ಬೆಳಗಾವಿಯಲ್ಲಿ ಮೊಟ್ಟ ಮೊದಲ ವಿದ್ಯುತ್ ಚಾಲಿತ ರೈಲು ಸಂಚಾರ ಪ್ರಾರಂಭ ಪ್ರಯಾಣಿಕರಲ್ಲಿ ಸಂಭ್ರಮ

Belagavi: ಬೆಳಗಾವಿಯಲ್ಲಿ ಮೊಟ್ಟ ಮೊದಲ ವಿದ್ಯುತ್ ಚಾಲಿತ ರೈಲು ಸಂಚಾರ ಪ್ರಾರಂಭವಾಗಿದೆ. ಬೆಳಗಾವಿ-ಹುಬ್ಬಳ್ಳಿ (electric train in belgaum) ಮೂಲಕ ಬೆಂಗಳೂರಿನವರೆಗೂ

ಈಗ ವಿದ್ಯುತ್ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಬೆಳಗಾವಿಗರಲ್ಲಿ ಸಂಭ್ರಮ ಹೆಚ್ಚಾಗಿದೆ. ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಈಗ ಎಲೆಕ್ಟ್ರಿಕ್ ಎಂಜಿನ್ (Electric Engine)

ಮೂಲಕ ಸಂಚಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ರೈಲ್ವೆ ಸಂಚಾರ ವೇಗ ಆಗಲಿದ್ದು, ಹೆಚ್ಚು ರೈಲುಗಳ ಓಡಾಟವೂ ಸಾಧ್ಯವಾಗಲಿದೆ.

ಬೆಳಗಾವಿಯ ರೈಲ್ವೇ ಸಂಪರ್ಕ ಜಾಲದ ಅಭಿವೃದ್ಧಿಯ ನಿಟ್ಟಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಬೆಂಗಳೂರು (Bengaluru)-ಹುಬ್ಬಳ್ಳಿ – ಬೆಳಗಾವಿ ನಡುವೆ ರೈಲ್ವೇ ಮಾರ್ಗದ ವಿದ್ಯುದ್ದೀಕರಣ

ಕಾಮಗಾರಿ ನಡೆದು ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಈ ಮೊದಲೇ ವಿದ್ಯುತ್‌ ಕಾಮಗಾರಿ ಹುಬ್ಬಳ್ಳಿಯಿಂದ (Hubballi) ಬಹುತೇಕ ಮಾರ್ಗಗಳಲ್ಲಿ ಮುಕ್ತಾಯಗೊಂಡಿತ್ತು. ಇದರ ಹಿನ್ನೆಲೆಯಲ್ಲಿ ಆಗಸ್ಟ್.8 ರಿಂದ

ಎಲೆಕ್ಟ್ರಿಕ್‌ ಎಂಜಿನ್‌ ಹೊಂದಿದ ಬೆಳಗಾವಿ- ಮನುಗೂರು (electric train in belgaum) ಎಕ್ಸ್‌ಪ್ರೆಸ್‌ ರೈಲು ಸಂಚಾರ ಪ್ರಾರಂಭಿಸಲಾಗಿದೆ.

ಪ್ರತಿ ದಿನ ಮಧ್ಯಾಹ್ನ 1 ಗಂಟೆಗೆ ಈ ರೈಲು ಬೆಳಗಾವಿಯಿಂದ ಹೊರಟು ಹುಬ್ಬಳ್ಳಿ, ಹೊಸಪೇಟೆ (Hosapete), ಗದಗ, ಬಳ್ಳಾರಿ (Bellary), ಗುಂತಕಲ್‌, ರಾಯಚೂರು (Raichur), ಮಂತ್ರಾಲಯ,

ಅದೋನಿ (Adoni), ವಿಕಾರಾಬಾದ್‌, ಸಿಕಂದರಾಬಾದ್‌ (Secunderabad), ವಾರಂಗಲ್‌, ಭದ್ರಾಚಲಂ ರೋಡ್‌ ಮಾರ್ಗವಾಗಿ ಮನುಗೂರಿಗೆ ಹೋಗುತ್ತದೆ.

ಬೆಳಗಾವಿ- ಮನುಗೂರು ಎಕ್ಸ್‌ಪ್ರೆಸ್‌ ಇದಕ್ಕೂ ಮುಂಚೆ ಡೀಸೆಲ್‌ ಎಂಜಿನ್‌ನ (Diesel Engine) ರೈಲು ಸಂಚಾರ ನಡೆಸುತ್ತಿತ್ತು. ಈ ರೈಲು ಬೆಳಗಾವಿಯಿಂದ ಹುಬ್ಬಳ್ಳಿಯವರೆಗೆ ಸಂಚಾರ ನಡೆಸಿ

ತದನಂತರ ಹುಬ್ಬಳ್ಳಿಯಲ್ಲಿ ಎಂಜಿನ್‌ ಬದಲಾವಣೆ ಮಾಡಿ ವಿದ್ಯುತ್‌ ಎಂಜಿನ್‌ ಅಳವಡಿಸಲಾಗುತ್ತಿತ್ತು. ಇದರಿಂದ ಸುಮಾರು ಅರ್ಧ ಗಂಟೆ ಸಮಯ ವ್ಯರ್ಥವಾಗುತ್ತಿತ್ತು.

ಇನ್ನು ಈ ವಿದ್ಯುತ್‌ ಚಾಲಿತ ರೈಲು ಡೀಸೆಲ್‌ ಎಂಜಿನ್‌ಗಿಂತ ವೇಗವಾಗಿ ಚಲಿಸುವುದರಿಂದ ಒಟ್ಟು ಸುಮಾರು 1 ಗಂಟೆ ಉಳಿತಾಯವಾಗುತ್ತದೆ. ಇದರಿಂದ ಬೇರೆ ರೈಲುಗಳ ಸಂಚಾರಕ್ಕೆ ಟೈಂ ಸ್ಲಾಟ್‌

(Time slot) ಲಭ್ಯವಾಗಲಿದ್ದು, ಬೆಳಗಾವಿಗೆ ಹೆಚ್ಚು ರೈಲುಗಳ ಸಂಚಾರ ನಡೆಸಲು ಅವಕಾಶವಾಗಲಿದೆ. ಬೆಳಗಾವಿಯಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿನವರೆಗೂ ರೈಲ್ವೇ ಮಾರ್ಗದ ವಿದ್ಯುತ್‌

ಕಾಮಗಾರಿ ಪೂರ್ಣಗೊಂಡಿರುವುದರಿಂದ ಬೆಳಗಾವಿ- ಬೆಂಗಳೂರು ಎಕ್ಸ್‌ಪ್ರೆಸ್‌ ರೈಲನ್ನು ಕೂಡ ಎಲೆಕ್ಟ್ರಿಕ್‌ ಎಂಜಿನ್‌ (Electric Engine) ಮೂಲಕ ಸಂಚಾರ ನಡೆಸಲು ಅವಕಾಶವಾಗಿದೆ.

ನೂರಾರು ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ನವೀಕೃತ ರೈಲು ನಿಲ್ದಾಣ ನಿರ್ಮಾಣಗೊಂಡಿದ್ದು, ಇದರಲ್ಲಿ ರೈಲು ಬೋಗಿಗಳ ನಿರ್ವಹಣೆಯ ಪಿಟ್‌ಲೈನ್‌ (Pitline) ವ್ಯವಸ್ಥೆ ಕೂಡ ಸೇರಿದೆ.

ದೆಹಲಿಯ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಸ್ಪರ್ಧಿಸಲಿದೆ ; ಎಎಪಿ-ಕಾಂಗ್ರೆಸ್ ಮಧ್ಯೆ ಭಾರೀ ಬಿರುಕು..!

ಈ ಮೊದಲು ಬೆಳಗಾವಿ- ಮೈಸೂರು ಎಕ್ಸ್‌ಪ್ರೆಸ್‌ (Mysore Express) ರಾತ್ರಿ ರೈಲು ಪಿಟ್‌ಲೈನ್‌ನಲ್ಲಿ ನಿರ್ವಹಣೆಯಾಗುತ್ತಿತ್ತು. ಆದರೆ ಈ ರೈಲಿನ ಬೆಳಗಾವಿ- ಧಾರವಾಡ (Dharwad) ನಡುವಿನ

ಸಂಚಾರವನ್ನು ಇತ್ತೀಚೆಗೆ ನೈಋುತ್ಯ ರೈಲ್ವೇ ಇಲಾಖೆ ರದ್ದು ಮಾಡಿದೆ.

ಬೆಳಗಾವಿ ರೈಲು ನಿಲ್ದಾಣದಿಂದ ಮೊಟ್ಟ ಮೊದಲ ವಿದ್ಯುತ್‌ ಚಾಲಿತ ರೈಲು ಸಂಚಾರ ಆರಂಭಿಸುತ್ತಿದ್ದಂತೆ ಬೆಳಗಾವಿಯ ರೈಲ್ವೇ ಪ್ರಯಾಣಿಕರು ಸಂಭ್ರಮಿಸಿದರು. ಪ್ರಸ್ತುತ ಬೆಳಗಾವಿ ಮನುಗೂರು

ರೈಲು ಬೆಳಗಾವಿ ನಿಲ್ದಾಣದಲ್ಲಿ ನಿರ್ವಣೆಯಾಗುತ್ತಿದ್ದು, ಬೆಳಗಾವಿ ಕೋರ್‌ ಡೆವಲಪ್ಮೆಂಟ್‌ ಗ್ರೂಪ್‌ (Belgaum Core Development Group ) ಸದಸ್ಯರಾದ ಶ್ರೀಧರ ಹುಲಿಕವಿ, ಅಶ್ವಿನ್‌ ಪಾಟೀಲ್‌

(Ashwin Patil), ಶೈಲೇಶ ಯಳಮಲಿ ಮೊದಲಾದವರು ಪೂಜೆ ಸಲ್ಲಿಸಿ ರೈಲಿಗೆ ಚಾಲನೆ ನೀಡಿದರು.

ಭವ್ಯಶ್ರೀ ಆರ್.ಜೆ

Exit mobile version