ಚುನಾವಣಾ ಬಾಂಡ್ ಹಗರಣ ಭಾಗ-2: ಕಪ್ಪು ಹಣದ ವಿರುದ್ಧ ಸಮರ ಸಾರಿದವರು, ಕಪ್ಪು ಹಣವನ್ನು ದೇಣಿಗೆಯಾಗಿ ಪಡೆದರು, ಅದು ಹೇಗೆ?

ಇಡೀ ರಾಷ್ಟ್ರವೇ ಕಂಡು ಕೇಳರಿಯದಷ್ಟು ದೊಡ್ಡ ಹಗರಣವಾಗಿದೆ ಈ ಚುನಾವಣಾ ಬಾಂಡ್ ಹಗರಣ (Electoral Bond Scam-2). ಈ ಹಗರಣವನ್ನು ಬಗೆದಷ್ಟು ರಾಜಕೀಯ ಪಕ್ಷಗಳ ಮುಖವಾಡಗಳು

ಒಂದೊಂದಾಗಿಯೇ ಕಳಚುತ್ತಿವೆ. ಈಗಾಗಲೇ ಮಾರ್ಟಿನ್‌ (Martin) ಎನ್ನುವ ಲಾಟರಿ ಕಿಂಗ್‌ ತನ್ನ ನಕಲಿ ಕಂಪೆನಿಯಿಂದ ಸಾವಿರದ ಮುನ್ನೂರು ಕೋಟಿ ಹಣವನ್ನು ಬಿಜೆಪಿ ಪಕ್ಷವೊಂದಕ್ಕೆ ಕೊಟ್ಟ

ಕಥೆಯನ್ನು ವಿವರಿಸಿದ್ದೆವು. ಇನ್ನುಂದು ಕಾರ್ಪೋರೇಟ್‌ ಕಂಪೆನಿಯ (Electoral Bond Scam-2 )ಕರ್ಮಕಾಂಡದ ಕುರಿತಾದ ವಿವರಣೆ ಹೀಗಿದೆ.

ಕಪ್ಪು ಹಣವನ್ನೇ ಇಲ್ಲದಾಗಿಸುತ್ತೇವೆ. ಕಪ್ಪು ಹಣವನ್ನು ಮೂಲದಿಂದ ನಾಶ ಮಾಡುತ್ತೇವೆ ಅಂತ ಹೇಳಿ ನೋಟು ಬ್ಯಾನ್‌ (Currency Ban) ಮಾಡಿ, ಸಾಮಾನ್ಯ ಜನರ ಪ್ರಾಣ ಹಿಂಡಿದ ಪಕ್ಷವೇ ಇವತ್ತು

ಸಾವಿರಾರು ಕೋಟಿ ಕಪ್ಪು ಹಣವನ್ನು ದೇಣಿಗೆಯಾಗಿ ಸ್ವೀಕರಿಸಿದೆ. ಆ ಮೂಲಕ ದೇಶದ 140 ಕೋಟಿ ಜನರಿಗೆ ದ್ರೋಹ ಎಸಗಿದೆ. ಈ ಲಜ್ಜೆಗೆಟ್ಟ ರಾಜಕೀಯ ಪಕ್ಷಗಳು ಹೇಳೋದೊಂದು ಮಾಡೋದು ಒಂದು

ಅನ್ನುವ ಮಾತು ಮತ್ತೋಮ್ಮೆ ಸಾಬೀತಾಗಿದೆ. ಆ ಮೂಲಕ ಈ ರಾಜಕೀಯ ಪಕ್ಷಗಳು ದೇಶದ ಜನರ ಭಾವನೆಗಳ ಜೊತೆ ಚಲ್ಲಾಟ ಆಡುತ್ತಿದ್ದಾರೆ.

ಖರೀದಿದಾರರ ಹೆಸರು: ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್
ಪಕ್ಷದ ಹೆಸರು: ಭಾರತೀಯ ಜನತಾ ಪಕ್ಷ
ದೇಣಿಗೆ ನೀಡಿದ ಒಟ್ಟು ಮೊತ್ತ: 395 ಕೋಟಿ ರೂ.

ಒಟ್ಟು ಕೊಟ್ಟ ದೇಣಿಗೆ – 410 ಕೋ.ರೂ
ಬಿಜೆಪಿಗೆ ಕೊಟ್ಟ ದೇಣಿಗೆ – 395 ಕೋ.ರೂ
ಕಂಪೆನಿ ಒಟ್ಟು ಲಾಭ – 109 ಕೋ.ರೂ
ಹೆಚ್ಚುವರಿ ಕೊಟ್ಟ ಹಣ – 300 ಕೋ.ರೂ

‘ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್’ (QUICK SUPPLY CHAIN ​​PRIVATE LIMITED) ಇದು ರಾಜಕೀಯ ಪಕ್ಷಗಳಿಗೆ ಅತೀ ಹೆಚ್ಚು ದೇಣಿಗೆ ಕೊಟ್ಟ ಕಂಪೆನಿಗಳ ಪೈಕಿ ಮೂರನೇ ಸ್ಥಾನದಲ್ಲಿದ್ದು,

ಈ ಕಾರ್ಪೋರೇಟ್ ಕಂಪನಿ ಬಿಜೆಪಿಗೆ (BJP) 395 ಕೋಟಿ ರೂಪಾಯಿ ಸೇರಿದಂತೆ ಒಟ್ಟು 410 ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಿದೆ. ತಮಾಷೆ ವಿಷಯವೇನೆಂದರೆ ಈ ದೊಡ್ಡ ಕಂಪೆನಿಯ ವಾರ್ಷಿಕ

ಲಾಭಾ ಕೇವಲ 109 ಕೋಟಿ. ಹಾಗಾದರೆ ಈ ಕಂಪೆನಿ ಹೆಚ್ಚುವರಿಯಾಗಿ 300 ಕೋಟಿ ಹಣವನ್ನು ಎಲ್ಲಿಂದ ತಂದು ದಾನ ಕೊಟ್ಟಿತು? ಇದು ಬಿಳಿ ಹಣವಾ? ಅಥವಾ ಕಪ್ಪು ಹಣವಾ? ಈ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ.

ಇನ್ನು ‘ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್’ ಕಂಪೆನಿಯ ಪ್ರೊಫೈಲ್‌ ನೋಡಿದ್ರೆ ಇದರ ಷೇರುಗಳ ಮಾಲೀಕತ್ವ ಅಂಬಾನಿಯವರ ರಿಲಯನ್ಸ್ ಕಂಪನಿಯದು (Reliance Company) ಎನ್ನುವುದು

ಖಾತರಿಯಾಗಿದ್ದು, ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಅನ್ನೋ ಹಾಗಾಯ್ತು ಈ ದೇಣಿಗೆ ಪುರಾಣ. ಈ ರೀತಿ ಕಾರ್ಪೊರೇಟ್ ಕಂಪನಿಗಳಿಂದ ಕಪ್ಪು ಹಣವನ್ನು ದೇಣಿಗೆ ಪಡೆಯುವಾಗ ಅದರ

ಆದಾಯ ಮೀರಿದ ಹಣದ ಲೆಕ್ಕಾಚಾರ ಬಗ್ಗೆ ಕೇಂದ್ರ ಸರ್ಕಾರ ಒಂದು ಕ್ಷಣವೂ ಯೋಚಿಸಿಲ್ವಾ? ಅಥವಾ ಈ ಕಳ್ಳಾಟ ಆಡಿ ಜನರ ಕಣ್ಣಿಗೆ ಮಣ್ಣೆರಚಿತ್ತಾ? ಇನ್ನು ಈ ಕ್ವಿಕ್ ಸಪ್ಲೈ ಚೈನ್ ಕಂಪನಿಯು ರಿಲಯನ್ಸ್

ಕಾರ್ಪೋರೇಟ್ ನೆಟ್ವರ್ಕ್ ಮತ್ತು ಹೋಲ್ಡಿಂಗ್ ನೋಡಿಕೊಳ್ಳುತ್ತದೆ. ಹಾಗಾಗಿ ಮೋದಿ ಸರ್ಕಾರದಿಂದ ಗರಿಷ್ಠ ಅನುಕೂಲಗಳನ್ನು ಪಡೆದ ಮುಖೇಶ್ ಅಂಬಾನಿಯವರ (Mukhesh Ambani) ಕಡೆಯಿಂದ

ಬಂದ್ ಕಿಕ್ ಬ್ಯಾಕ್ ದೇಣಿಗೆ ಇದಾಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಒಂದು ಕಡೆ ಕಂಪನಿಗಳ ಮೇಲೆ ಈಡಿ, ಐಟಿ ಛೂ ಬಿಟ್ಟು ದಾಳಿ ಮಾಡಿಸುವುದು. ಇನ್ನೊಂದು ಕಡೆ ದಾಳಿ ತಡೆಯಲು ಅಥವಾ ದಾಳಿಯಾಗಿದ್ದರೆ ತನಿಖೆ ಆಗದಂತೆ ನೋಡಿಕೊಳ್ಳಲು ದೇಣಿಗೆ ರೂಪದ ಲಂಚ

ಪಡೆಯಲಾಗಿದೆಯಾ ಅನ್ನೋ ಅನುಮಾನ ಈಗ ಜನರನ್ನು ಕಾಡ ತೊಡಗಿದೆ. ಅಷ್ಟು ಮಾತ್ರವಲ್ಲ ಸರ್ಕಾರದಿಂದ ದೊಡ್ಡ ದೊಡ್ಡ ಪ್ರಾಜೆಕ್ಟ್‌ ಪಡೆಯಲು ದೊಡ್ಡ ದೊಡ್ಡ ಕಂಪೆನಿಗಳು ದೇಣಿಗೆ ರೂಪದಲ್ಲಿ ಕಿಕ್

ಬ್ಯಾಕ್ (Kickback) ನೀಡಿದ್ದಾರಾ ಅನ್ನೋ ಅನುಮಾನ ಸಾಕ್ಷಿ ಸಮೇತವಾಗಿ ಸಾಬೀತಾಗುತ್ತಿದೆ. ಅಲ್ಲದೆ ಬೇನಾಮಿ ಶೆಲ್ ಕಂಪನಿಗಳ ಮೂಲಕವೂ ದೇಣಿಗೆ ವಸೂಲಿ ಮಾಡಿರೋ ಕರಾಳ ಸತ್ಯ ಈ

ಚುನಾವಣಾ ಬಾಂಡ್ ಹಗರಣದಿಂದ ಬಯಲಾಗ್ತಿದೆ.

ಇದನ್ನು ಓದಿ : ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಮತ್ತೆ ಆರಂಭ. 4 ತಿಂಗಳ ಪರ್ಯಾಯ ಮಾರ್ಗ ಬಳಸಲು ಸೂಚನೆ

Exit mobile version