ಚುನಾವಣಾ ಬಾಂಡ್ ಹಗರಣ ಭಾಗ-1: ರಾಜಕೀಯ ಪಕ್ಷಗಳಿಗೆ ಅತೀ ಭ್ರಷ್ಟ, ಬೋಗಸ್‌ ಕಂಪನಿಗಳಿಂದೆಲ್ಲಾ ದೇಣಿಗೆ!

India: ಭಾರತ ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಚುನಾವಣಾ ಬಾಂಡ್ ಹಗರಣದ (Electoral Bond-Fraud Bond) ಕುರಿತು ಎಸ್.ಬಿ.ಐಗೆ (S.B.I) ಸರಿಯಾದ ಮಾಹಿತಿಯನ್ನು ನೀಡುವಂತೆ

ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದ್ದು ನಿಮಗೆಲ್ಲಾ ಗೊತ್ತಿರುವ ವಿಷಯ. ಆದರೆ ಈ ಪ್ರಕರಣದಲ್ಲಿ ರಾಜಕೀಯ ಪಕ್ಷಗಳಿಗೆ ಅತೀ ಹೆಚ್ಚು ದೇಣಿಗೆ ನೀಡಿದ ಕಂಪನಿಗಳ ಬಗ್ಗೆ ಹಾಗೂ

ದೇಣಿಗೆ ಪಡೆದ ರಾಜಕೀಯ (Electoral Bond-Fraud Bond) ಪಕ್ಷಗಳ ಕುರಿತಾದ ಮಾಹಿತಿ ಹೀಗಿದೆ…

ಈ ಪ್ರಕರಣವನ್ನು ಚುನಾವಣೆ ಮುಗಿಯುವವರೆಗೂ ಚುನಾವಣಾ ಬಾಂಡ್ ಹಗರಣ ಬಹಿರಂಗವಾಗದಂತೆ ತಡೆಯಲು ಕೇಂದ್ರ ಸರ್ಕಾರ (Central Government) ಹರಸಾಹಸ ಮಾಡಿತ್ತು. ವಿಧಿಯೊಂದು

ಬಗೆದರೆ ದೈವವೊಂದು ಬಗೆದಂತೆ ಎಂಬಂತೆ ಈ ಹಗರಣದಲ್ಲಿ ಮಹತ್ವದ ಪಾತ್ರವಹಿಸಿರುವ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಆಗಲೇ ಚುನಾವಣಾ ಬಾಂಡ್

ಹೆಸರಲ್ಲಿ ನಡೆಯುತ್ತಿದ್ದ ರಾಜಕೀಯ ಪಕ್ಷಗಳ ಕಳ್ಳಾಟ ಬಯಲಾಯಿತು. ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೆಸೆಯುತ್ತೇವೆ, ನಾ ಖಾವೂಂಗಾ, ನಾ ಖಾನೆದೂಂಗಾ (Na Khawoonga, Na Khanedunga),

ಭ್ರಷ್ಟಾಚಾರ ವಿರುದ್ಧ ಹೋರಾಡಿದ ನಾನಾ ಪಕ್ಷಗಳ ಹಣೆ ಬರಹ ಎಲ್ಲಾ ಜನರಿಗೆ ಗೊತ್ತಾಯಿತು. ಈ ರಾಜಕೀಯ ಪಕ್ಷಗಳು ಎಂತೆಂಥಾ ಭ್ರಷ್ಟ ಕಂಪೆನಿಗಳಿಂದ, ದೇಶದ್ರೋಹಿಗಂಳಿಂದ, ಮನೆ ಹಾಳರಿಂದ ದೇಣಿಗೆ

ಪಡೆದಿದ್ದಾರೆ ಅನ್ನುವ ಸತ್ಯ ತಿಳಿದಿದ್ದು.

ಖರೀದಿದಾರರ ಹೆಸರು: ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವಿಸಸ್
ಪಕ್ಷದ ಹೆಸರು: ಭಾರತೀಯ ಜನತಾ ಪಕ್ಷ
ದೇಣಿಗೆ ನೀಡಿದ ಒಟ್ಟು ಮೊತ್ತ: 1,368 ಕೋಟಿ ರೂ.

ಈ ಎಲೆಕ್ಟೋರಲ್ ಬಾಂಡ್ (Electoral Bond) ಅನ್ನುವುದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾರ್ಟಿನ್ ಅನ್ನುವ ಒಂದಂಕಿ ಲಾಟರಿ ಕಿಂಗ್‌ ಪಿನ್‌ ಬಗ್ಗೆ ನಿಮಗೆಲ್ಲಾ ನೆನಪಿರಬೇಕು.

ಈತ ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವಿಸಸ್ (Future Gaming And Hotel Services) ಅನ್ನುವ ನಕಲಿ ಕಂಪನಿ ಹೆಸರಲ್ಲಿ ಜನರಿಗೆ ಲಾಟರಿ, ಜೂಜು, ಮಟ್ಕಾ, ಗ್ಯಾಂಬ್ಲಿಂಗ್ (Gambling)

ಹುಚ್ಚು ಹತ್ತಿಸಿ ಮನೆಹಾಳು ಮಾಡುವುದು. ಯುವಕರನ್ನು ಸೆಳೆದು ಬರ್ಬಾದ್‌ ಮಾಡುತ್ತಿದ್ದನು.

ಈತನ ಮೇಲೆ ಸುಮಾರು ಕೇಸ್‌ಗಳು ದಾಖಲಾಗಿದ್ದು, ಸಿಬಿಐ, ಈಡಿ (CBI, ED) ಈತನ ಹಿಂದೆ ಯಾವಾಗಲು ಸುತ್ತುತಿರುತ್ತೆ. ಆದರೆ ಇದಕ್ಕೆಲ್ಲಾ ಈತ ಕಂಡುಕೊಂಡ ಪರಿಹಾರವೇ ಮಾರ್ಗ ಏನೆಂದರೆ

ಚುನಾವಣಾ ಬಾಂಡ್‌ ಖರೀದಿಸೋದು. ಈತ ಆಡಳಿತ ಪಕ್ಷವಾದ ಬಿಜೆಪಿಗೆ (BJP) 1,368 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಕೊಡುವ ಮೂಲಕ ಚುನಾವಣಾ ಬಾಂಡ್ ಖರೀದಿಸಿದ್ದಾನೆ. ಅದರಲ್ಲೂ

ಈತನೇ ದೊಡ್ಡ ಮೊತ್ತದ ದೇಣಿಗೆ ಕೊಟ್ಟವನಾಗಿದ್ದಾನೆ.

ಇನ್ನು ನೀವು ಅಂದುಕೊಂಡಿರುವ ಹಾಗೆ ಈತ ಇಷ್ಟೊಂದ ದೊಡ್ಡ ದೇಣಿಗೆ ಕೊಟ್ಟಿದ್ದಾನೆ ಅಂದರೆ ಈತನ ಕಂಪೆನಿಯೂ ಬಹಳ ದೊಡ್ಡದಾಗಿರಬೇಕು ಎಂದು ನೀವು ತಿಳಿದುಕೊಂಡಿದ್ದೀರಾ? ಅದು ನಿಮ್ಮ ತಪ್ಪು

ಕಲ್ಪನೆ. ಯಾಕಂದರೆ ಸಾವಿರಾರು ದೇಣಿಗೆ ಕೊಟ್ಟ ಕಂಪೆನಿಯ ವೆಬ್‌ಸೈಟ್‌ (Website) ಕೂಡಾ ಕೆಲಸ ಮಾಡುತ್ತಿಲ್ಲ ಅನ್ನುವುದೇ ಸತ್ಯ. ಹಗ್ಗಲಿ ಈಗ ನಿಮಗೆ ಇದೆಂತಾ ಫ್ರಾಡ್ ಕಂಪನಿ (Fraud Company)

ಅಂತ ಅರ್ಥ ಆಗಿರಬಹುದು.

ರಾಜಕೀಯ ಪಕ್ಷಗಳಿಗೆ ಈ ರೀತಿ ದೇಣಿಗೆ ರೂಪದಲ್ಲಿ ದಾನ ಮಾಡಿರುವ ಹತ್ತು ಹಲವು ಫ್ರಾಡ್‌, ದೇಶದ್ರೋಹಿ ಕಂಪನಿಗಳು ಚುನಾವಣಾ ಬಾಂಡ್‌ ಖರೀದಿಸಿ ತಮ್ಮ ಪಾಪವನ್ನೆಲ್ಲಾ ಕಳೆದುಕೊಂಡಿವೆ. ಆದರೆ ಈ

ಚುನಾವಣಾ ಬಾಂಡ್‌ನ ಫ್ರಾಡ್ ಮಾಡಿರುವಂತಹ ಇನ್ನಷ್ಟು ಕಂಪನಿಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.

ಇದನ್ನು ಓದಿ: ಬಿಜೆಪಿ ಒಂಥರಾ ವಾಷಿಂಗ್ ಮೆಷಿನ್ ಇದ್ದಂತೆ ಎಂದು ಟ್ವೀಟ್ ಮಾಡಿದ ಕಾಂಗ್ರೆಸ್.

Exit mobile version