ವಿಧಾನಸಭೆಯಲ್ಲಿ ಇದು ನನ್ನ ಕೊನೆಯ ಭಾಷಣ: ಯಡಿಯೂರಪ್ಪ ರಾಜಕೀಯಕ್ಕೆ ಗುಡ್ ಬೈ

Bengaluru: ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು (B.S.Yediyurappa)ಚುನಾವಣಾ ರಾಜಕೀಯಕ್ಕೆ ಈಗಾಗಲೇ ವಿದಾಯ ಘೋಷಿಸಿದ್ದಾರೆ. ಹೀಗಾಗಿ ಸದ್ಯ ನಡೆಯುತ್ತಿರುವ ಅಧಿವೇಶನ (emotional speech of yediyurappa) ಅವರಿಗೆ ಕೊನೆಯ ಅಧಿವೇಶನವಾಗಲಿದೆ.

ವಿಧಾನಸಭೆಯಲ್ಲಿ ಭಾವನಾತ್ಮಕ ಭಾಷಣ ಮಾಡಿದ ಯಡಿಯೂರಪ್ಪನವರು, ವಿಧಾನಸಭೆಯಲ್ಲಿ ಇದು ನನ್ನ ಕೊನೆಯ ವಿದಾಯ ಭಾಷಣವಾಗಿರಬಹುದು ಎಂದು ಹೇಳುತ್ತಾ ಮಾಡಿದ ಭಾಷಣ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

B.S.Yediyurappa

ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪನವರು(Yediyurappa), ದೇವರು ನನಗೆ ಶಕ್ತಿ ನೀಡಿದರೆ ಐದು ವರ್ಷಗಳ ನಂತರ ಮುಂಬರುವ (emotional speech of yediyurappa) ಚುನಾವಣೆಯಲ್ಲಿಯೂ ಬಿಜೆಪಿಗಾಗಿ ನಾನು ಕೆಲಸ ಮಾಡುತ್ತೇನೆ.

ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ನನ್ನ ಬಗ್ಗೆ ತೋರುತ್ತಿರುವ ಗೌರವಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ.

ನನ್ನ ಕೊನೆಯ ಉಸಿರು ಇರುವವರೆಗೂ ಪಕ್ಷಕ್ಕೆ ನನ್ನ ಸಹಾಯ ಸದಾ ಇರುತ್ತದೆ. ಒಂದು ರೀತಿಯಲ್ಲಿ,

ಇದು ನನ್ನ ವಿದಾಯ ಭಾಷಣವಾಗಿದೆ. ಏಕೆಂದರೆ ನಾನು ಮತ್ತೊಮ್ಮೆ ವಿಧಾನಸಭೆಗೆ ಬರುವುದಿಲ್ಲ. ಹಲವು ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಕರ್ನಾಟಕದಲ್ಲಿ ಬಿಜೆಪಿಗೆ ತೆರಳಲು ಯೋಚಿಸುತ್ತಿದ್ದಾರೆ.

ಅವರು ಪಕ್ಷದ ಗೆಲುವಿಗೆ ಶ್ರಮಿಸುವ ವಿಶ್ವಾಸವಿದ್ದರೆ, ನಾವು ಅವರನ್ನು ಆಹ್ವಾನಿಸುತ್ತೇವೆ ಮತ್ತು ನಾವು ಒಟ್ಟಾಗಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತನ್ನನ್ನು ಬದಿಗಿರಿಸಲಿದೆ ಎಂಬ ಊಹಾಪೋಹಗಳನ್ನು ಅವರು ತಳ್ಳಿಹಾಕಿದರು.

ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಮ್ಮ ಭಾಷಣಕ್ಕೆ ವಿದಾಯ ಹೇಳಿದರು. ನಂತರ ಮೂರು ಪಕ್ಷಗಳ ಅನೇಕ ಶಾಸಕರು ಯಡಿಯೂರಪ್ಪನವರಿಗೆ ಶುಭ ಹಾರೈಸಿದರು.

ಸುಮಾರು ನಾಲ್ಕು ದಶಕಗಳ ತಮ್ಮ ರಾಜಕೀಯ ಬದುಕಿನಲ್ಲಿ ಅವರು ಪುರಸಭೆಯ ಸದಸ್ಯನಾಗಿ ರಾಜಕೀಯ ಪಯಣ ಪ್ರಾರಂಭಿಸಿ ಮುಖ್ಯಮಂತ್ರಿಯಾಗುವ ತನಕ ಅನೇಕ ಹೋರಾಟಗಳ ಮೂಲಕ ರಾಜ್ಯ ರಾಜಜಕೀಯದಲ್ಲಿ ತಮ್ಮದೇ ಚಾಪು ಮೂಡಿಸಿದ್ದರು.

ಇನ್ನು ರಾಜ್ಯ ವಿಧಾನಸಭಾ ಚುನಾವಣೆ ಮುಂದಿನ ಏಪ್ರಿ???ಥವಾ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಲ್ಲಿ ಚುನಾವಣೆಯ ಕಾವು ಕೂಡಾ ಜೋರಾಗಿದೆ.

Exit mobile version