ಭಾರತದಲ್ಲಿ ಮತ್ತೊಂದು ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ: ಯುಎಸ್​​ನ ಮಾಡೆರ್ನಾ ನಾಲ್ಕನೇ ಲಸಿಕೆ

ನವದೆಹಲಿ, ಜೂ. 30: ಯುಎಸ್​​ನ ಲಸಿಕೆ ಮಾಡೆರ್ನಾವನ್ನು ಭಾರತದಲ್ಲಿ ನಿಯಂತ್ರಿತ ತುರ್ತು ಬಳಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಮೂಲಕ ಭಾರತದಲ್ಲಿ ಸದ್ಯ ಬಳಕೆಯಾಗುತ್ತಿರುವ ಮೂರು ಲಸಿಕೆಗಳೊಂದಿಗೆ ನಾಲ್ಕನೇ ಲಸಿಕೆಗೆ ಅನುಮೋದನೆ ಸಿಕ್ಕಂತಾಗಿದೆ. ಹಾಗೇ ಮಾಡೆರ್ನಾ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಮುಂಬೈನ ಬಹುದೊಡ್ಡ ಔಷಧೀಯ ಕಂಪನಿ ಸಿಪ್ಲಾಕ್ಕೆ ಅನುಮತಿ ನೀಡಿದೆ.

ಮಾಡೆರ್ನಾ ಲಸಿಕೆ ಯಾವಾಗ ಭಾರತಕ್ಕೆ ಬರಲಿದೆ? ಎಷ್ಟು ಡೋಸ್​ ಲಭ್ಯವಾಗಲಿದೆ? ಅದನ್ನು ಯಾವಾಗಿನಿಂದ ಬಳಕೆ ಮಾಡಲಾಗುತ್ತದೆ ಎಂಬಿತ್ಯಾದಿ ವಿವರಗಳು ಇನ್ನೂ ತಿಳಿದಿಲ್ಲ. ನಮಗೆ ನೀಡುವ ಲಸಿಕೆಗಳನ್ನು ಸ್ವೀಕರಿಸಲು ನಾವು ಮುಂದಾಗಿದ್ದೇವೆ. ಆದರೆ ವಾಣಿಜ್ಯಾತ್ಮಕ ಒಪ್ಪಂದಗಳ ಬಗ್ಗೆ ಇನ್ನೂ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಿಪ್ಲಾ ಔಷಧೀಯ ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ.

ದೇಶದಲ್ಲಿ ಈಗ ಸೀರಂ ಇನ್​ಸ್ಟಿಟ್ಯೂಟ್​​ನ ಕೊವಿಶೀಲ್ಡ್​, ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಮತ್ತು ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ ನೀಡಲಾಗುತ್ತಿದೆ. ಸ್ಪುಟ್ನಿಕ್​ ವಿ ಕೆಲವೇ ನಗರಗಳಲ್ಲಿ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಾನಗರಗಳಲ್ಲಿ ಲಭ್ಯವಾಗಲಿದೆ. ಹಾಗೇ, ಇದೀಗ ಮತ್ತೊಂದು ಲಸಿಕೆ ತುರ್ತು ಬಳಕೆಗೆ ಸಿಗುತ್ತಿರುವುದು ದೇಶದ ಲಸಿಕಾ ಅಭಿಯಾನಕ್ಕೆ ಬಲ ಕೊಟ್ಟಿದೆ.

Exit mobile version