ಹಳ್ಳಿಗಾಡಿನ ಮದ್ಯ ಕುಡಿದು, ಅರಣ್ಯದೊಳಗೆ ಗಂಟೆಗಟ್ಟಲೆ ಮಲಗಿದ 24 ಆನೆಗಳು!

Odisha : ಕಿಯೋಂಜಾರ್ ಜಿಲ್ಲೆಯ ಶಿಲಿಪಾಡಾ ಗೋಡಂಬಿ ಅರಣ್ಯದ ಬಳಿ ವಾಸಿಸುವ ಗ್ರಾಮಸ್ಥರು, ಒಡಿಶಾದ ಅರಣ್ಯಕ್ಕೆ(Elephants Drunk Country Liqour) ಹಳ್ಳಿಗಾಡಿನ ಮದ್ಯವನ್ನು ತಯಾರಿಸಲು ಹೋಗಿದ್ದರು.

ಈ ಸಂದರ್ಭದಲ್ಲಿ, ಎಲ್ಲಾ ಮಡಕೆಗಳು ಒಡೆದು, ಹುದುಗುವಿಕೆಗಾಗಿ ಇಟ್ಟಿದ್ದ ಮದ್ಯ ಕಾಣೆಯಾಗಿದೆ(Elephants Drunk Country Liqour) ಎನ್ನುವುದನ್ನು ಗ್ರಾಮಸ್ಥರು ಗಮನಿಸಿದರು.

ಇದನ್ನೂ ಓದಿ : https://vijayatimes.com/pm-to-bengaluru/

ಸಮೀಪದಲ್ಲೇ, ಹುದುಗುವಿಕೆಯ ಪ್ರಕ್ರಿಯೆಯಲ್ಲಿದ್ದ ಮದ್ಯವನ್ನು ಸೇವಿಸಿ ಗಾಢ ನಿದ್ರೆಯಲ್ಲಿದ್ದ ಆನೆಗಳ ಹಿಂಡು ಅವರಿಗೆ ಕಾಣಸಿಕ್ಕಿತು. ಸುಮಾರು, 24 ಆನೆಗಳು(Elephants) ಸಾಂಪ್ರದಾಯಿಕ ಹಳ್ಳಿಗಾಡಿನ ಮದ್ಯವಾದ ‘ಮಹುವಾ’ವನ್ನು ಕುಡಿದು, ಒಡಿಶಾದ ಕಾಡಿನಲ್ಲಿ ಗಂಟೆಗಳ ಕಾಲ ಮಲಗಿದ್ದವು.

ಸಮೀಪದ ಹಳ್ಳಿಯ ಜನರು ಮದ್ಯ ತಯಾರಿಸಲು ಕಾಡಿನೊಳಗೆ ಹೋದಾಗ, ಆನೆಗಳ ಹಿಂಡು ಅದಾಗಲೇ ಹುದುಗಿದ್ದ ನೀರನ್ನು ಸೇವಿಸಿ ಗಾಢ ನಿದ್ರೆಯಲ್ಲಿದ್ದವು.

“ನಾವು ಮಹುವಾ ತಯಾರಿಸಲು ಬೆಳಿಗ್ಗೆ 6 ಗಂಟೆಗೆ ಕಾಡಿನೊಳಗೆ ಹೋದೆವು, ಈ ಸಂದರ್ಭದಲ್ಲಿ ಎಲ್ಲಾ ಮಡಕೆಗಳು ಒಡೆದು, ಹುದುಗಿಸಿದ ನೀರು ಕಾಣೆಯಾಗಿತ್ತು.

ಪಕ್ಕದಲ್ಲಿ ಆನೆಗಳು ಮಲಗಿದ್ದನ್ನೂ ನಾವು ಕಂಡೆವು , ಅವರು ಹುದುಗಿಸಿದ ನೀರನ್ನು ಸೇವಿಸಿದ್ದಾರೆ ಎಂದು ತಿಳಿಯಿತು. ಆ ಮದ್ಯವನ್ನು ಸಂಸ್ಕರಿಸಲಾಗಿಲ್ಲ. ನಾವು ಪ್ರಾಣಿಗಳನ್ನು ಎಬ್ಬಿಸಲು ಪ್ರಯತ್ನಿಸಿದೆವು ಆದರೆ ನಮ್ಮ ಪ್ರಯತ್ನ ವಿಫಲವಾಗಿದೆ.

ನಂತರ ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಲಾಯಿತು” ಎಂದು ಗ್ರಾಮಸ್ಥರಾದ ನಾರಿಯಾ ಸೇಥಿ ಪಿಟಿಐಗೆ(PTI) ತಿಳಿಸಿದರು.

ವಿಷಯ ತಿಳಿದ ನಂತರ, ಪಟನಾ ಅರಣ್ಯ ವ್ಯಾಪ್ತಿಯ ಈ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಆನೆಯ ಹಿಂಡನ್ನು ಎಬ್ಬಿಸಲು ಡೋಲು ಬಾರಿಸಬೇಕಾಯಿತು.

ನಂತರ ಆನೆಗಳು ಕಾಡಿನೊಳಗೆ ಹೋದವು. ಆದರೆ, ಆನೆಗಳು ಹುದುಗಿಸಿದ ಮಹುವಾವನ್ನೇ ಕುಡಿದಿವೆಯೇ ಎಂಬುದು ಅರಣ್ಯಾಧಿಕಾರಿಗೆ ಖಚಿತವಾಗಿಲ್ಲ.

https://youtu.be/FeOkbQN577g PROMO | ನೇತ್ರಾವತಿ ಮೇಲೆ ನಿರಂತರ ಅತ್ಯಾಚಾರ ದುಷ್ಟರ ಕೆಟ್ಟ ಕೆಲಸಕ್ಕೆ ಶಾಸಕರ ಸಾಥ್‌?

ಬಹುಶಃ ಆನೆಗಳು ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದಿರಬಹುದು” ಎಂದು ಅರಣ್ಯ ಸಂರಕ್ಷಣಾಧಿಕಾರಿ ಘಾಸಿರಾಮ್ ಪಾತ್ರ ತಿಳಿಸಿದ್ದಾರೆ.

ಮತ್ತೊಂದೆಡೆ, ಒಡೆದ ಮಡಕೆಗಳ ಸಮೀಪದ ವಿವಿಧ ಸ್ಥಳಗಳಲ್ಲಿ ಮಂಗಳವಾರ ಆನೆಗಳು ಅಮಲೇರಿದ ಸ್ಥಿತಿಯಲ್ಲಿ ಮಲಗಿದ್ದನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದರು.

Exit mobile version