ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂದಲ ಸೃಷ್ಟಿಸಿದ ಡ್ರೋನ್ ಹಾರಾಟ: ತನಿಖೆ ಶುರು

Bengaluru: ವಿಮಾನಗಳ ಪಕ್ಕದಲ್ಲೆ ಡ್ರೋನ್ (Drone flying in Blore Airport) ಹಾರಿದ ಪರಿಣಾಮ ಕೆಲ‌ಕಾಲ ಗೊಂದಲದ ವಾತಾವರಣ ಉಂಟಾಗಿದ್ದು, ಟೇಕ್ ಆಫ್ ಸ್ಥಳದಿಂದ 6 ನಾಟಿಕಲ್

ಮೈಲ್ ದೂರದಲ್ಲಿ ಡ್ರೋನ್ ಹಾರಿದೆ. ಡ್ರೊನ್ ಹಾರಾಟ ಕಂಡು ಎಟಿಸಿ ಕಂಟ್ರೋಲ್ಗೆ‌ ಪೈಲೆಟ್‌ಗೆ (Drone flying in Blore Airport) ಮಾಹಿತಿ ನೀಡಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ (Run Way) ಬಳಿ ಅನಾಮಿಕ ಡ್ರೋನ್ ಹಾರಾಟ ನಡೆಸಿದ್ದು, ವಿಮಾನಗಳ ಪಕ್ಕದಲ್ಲೆ ಡ್ರೋನ್ ಹಾರಿದ ಪರಿಣಾಮವಾಗಿ ಕೆಲ‌ಕಾಲ ಆತಂಕದ

ವಾತಾವರಣ ಉಂಟಾಗಿದೆ. ಟೇಕ್ ಆಫ್ ಸ್ಥಳದಿಂದ 6 ನಾಟಿಕಲ್ ಮೈಲ್ ದೂರದಲ್ಲಿ ಡ್ರೋನ್ ಹಾರಿದ್ದು, ಡ್ರೊನ್ ಹಾರಾಟ ಕಂಡು ಎಟಿಸಿ ಕಂಟ್ರೋಲ್ಗೆ‌ (ATC Control) ಪೈಲೆಟ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಿಂದ (Bengaluru) ದೆಹಲಿ ಮತ್ತು ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಗಳ ಹಾರಾಟ ಸ್ಥಳದಲ್ಲೆ ಆರೆಂಜ್ ಮತ್ತು ಹಳದಿ ಬಣ್ಣದ ಡ್ರೋನ್ ಹಾರಿದೆ. ಇನ್ನು ಈ ನಿಷೇಧದ ನಡುವೆಯು

ಡ್ರೋನ್ ಹಾರಿದ್ದು ಹೇಗೆ? ಎಂದು ಏರ್ಪೋಟ್ (Airport) ಭದ್ರತಾ ಪಡೆ ಹಾಗೂ ಎಟಿಸಿ ಕಂಟ್ರೋಲ್ ಟೀಂ ನಿಂದ ತನಿಖೆ ಶುರುವಾಗಿದೆ.

ಅನಾಮಿಕ ಡ್ರೋನ್ ಹಾರಾಟದ ಬಗ್ಗೆ ಪೊಲೀಸರಿಗೆ ಏರ್ಪೋಟ್ ಸಿಬ್ಬಂದಿ ದೂರು‌ ನೀಡಿದ್ದು, ಕೂಡಲೇ ಡ್ರೋನ್ ಹಾರಾಟದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ

ನಿಲ್ದಾಣದಲ್ಲಿ ಅಷ್ಟೊಂದು ಸೆಕ್ಯೂರಿಟಿ (Security) ನಡುವೆಯೂ ಡ್ರೋನ್ ಹಾರಲು ಹೇಗೆ ಸಾಧ್ಯ ಎಂಬ ಅನುಮಾನ ಇದೀಗ ಶುರುವಾಗಿದೆ.

ಇದನ್ನು ಒದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂದಲ ಸೃಷ್ಟಿಸಿದ ಡ್ರೋನ್ ಹಾರಾಟ: ತನಿಖೆ ಶುರು

ಭವ್ಯಶ್ರೀ ಆರ್.ಜೆ

Exit mobile version