Bhopal : ನಮೀಬಿಯಾದಿಂದ ತಂದ ಚೀತಾಗಳ ರಕ್ಷಣೆಗೆ ಎರಡು ಆನೆಗಳ ನಿಯೋಜನೆ ; ಆನೆಗಳ ಕಾರ್ಯವೇನು ಗೊತ್ತಾ?

India

Bhopal : ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ತಮ್ಮ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶದ(MadhyaPradesh) ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ(Kuno National Park) ನಮೀಬಿಯಾದಿಂದ(Namibia) ತಂದ ಎಂಟು ಚೀತಾಗಳನ್ನು ಬಿಡುಗಡೆ ಮಾಡಿದರು.

ಆ ಮೂಲಕ 7೦ ವರ್ಷಗಳ ಹಿಂದೆ ಭಾರತದ ಕಾಡುಗಳಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ, ಚೀತಾಗಳನ್ನು ಮತ್ತೆ ಭಾರತಕ್ಕೆ ತರಲಾಗಿದೆ. ನಶಿಸಿ ಹೋಗಿರುವ ಚೀತಾಗಳ ಸಂತತಿಯನ್ನು ಭಾರತದಲ್ಲಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಇದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.

ಇನ್ನು ಆಫ್ರಿಕಾದ(Africa) ನಮೀಬಿಯಾದಿಂದ ತರಲಾಗಿರುವ ಎಂಟು ಚೀತಾಗಳ ರಕ್ಷಣೆಗೆ ಭಾರೀ ಭದ್ರತೆಯನ್ನೇ ಕಲ್ಪಿಸಲಾಗಿದೆ. ಅಚ್ಚರಿ ಎಂದರೆ ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆಗೆ ಎರಡು ಆನೆಗಳನ್ನು ಚೀತಾಗಳ ಭದ್ರತೆಗೆ ನಿಯೋಜಿಸಲಾಗಿದೆ. ನರ್ಮದಾಪುರಂನ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಎರಡು ಆನೆಗಳನ್ನು ಚೀತಾಗಳ ರಕ್ಷಣೆಗಾಗಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ.

ಲಕ್ಷ್ಮಿ ಮತ್ತು ಸಿದ್ಧನಾಥ್ ಎಂಬ ಆನೆಗಳು ಚೀತಾಗಳ ರಕ್ಷಣೆಯ ಉಸ್ತುವಾರಿ ವಹಿಸಲಿವೆ. ಎರಡೂ ಆನೆಗಳು ಈಗ ಚೀತಾಗಳ ಮೇಲೆ ನಿಗಾ ಇಡುವುದರೊಂದಿಗೆ ರಾಷ್ಟ್ರೀಯ ಉದ್ಯಾನವನದ ಭದ್ರತಾ ತಂಡಗಳೊಂದಿಗೆ ಹಗಲು ರಾತ್ರಿ ಗಸ್ತು ತಿರುಗುತ್ತಿವೆ. ಚೀತಾಗಳಿಗೆ ಒಂದು ತಿಂಗಳ ಕ್ವಾರಂಟೈನ್ನ, ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದ ಚೀತಾಗಳು ಕ್ವಾರಂಟೈನ್ನಲ್ಲಿ ಒಂದು ತಿಂಗಳು ಕಳೆಯಬೇಕಾಗುತ್ತದೆ.

ಇದನ್ನೂ ಓದಿ : https://vijayatimes.com/hijab-is-not-an-option/

ಸಿದ್ಧನಾಥ್ ಮತ್ತು ಲಕ್ಷ್ಮಿ ಆನೆಗಳು ಈ ಆವರಣಗಳಲ್ಲಿ ಇರುವ ಚೀತಾಗಳ ಮೇಲೆ ನಿಗಾ ಇಡುತ್ತವೆ. ಯಾವುದೇ ವನ್ಯಜೀವಿಗಳು ಆವರಣದೊಳಗೆ ಬರದಂತೆ ನೋಡಿಕೊಳ್ಳಲು ಸಿದ್ಧನಾಥ್ ಮತ್ತು ಲಕ್ಷ್ಮಿ ಆನೆಗಳು ಅರಣ್ಯ ಸಿಬ್ಬಂದಿಯೊಂದಿಗೆ ನಿರಂತರವಾಗಿ ಗಸ್ತು ತಿರುಗುತ್ತಿವೆ.
Exit mobile version