ಅರ್ನಬ್ ಗೋಸ್ವಾಮಿ ಸೇರಿ 14 ಟಿವಿ ಆ್ಯಂಕರ್ಸ್ ನ್ನು ಬ್ಯಾನ್ ಮಾಡಿದ I.N.D.I.A ಮೈತ್ರಿಕೂಟ

New Delhi : ಅರ್ನಬ್ ಗೋಸ್ವಾಮಿ, ನವಿಕಾ ಕುಮಾರ್, ಸುಧೀರ್ ಚೌಧರಿ, ಅದಿತಿ ತ್ಯಾಗಿ ಸೇರಿದಂತೆ 14 ಮಂದಿ ಸುದ್ದಿ (Emergency Mindset Back) ನಿರೂಪಕರು ಹಾಗೂ ಅವರ ಟಿವಿ

ಶೋಗಳನ್ನು ಬಹಿಷ್ಕರಿಸುವುದಾಗಿ ವಿರೋಧ ಪಕ್ಷಗಳ ಮೈತ್ರಿಕೂಟ ಐಎನ್‌ಡಿಐಎ ಪಟ್ಟಿ ಬಿಡುಗಡೆ ಮಾಡಿದೆ. ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಐಎನ್‌ಡಿಐಎ ಮೈತ್ರಿಕೂಟವು ಅರ್ನಬ್ ಗೋಸ್ವಾಮಿ ಸೇರಿದಂತೆ ಒಟ್ಟು 14 ಸುದ್ದಿ ನಿರೂಪಕರ ಹೆಸರುಗಳನ್ನು ಪಟ್ಟಿ ಮಾಡಿದ್ದು, ಇವರೆಲ್ಲರೂ ಹಿಂದಿ ಹಾಗೂ ಇಂಗ್ಲಿಷ್ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಇವರಲ್ಲಿ ಕೆಲವು ಮಹಿಳಾ ನಿರೂಪಕರೂ ಇದ್ದಾರೆ ಎನ್ನುವುದು ಗಮನಾರ್ಹವಾಗಿದೆ. ಯಾವುದೇ ರಾಜ್ಯದ ಪ್ರಾದೇಶಿಕ ಸುದ್ದಿ ವಾಹಿನಿ ಕಾರ್ಯಕ್ರಮ ಅಥವಾ ನಿರೂಪಕರನ್ನು ಇದರಲ್ಲಿ ಹೆಸರಿಸಿಲ್ಲ.

ಐಎನ್‌ಡಿಐಎ ಬಣವು ಬಿಜೆಪಿ ಪರ ಎಂದು ಗುರುತಿಸಿಕೊಂಡಿರುವ ಅಥವಾ ಪ್ರಚೋದನಾತ್ಮಕ ಮತ್ತು ಕೋಮು ಭಾವನೆ ಕೆರಳಿಸುವಂತೆ ಚರ್ಚಾ ಕಾರ್ಯಕ್ರಮ ನಡೆಸುವ ಆರೋಪದಡಿ ಈ ನಿರೂಪಕರನ್ನು

ಬಹಿಷ್ಕರಿಸಲು ನಿರ್ಧರಿಸಿದೆ. ಈ ನಿರೂಪಕರು ನೈಜ ಸಮಸ್ಯೆಗಳ ಕುರಿತಾದ ಗಮನವನ್ನು ಬೇರೆಡೆ ತಿರುಗಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ಕಾಂಗ್ರೆಸ್ ಈ ಹಿಂದೆ ಕೂಡ

ಮಾಧ್ಯಮಗಳಿಂದ ದೂರ (Emergency Mindset Back) ಉಳಿಯುವ ನಿರ್ಧಾರ ಮಾಡಿತ್ತು.

2019ರ ಚುನಾವಣೆ ಸಂದರ್ಭದಲ್ಲಿ ಅದು ತನ್ನ ವಕ್ತಾರರನ್ನು ಸುದ್ದಿವಾಹಿನಿಗಳ ಚರ್ಚೆಗೆ ಕಳುಹಿಸುವುದಿಲ್ಲ ಎಂದು ಹೇಳಿತ್ತು. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ಐಎನ್‌ಡಿಐಎ ಕೂಟದ

ವಿವಿಧ ಪಕ್ಷಗಳು ಈ ಪಟ್ಟಿಯನ್ನು ಹಂಚಿಕೊಂಡಿದ್ದು, ಐಎನ್‌ಡಿಐಎ ಗುರುತಿಸಿರುವ 14 ಮಂದಿ ನಿರೂಪಕರ ಪಟ್ಟಿ ಹೀಗಿದೆ.

ಅರ್ನಬ್ ಗೋಸ್ವಾಮಿ
ಅಮೀಶ್ ದೇವಗನ್
ಆನಂದ್ ನರಸಿಂಹನ್
ಅದಿತಿ ತ್ಯಾಗಿ
ಅಮನ್ ಚೋಪ್ರಾ
ಅಶೋಕ್ ಶ್ರೀವಾಸ್ತವ
ನವಿಕಾ ಕುಮಾರ್
ಪ್ರಾಚಿ ಪರಾಶರ್
ರುಬಿಕಾ ಲಿಯಾಖತ್
ಚಿತ್ರ ತ್ರಿಪಾಠಿ
ಗೌರವ್ ಸಾವಂತ್
ಶಿವ್ ಅರೂರ್
ಸುಧೀರ್ ಚೌಧುರಿ
ಸುಶಾಂತ್ ಸಿನ್ಹಾ

ಅವರ ಬೂಟು ನೆಕ್ಕುವವರಾಗಲು ನಿರಾಕರಿಸಿದ್ದೆವು, ಹೀಗಾಗಿ ನಮ್ಮನ್ನು ಬಹಿಷ್ಕರಿಸಲಾಗುತ್ತಿದೆ. ಇದಕ್ಕೆ ಭಾರತೀಯ ಮಾಧ್ಯಮಗಳು ಯಾವ ಉತ್ತರ ನೀಡುತ್ತವೆ ಎನ್ನುವುದನ್ನು ನೋಡಬೇಕು”

ಎಂದು ಟ್ವೀಟ್ ಮಾಡಿದ್ದಾರೆ.

ಆಜ್ ತಕ್ ವಾಹಿನಿ ಪತ್ರಕರ್ತ ಸುಧೀರ್ ಚೌಧರಿ ಅವರು ಐಎನ್‌ಡಿಐಎ ಬಣ ಬಿಡುಗಡೆ ಮಾಡಿರುವ ಬಹಿಷ್ಕಾರದ ಪಟ್ಟಿಗೆ ‘ಎಕ್ಸ್‌’ನಲ್ಲಿ (ಹಿಂದಿನ ಟ್ವಿಟ್ಟರ್) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ: ಆನ್‌ಲೈನ್‌ ಟಿಕೆಟ್‌ ಪ್ರಯಾಣಿಕರೇ ಎಚ್ಚರ !ಸಾರಿಗೆ ಇಲಾಖೆಯಿಂದ ಖಾಸಗಿ ವಾಹನಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ!

Exit mobile version