ್ಳಬಾರದು. ಈ ವೀಡಿಯೊಗಳನ್ನು ಪ್ರೋತ್ಸಾಹಿಸಬಾರದು ಎಂದು ಕಮೆಂಟ್‌ ಮಾಡಿದ್ದಾರೆ.

Exit mobile version