ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ, ಅದು ಭಾರತದ ಹೆಮ್ಮೆ : ಚುನಾವಣಾ ಆಯುಕ್ತ ಸುಶೀಲ್ ಚಂದ್ರ!

EVM

ವಿದ್ಯುನ್ಮಾನ್ ಮತಯಂತ್ರಗಳನ್ನು ಯಾವುದೇ ತಂತ್ರಜ್ಞಾನ(Technology) ಬಳಸಿ ಫಲಿತಾಂಶ ತಿರುಚಲು ಸಾಧ್ಯವಿಲ್ಲ. ಅದೇ ರೀತ ಇವಿಎಂ(EVM) ಯಂತ್ರಗಳನ್ನು ಹ್ಯಾಕ್(Hack) ಮಾಡಲು ಸಾಧ್ಯವೇ ಇಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ(Election Commission) ಸುಶೀಲ್ ಚಂದ್ರ(Sushil Chandra) ಅಭಿಪ್ರಾಯಪಟ್ಟಿದ್ದಾರೆ.


ದೆಹಲಿಯ ಬುಕ್ತಾವಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಇಂಟಿಗ್ರೇಟೆಡ್ ಎಲೆಕ್ಷನ್ ಕಾಂಪ್ಲೆಕ್ಸ್’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕು ದಶಕಗಳ ಹಿಂದೆ ವಿದ್ಯುನ್ಮಾನ್ ಮತಯಂತ್ರಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಾಗಿನಿಂದ ಇಲ್ಲಿಯವರೆಗೆ ಅವು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿವೆ. ನಿಖರ ಮತ್ತು ಕ್ಷಿಪ್ರ ಫಲಿತಾಂಶ ನೀಡಿ ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿಕೊಂಡು ಬಂದಿವೆ ಎಂದರು.

ಇನ್ನು ಕ್ಷಿಪ್ರ ಮತ್ತು ನಿಖರ ಫಲಿತಾಂಶ ನೀಡುತ್ತಿರುವ ವಿದ್ಯುನ್ಮಾನ ಮತಯಂತ್ರಗಳು ಭಾರತದ ಹೆಮ್ಮೆ. ಅವುಗಳ ಕಾರ್ಯವಿಧಾನವನ್ನು ನೋಡಲು ಇಂದು ಇಡೀ ಜಗತ್ತು ಭಾರತಕ್ಕೆ ಆಗಮಿಸುತ್ತಿದೆ. ಭಾರತದ ಇವಿಎಂಗಳನ್ನು ಹ್ಯಾಕ್ ಮಾಡುವ ಅಥವಾ ತಿರುಚುವ ತಂತ್ರಜ್ಞಾನ ಜಗತ್ತಿನಲ್ಲಿ ಇಲ್ಲ. ಯಾವುದೇ ತಂತ್ರಜ್ಞಾನ ಬಳಸಿ ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಸುಶೀಲ್ ಚಂದ್ರ ಹೇಳಿದರು.

ಇಲ್ಲಿಯವರೆಗೆ ಭಾರತದಲ್ಲಿ ನಾಲ್ಕು ಲೋಕಸಭಾ ಚುನಾವಣೆಗಳನ್ನು ಮತ್ತು 37 ವಿಧಾನಸಭಾ ಚುನಾವಣೆಗಳನ್ನು ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿ ನಡೆಸಲಾಗಿದೆ. ನಿಖರ ಮತ್ತು ಕ್ಷಿಪ್ರ ಫಲಿತಾಂಶ ನೀಡುವ ಮೂಲಕ ನಮ್ಮ ಮತಯಂತ್ರಗಳು ಜಗತ್ತಿನ ಗಮನ ಸೆಳೆದಿವೆ. ಹೀಗಾಗಿ ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆಗಳನ್ನು ಅವರು ತಳ್ಳಿಹಾಕಿದರು. ಹ್ಯಾಕ್ ಮಾಡಲು ಸಾಧ್ಯವಿದ್ದರೆ ಅಂತವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

Exit mobile version