ಕೋಪವನ್ನು ನಿಯಂತ್ರಿಸಲು ಈ ಆಹಾರಗಳನ್ನು ಸೇವಿಸಿ!

anger

ಕೆಲವರು ಬಹಳ ಬೇಗ ಕೋಪಗೊಳ್ಳುತ್ತಾರೆ. ಕೆಲವರಲ್ಲಿ ಕೋಪ ನಿಯಂತ್ರಣಕ್ಕೆ ಬರುವುದೇ ಇಲ್ಲ. ಕೋಪಗೊಳ್ಳುವಿಕೆಯಿಂದ ಹಲವು ರೋಗಗಳು ಬರುವುದಲ್ಲದೇ ಸಂಬಂಧಗಳನ್ನು ಬಹುಬೇಗ ಕಡಿದುಕೊಳ್ಳಬೇಕಾಗುತ್ತದೆ. ಹಾಗಾದರೆ ಕೋಪವನ್ನು ನಿಯಂತ್ರಿಸಲು ಕೆಲವು ಆಹಾರಗಳಿವೆ. ಕೋಪ ನಿಯಂತ್ರಿಸಲು ಸೇವಿಸಬೇಕಾದ ಆಹಾರ ಯಾವುವು ಎಂದು ನೋಡುವುದಾದರೆ.


• ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು, ಪಾಲಕ್ ಮುಂತಾದ ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.
• ಸಾಧ್ಯವಾದಷ್ಟು, ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ.
• ಹಣ್ಣನ್ನು ಜ್ಯೂಸ್ ತೆಗೆದು ಕುಡಿಯುವ ಬದಲು, ಹಾಗೆಯೇ ತಿನ್ನಿ.
• ವಿಟಮಿನ್ ಡಿ ಪಡೆಯಲು ನಿಮ್ಮ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ.
• ನಿಮ್ಮ ಆಹಾರದಲ್ಲಿ ವಿವಿಧ ಬಣ್ಣಗಳ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.
• ಅಣಬೆಗಳು, ಬೀಜಗಳು, ವಾಲ್‌ನಟ್‌ಗಳಂತಹ ಒಮೆಗಾ 3 ಫ್ಯಾಟಿ ಆಸಿಡ್ ಇರುವಂಥಹ ಆಹಾರವನ್ನು ಸೇವಿಸಿ.
• ಮೊಟ್ಟೆ (Egg), ಮೀನು (Fish) ಮತ್ತು ಕೋಳಿಯಂತಹ ಡೋಪಮೈನ್ ಆಹಾರವು ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕೋಪದಿಂದ ಉಂಟಾಗುವ ರೋಗಗಳು.
• ಹೃದಯಾಘಾತ
• ಪಾರ್ಶ್ವವಾಯು
• ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ
• ಚರ್ಮದ ತೊಂದರೆಗಳು
• ನಿದ್ರಾಹೀನತೆ
• ತೀವ್ರ ರಕ್ತದೊತ್ತಡ
• ಜೀರ್ಣಕಾರಿ ತೊಂದರೆಗಳು
• ಆತಂಕ ಮತ್ತು ಖಿನ್ನತೆ
• ಮೈಗ್ರೇನ್ • ನಕಾರಾತ್ಮಕ ಭಾವನೆಗಳು
• ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಪರಿಸ್ಥಿತಿಗಳ ಮೇಲೆ ತೊಂದರೆಗಳಾಗುತ್ತವೆ.


ಈ ಆಹಾರಗಳಿಂದ ದೂರವಿರಿ :


ಡ್ರೈಪ್ರೂಟ್ಸ್
: ಡ್ರೈ ಪ್ರೂಟ್ಸ್ ಗಳು (Dry fruits) ಬಹಳ ಹೀಟ್ ಆಗಿರುತ್ತವೆ. ಇದನ್ನು ಸೇವಿಸುವುದರಿಂದ ಮನಸ್ಸಿನಲ್ಲಿ ಕೋಪ ಹೆಚ್ಚಾಗಬಹುದು. ಹಾಗಾಗಿ ಡ್ರೈ ಫ್ರುಟ್ಸ್ ಅನ್ನು ಹಾಗೆಯೇ ತಿನ್ನಬೇಡಿ. ಇದನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದ ನಂತರ ತಿನ್ನುವುದು ಉತ್ತಮ.


ಬದನೆ : ಬದನೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬೇಡಿ. ಏಕೆಂದರೆ ಅದು ಕೋಪವನ್ನು ಹೆಚ್ಚಿಸುತ್ತದೆ.


ಟೊಮೆಟೊ : ಟೊಮೆಟೊ (Tomato) ನಿಮ್ಮ ದೇಹದಲ್ಲಿ ಶಾಖವನ್ನು ಹೆಚ್ಚಿಸಬಹುದು ಮತ್ತು ಇದನ್ನು ಹೆಚ್ಚು ತಿನ್ನುವುದರಿಂದ ಕೋಪವೂ ಬರುತ್ತದೆ. ಹಾಗಾಗಿ ನಿಮಗೆ ಬೇಗ ಕೋಪಗೊಳ್ಳುವವರಾದರೆ, ಟೊಮೆಟೊವನ್ನು ಹೆಚ್ಚು ತಿನ್ನಬೇಡಿ.


ಕೋಪವನ್ನು ಹೇಗೆ ನಿಯಂತ್ರಿಸಬಹುದು :


1 ರಿಂದ 10 ರವರೆಗೆ ಎಣಿಸಿ. ಕೋಪವನ್ನು ವ್ಯಕ್ತಪಡಿಸುವ ಮೊದಲು 10 ರವರೆಗೆ ಎಣಿಸಲು ಹೆಚ್ಚಿನ ತಜ್ಞರು ಸೂಚಿಸುತ್ತಾರೆ. “ನರವೈಜ್ಞಾನಿಕ ಕೋಪ ಪ್ರತಿಕ್ರಿಯೆ ಎರಡು ಸೆಕೆಂಡುಗಳಿಗಿಂತ ಕಡಿಮೆ ಇರುತ್ತದೆ” ಎಂದು ಸಂಶೋದೆನಂಗಳು ತಿಳಿಸಿವೆ. ಆದ್ದರಿಂದ, ಕೋಪವನ್ನು ನಿಗ್ರಹಿಸಲು ಆ ಸ್ವಲ್ಪ ಸಮಯದ ಚೌಕಟ್ಟು ಸಾಕು. ಆ ಕ್ಷಣದಲ್ಲಿ ಪ್ರತಿಕ್ರಿಯಿಸುವ ಮೊದಲು ಈ 10 ರವರೆಗಿನ ಎಣಿಕೆ ಅವನಿಗೆ ಅಥವಾ ಅವಳಿಗೆ ಯೋಚಿಸಲು ಸಹಾಯ ಮಾಡುತ್ತದೆ.


ವ್ಯಾಯಾಮ : ದೈಹಿಕ ಚಟುವಟಿಕೆಯು ನಿಮ್ಮ ಕೋಪಕ್ಕೆ ಕಾರಣವಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಕೋಪವು ಹೆಚ್ಚಾಗುತ್ತಿದೆ ಎಂದು ನೀವು ಭಾವಿಸಿದರೆ, ಚುರುಕಾದ ನಡಿಗೆ ಅಥವಾ ಓಟಕ್ಕೆ ಹೋಗಿ, ಅಥವಾ ಇತರ ಆನಂದದಾಯಕ ದೈಹಿಕ ಚಟುವಟಿಕೆಗಳನ್ನು ಮಾಡಲು ಸ್ವಲ್ಪ ಸಮಯ ಕಳೆಯಿರಿ.


ಸಮಯ ತೆಗೆದುಕೊಳ್ಳಿ: ಜೀವನದ ಒತ್ತಡಗಳು ನಿಮ್ಮ ಮೇಲೆ ಬರುತ್ತಿದ್ದರೆ, ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಯಮಿತ ವಿರಾಮಗಳಲ್ಲಿ ವೇಳಾಪಟ್ಟಿ ಮಾಡಿ, ವಿಶ್ರಾಂತ ಜಾಗದಲ್ಲಿ ನಡೆಯಲು ಹೋಗಿ ಅಥವಾ ನೀವು ಆನಂದಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ನಿಮಗೆ ಮತ್ತು ನಿಮ್ಮ ಹವ್ಯಾಸಗಳಿಗೆ ಸಮಯ ಕೊಡುವುದರಿಂದ ಜೀವನದಲ್ಲಿನ ಒತ್ತಡ ಕಡಿಮೆಯಾಗುತ್ತದೆ ಜೊತೆಗೆ ಕೋಪವು ನಿಯಂತ್ರಣದಲ್ಲಿರುತ್ತದೆ.

Exit mobile version