ಲೋಕಸಭಾ ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ತಡೆಗಟ್ಟಲು ಆನ್‌ಲೈನ್ ವಹಿವಾಟಿನ ಮೇಲೆ ಕಣ್ಣಿಟ್ಟ ಚುನಾವಣಾ ಆಯೋಗ!

Bengaluru: ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲೆ ಎಲೆಕ್ಷನ್ ಸಮಯದಲ್ಲಿ ಅಭ್ಯರ್ಥಿಗಳು, ಜನರಿಗೆ ಹಣ ಸೇರಿದಂತೆ ಯಾವುದೇ ರೀತಿಯಲ್ಲಾದರೂ ಲಂಚ ನೀಡಿ ಮತಗಳನ್ನು ಸೆಳೆಯಲು ಯತ್ನಿಸುವುದು ಸಾಮಾನ್ಯ. ಅದರಲ್ಲೂ ಈಗ ಹಣ ,ಸೀರೆ, ಕುಕ್ಕರ್ ಮುಂತಾದ ಉಡುಗೊರೆ ನೀಡಿದರೆ ಸಿಕ್ಕಿ ಬೀಳುವ ಭಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳಾದ ಫೋನ್ ಪೇ, ಗೂಗಲ್ ಪೇ, ಯುಪಿಐ (Phone pay, Google pay, UPI) ಮೂಲಕ ಹಣ ರವಾನೆ ಮಾಡಬಹುದು ಎಂದು ಯೋಚಿಸುತ್ತಾರೆ.

ಹೀಗೆ ಮಾಡಿದರೆ ಗಮನಕ್ಕೂ ಬರೋದಿಲ್ಲ ಎಂದು ಮನೆಯಲ್ಲಿರುವ ಜನರಿಗಿಷ್ಟು ಎಂದು ಹಣ ನೀಡುತ್ತಿದ್ದರೆ ಸಿಕ್ಕಿ ಬೀಳೋದು ಖಚಿತ. ಎಕೆಂದರೆ ಚುನಾವಣಾ ಆಯೋಗ ಅಲರ್ಟ್ ಆಗಿದ್ದು ಆಪ್‌ಗಳ ಮೂಲಕ ನಡೆಯುವ ಹಣ ವರ್ಗಾವಣೆ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮತದಾರರಿಗೆ ಯಾವುದೇ ಸ್ವರೂಪದಲ್ಲಿ ಆಮಿಷ ಒಡ್ಡಿ ಮತಗಳನ್ನು ಸೆಳೆಯಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಈಗಾಗಲೇ ಎಚ್ಚರಿಕೆ ನೀಡಿದೆ.

ಇಷ್ಟಾದರೂ ಕೂಡಾ ಕೆಲವು ರಾಜಕಾರಣಿಗಳು ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರಿಗೆ ಹಣ ರವಾನೆ ಮಾಡುತ್ತಿದ್ದಾರೆ. ಅದರಲ್ಲೂ ತಾಂತ್ರಿಕವಾಗಿ ಸಾಕಷ್ಟು ಜ್ಞಾನ ಸಂಪಾದಿಸಿರುವ ಬೆಂಗಳೂರು (Bengaluru) ಜನತೆಗೆ ವಿನೂತನ ತಂತ್ರಜ್ಞಾನದ ಮೂಲಕ ಹಣ ರವಾನಿಸೋದು ಕಷ್ಟವೇನಲ್ಲ. ಹೀಗಾಗಿ, ಚುನಾವಣಾ ಆಯೋಗ ಇದಕ್ಕಾಗಿ ಪ್ರತ್ಯೇಕ ತಂಡವನ್ನೇ ರಚನೆ ಮಾಡಿ ನಿಗಾ ವಹಿಸಿದೆ. ಫೋನ್ ಪೇನ್ ಪೇ, ಗೂಗಲ್ ಪೇ ಹಾಗೂ ಪೆಟಿಎಂ ಸಂಸ್ಥೆಗಳ ಜೊತೆ ಸಭೆ ಮಾಡಿ ಚರ್ಚಿಸಿ ಪ್ರತಿ ದಿನದ ವಹಿವಾಟು, ಯಾವುದೇ ವ್ಯಕ್ತಿಯಿಂದ ನಿರ್ದಿಷ್ಟ ಮೊತ್ತದ ಹಣ ಹೆಚ್ಚಿನ ಸಂಖ್ಯೆಯ ಜನರಿಗೆ ರವಾನೆ ಮಾಡುತ್ತಿದ್ರೆ ಅಂಥವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಮುಂದಾಗಿದೆ.

ಹೆಚ್ಚಿನ ಮತ ಪಡೆದು ಗೆದ್ದು ಬೀಗಲು ವಾಮ ಮಾರ್ಗವನ್ನು ಅನುಸರಿಸುತ್ತಿದ್ದರೆ ಮತದಾರರನ್ನು ಓಲೈಕೆ ಮಾಡಲು ಪೋನ್ ಪೇ, ಗೂಗಲ್ ಪೇ, ಯುಪಿಐ ತಂತ್ರಜ್ಞಾನದ ನೆರವಿನೊಂದಿಗೆ ಆದಷ್ಟು ಬೇಗ ಬಹುತೇಕ ಜನರಿಗೆ ಹಣ ಕಳಿಸಬಹುದು, ಯಾರಿಂದಲೂ ಪತ್ತೆ ಮಾಡಲು ಸಾಧ್ಯವಿಲ್ಲ ಎಂಬ ಭ್ರಮೆಯಲ್ಲಿದ್ದರೆ ಬಿಟ್ಟು ಬಿಡಿ ಆಯೋಗ ಪ್ರತಿಯೊಂದು ಡಿಜಿಟಲ್ (Digital) ವಹಿವಾಟಿನ ಮೇಲೂ ಹದ್ದಿನ ಕಣ್ಣಿಟ್ಟಿದ್ದು ಅನುಮಾನ ಬಂದ ಅಕೌಂಟ್ ಗಳ ಮೇಲೆ ತನಿಖೆ ನಡೆಸಲು ಕೂಡಾ ಪ್ಲಾನ್ ಮಾಡಿಕೊಂಡಿದೆ. ಹಾಗಾಗಿ ನ್ಯಾಯ ಮಾರ್ಗದಲ್ಲಿ ಸಾಗಿ ಜನರನ್ನು ಮತ ನೀಡುವಂತೆ ಕೇಳಿ ಅದರ ಹೊರತಾಗಿ ಆಮಿಷ ತೋರಿಸಿ ಮಂತ್ರಿ ಪದವಿಗೆ ಏರಬೇಡಿ ಎಂದಿದೆ ಚುನಾವಣಾ ಆಯೋಗ.

Exit mobile version