ಎಲೆ ಮರೆ ಕಾಯಿಯಂತಿದ್ದ, ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ದುರ್ಗಾಬಾಯಿ ದೇಶ್ ಮುಖ್

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಸಾಧಾರಣವಾಗಿ ಹೋರಾಟ ಮಾಡಿ ದೇಶಕ್ಕಾಗಿ ತನ್ನೆಲ್ಲವನ್ನು ತ್ಯಾಗ ಮಾಡಿ ಅಪರಿಚಿತರಾಗಿ ಉಳಿದಿರುವ ವಿಶೇಷ ವ್ಯಕ್ತಿಗಳನ್ನು ಪರಿಚಯಿಸುವ ವಿಶೇಷ ಕಾರ್ಯಕ್ರಮವೇ “ಸ್ವಾತಂತ್ರ್ಯ ಸೇನಾನಿ”. ಇವತ್ತಿನ ಈ ವಿಶೇಷ ಸಂಚಿಕೆಯಲ್ಲಿ ನಾವು  ದುರ್ಗಾಬಾಯಿ ಅನ್ನೋ ಧೀರ ಮಹಿಳೆಯ ಬಗ್ಗೆ ತಿಳಿಯೋಣ.

ದುರ್ಗಾಬಾಯಿ, ಮೂಲತ: ಆಂಧ್ರಪ್ರದೇಶದ ರಾಜಮುಂಡ್ರಿಯವರು. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಇವರಿಗೆ 8ನೇ ವಯಸ್ಸಿಗೆ ಮದುವೆಯಾಯಿತು. ಹಾಗಾಗಿ ಇವರ ಶಿಕ್ಶಣ ಅರ್ಧಕ್ಕೆ ನಿಂತು ಹೋಯಿತು. ಇವರ ಪತಿ ಚಿಂತಾಮನ್ ದೇಶ್ಮುಕ್ ಒಬ್ಬರು ಅಪ್ಪಟ ದೇಶಪ್ರೇಮಿ.

ಮಹಿಳೆಯರ ಸ್ಥಾನಮಾನವನ್ನ ಸಮಾಜದಲ್ಲಿ ಹೆಚ್ಚಿಸುವುದಕ್ಕಾಗಿ 1937ರಲ್ಲಿ ಇವರು ಆಂದ್ರ ಮಹಿಳಾ ಸಭೆಯನ್ನು ಸ್ಥಾಪಿಸಿದರು. ಅವರು ಮಹಾತ್ಮಾ ಗಂಧಿಯ ಅನುಯಾಯಿಯಾಗಿದ್ದರು.  ಅನೇಕ ಸ್ವಾತಂತ್ರ್ಯ ಚಳುವಳಿಗಳಲ್ಲಿ ಪಾಲ್ಗೊಂಡು ಹೋರಾಟವನ್ನೂ ನಡೆಸಿದ್ದಾರೆ. ಜೆತೆಹೆ ಉಪ್ಪಿನ ಸತ್ಯಾಗ್ರಹದ ಮಹಿಳಾ ಚಳುವಳಿಯ ಮುಖ್ಯಸ್ಥರೂ ಆಗಿದ್ದರು. ಹೀಗಾಗಿ ಅವರು 3 ವರ್ಷ ಜೈಲುವಾಸವನ್ನೂ ಅನುಭವಿಸಿದ್ದಾರೆ.

ಇದಾದ ನಂತರವೇ ಅವರು ತಮ್ಮ ಶಿಕ್ಷಣ ಜೀವನವನ್ನು ಪ್ರಬಲವಾಗಿ ಆರಂಭಿಸಿದರು. 1930ರಲ್ಲಿ ಅಂಧ್ರ ಬಿ ಎ ಎಂ ಎ ಮುಗಿಸಿದ್ದರು. 1942ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು ಮದ್ರಾಸ್ ಹೈಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ.

ಭಾರತ ಸಂವಿಧಾನ ಸಭೆಯ ಏಕೈಕ ಮಹಿಳಾ ಸದಸ್ಯೆ ಇವರು. ಸಮಾಜ ಕಲ್ಯಾಣ ಯೋಜನೆಗಳನ್ನು ರೂಪಿಸುವಲ್ಲಿ ಇವರ ಪಾತ್ರ ಮುಖ್ಯವಾಗಿತ್ತು. ಇವರು ನಿರ್ಗತಿಕ ಮಹಿಳೆಯರ ಮತ್ತು ಮಕ್ಕಳ ಶಿಕ್ಷಣ, ಪುನರ್ವಸತಿ ಪರ ಮತ್ತು ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದರು.

1953ರಲ್ಲಿ ಚೀನಾಗೆ ಭೇಟಿ ನೀಡಿದ ಇವರು ಕೌಟುಂಬಿಕ ನ್ಯಾಯಾಲಯಭಾರತದಲ್ಲೂ  ಸ್ಥಾಪನೆಯಾಗಬೇಕು ಅಂತ ಮೊದಲು ಧ್ವನಿ ಎತ್ತಿದರು. ಇವರೇ ಕೇಂದ್ರದಲ್ಲಿ ಮಹಿಳಾ ಶಿಕ್ಷಣ ಇಲಾಖೆಯನ್ನು ರಚಿಸಿದವರು. ಇದರ ಜೊತೆ ಹೆಣ್ಣು ಮಕ್ಕಳಿಗೆ 8ನೇ ತರಗತಿವರೆಗೆ ಉಚಿತ ಶಿಕ್ಷಣ ಒದಗಿಸಬೇಕೆಂದೂ ಒತ್ತಾಯಿಸಿದರು. 1963ರಲ್ಲಿ ದುರ್ಗಾಬಾಯಿ ದೇಶ್ಮುಖ್ ಆಸ್ಪತ್ರೆಯನ್ನೂ ಇವರು ನಿರ್ಮಿಸಿದರು.ಇವರು ಭಾರತ ಸರಕಾರದಿಂದ ಪದ್ಮವಿಭೂಷಣ, ನೆಹರೂ ಸಾಕ್ಷರತಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.   

Exit mobile version