ಮಂದಗತಿಯಲ್ಲಿ ಟ್ವೀಟರ್‌ ; ಹಿಗ್ಗಾಮುಗ್ಗಾ ಟ್ರೋಲ್ ಆದ ಎಲೋನ್ ಮಸ್ಕ್!

New York : ಮಂದಗತಿಯಲ್ಲಿ ಸಾಗಿದ ಟ್ವಿಟರ್(Twitter) ಬಗ್ಗೆ ಅನೇಕ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಟ್ವಿಟರ್ ಹಾಗೂ ಟ್ವಿಟರ್ ಬಳಕೆದಾರರಾದ ಎಲೋನ್ ಮಸ್ಕ್(Elon Musk trolled) ವಿರುದ್ಧ ಟ್ರೋಲ್ ಗಳ ಸುರಿಮಳೆ ಹರಿದುಬಂದಿದೆ.

ಟ್ವಿಟರ್ ಡೌನ್ ಆದ ಪರಿಣಾಮ, ಪೇಜ್ಗಳನ್ನು ಲೋಡ್ ಮಾಡುವಲ್ಲಿ ಅನೇಕರು ತೊಂದರೆ ಅನುಭವಿಸಿರುವ ಕುರಿತು ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಬಳಕೆದಾರರು ಭಾನುವಾರ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್(micro blogging website) ಅನ್ನು ಪ್ರವೇಶಿಸಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ರಾತ್ರಿ 7:16ಕ್ಕೆ ಭಾರತದಲ್ಲಿ 2,700 ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಿರುವುದರ ಕುರಿತು ಡೌನ್‌ಡೆಕ್ಟರ್ ವರದಿ ಮಾಡಿದೆ.

ಔಟ್ಟೇಜ್ ಮಾನಿಟರಿಂಗ್ ವೆಬ್‌ಸೈಟ್ ಮಾಹಿತಿ ಅನುಸಾರ, 64 ಪ್ರತಿಶತ ಬಳಕೆದಾರರು ಟ್ವಿಟರ್ ಮೊಬೈಲ್ ಅಪ್ಲಿಕೇಶನ್‌ನಿಂದ (Elon Musk trolled) ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಶೇ.34 ಪ್ರತಿಶತದಷ್ಟು ಜನರು ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಕಂಡ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ನೋಡಿ : https://fb.watch/hmOLu7-sy5/ ಪೊಲೀಸರಿಗೆ ರೂಲ್ಸ್‌ ಇಲ್ವಾ?ಪ್ರಶ್ನಿಸಿದ್ರೆ ಜೀಪು ಹತ್ತಿಸ್ತಾರೆ. Police break rules!

ಡಿಸೆಂಬರ್ 12 ರಂದು ಟ್ವಿಟರ್ ಬ್ಲೂ(Elon Musk trolled) ಚಂದಾದಾರಿಕೆ ಸೇವೆಯನ್ನು ಮರುಪ್ರಾರಂಭಿಸಲಿದ್ದೇವೆ ಎಂಬ ಹೇಳಿಕೆಯ ಬೆನ್ನಲ್ಲೇ ಈ ವರದಿ ಮುನ್ನೆಲೆಗೆ ಬಂದಿದೆ.

ಚಂದಾದಾರಿಕೆ ಸೇವೆಯು ಬಳಕೆದಾರರಿಗೆ ಬ್ಲೂ ಟಿಕ್, 1080p ವೀಡಿಯೊಗಳನ್ನು ಪೋಸ್ಟ್ ಮಾಡುವ ಸಾಮರ್ಥ್ಯ,

ಟ್ವೀಟ್‌ಗಳನ್ನು ಎಡಿಟ್ ಮಾಡುವ ಸಾಮರ್ಥ್ಯ ಮತ್ತು ಪ್ರಮುಖ ಅಂಶಗಳನ್ನು ಒಳಗೊಂಡಂತೆ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ : https://vijayatimes.com/elephant-attack-gopalaiah-statement/

ನಾವು ಸೋಮವಾರ ಟ್ವೀಟರ್ ಅನ್ನು ಮರುಪ್ರಾರಂಭಿಸುತ್ತಿದ್ದೇವೆ. ನೀಲಿ ಚೆಕ್‌ಮಾರ್ಕ್ ಸೇರಿದಂತೆ ಚಂದಾದಾರರಿಗೆ ಮಾತ್ರ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ಪಡೆಯಲು $8 ಪ್ರತಿ ತಿಂಗಳಿಗೆ ಅಥವಾ iOS ನಲ್ಲಿ $11 ತಿಂಗಳಿಗೆ ವೆಬ್‌ನಲ್ಲಿ ಚಂದಾದಾರರಾಗಿ ಎಂದು ಕಂಪನಿಯು ತನ್ನ ಅಧಿಕೃತ ಟ್ವೀಟ್‌ನಲ್ಲಿ(tweet) ತಿಳಿಸಿದೆ.

Exit mobile version