ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ಯುವ ಯುಪಿ ಆಟಗಾರನಿಗೆ ಒಲಿದ ಅದೃಷ್ಟ

Bengaluru: ಇಂಗ್ಲೆಂಡ್ (England) ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ 2 ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡವನ್ನು ಪ್ರಕಟ ಮಾಡಿದೆ. ಅಚ್ಚರಿ ಎಂಬಂತೆ ಉತ್ತರ ಪ್ರದೇಶದ ಯುವ ಆಟಗಾರನಿಗೆ ಆಯ್ಕೆ ಸಮಿತಿ ಮಣೆಹಾಕಿದೆ. ವಿಕೆಟ್ಕೀಪರ್ (Wicket Keeper) ಇಶಾನ್ ಕಿಶನ್ ಬದಲಿಗೆ ಆಯ್ಕೆ ಸಮಿತಿ ಯುಪಿಯ ಯುವ ವಿಕೆಟ್ಕೀಪರ್ ಮತ್ತು ಬ್ಯಾಟ್ಸ್ಮನ್ ಧ್ರುವ್ ಜುರೆಲ್ ಅವರನ್ನು ಆಯ್ಕೆ ಮಾಡಿದೆ. ಪ್ರಥಮದರ್ಜೆ ಕ್ರಿಕೆಟ್ನಲ್ಲಿ (Cricket) ಈವರೆಗೆ 15 ಪಂದ್ಯಗಳನ್ನು ಮಾತ್ರ ಆಡಿರುವ ಜುರೆಲ್ಗೆ ಇದೇ ಮೊದಲ ಬಾರಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮೊದಲ ಬಾರಿ ಆಯ್ಕೆ ಆಗಿರುವ ಉತ್ತರ ಪ್ರದೇಶದ ಧ್ರುವ್ ಜುರೆಲ್ (Dhruv Jurel) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಧ್ರುವ್ ಜುರೆಲ್ 1 ಶತಕ ಮತ್ತು 5 ಅರ್ಧಶತಕ ಬಾರಿಸಿದ್ದಾರೆ. ಇನ್ನು ತಂಡದಿಂದ ಹೊರಗುಳಿದಿದ್ದ ಅಕ್ಷರ್ ಪಟೇಲ್ (Akshar Patel) ಮತ್ತು ಕುಲ್ದೀಪ್ ಯಾದವ್ ತಂಡಕ್ಕೆ ಮರಳಿದ್ದಾರೆ. ಆದರೆ ಶಾರ್ದುಲ್ ಠಾಕೂರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಇಶಾನ್ ಕಿಶನ್ಗೆ ಕೊಕ್ : ಮಾನಸಿಕ ಆರೋಗ್ಯದ ಕಾರಣ ನೀಡಿ ಆಫ್ರಿಕಾ (Africa)ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಇಶಾನ್ ಕಿಶನ್, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿಯೇ ರಣಜಿ ಕ್ರಿಕೆಟ್ ಆಡಿ ನಂತರ ತಂಡಕ್ಕೆ ಮರಳುವಂತೆ ಕೋಚ್ ರಾಹುಲ್ ದ್ರಾವಿಡ್ #RahulDarvid ಕೂಡ ಕಟ್ಟುನಿಟ್ಟಾಗಿ ಇಶಾನ್ ಕಿಶನ್ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಶಮಿಗೆ ಗಾಯದ ಸಮಸ್ಯೆ : ವೇಗಿ ಮೊಹಮ್ಮದ್ ಶಮಿ (Mohammed Shami) ಬಳಿಕ ಗಾಯದ ಸಮಸ್ಯೆ ಎದುರಾಗಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಯ 3ನೇ ಪಂದ್ಯದಿಂದ ಆಯ್ಕೆಗೆ ಲಭ್ಯರಾಗುವ ಸಾಧ್ಯತೆ ಇದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ, ಜನವರಿ 25ರಿಂದ 29ರವರೆಗೆ ಹೈದರಾಬಾದ್ನಲ್ಲಿ ನಡೆಯಲಿದೆ. ದ್ವಿತೀಯ ಟೆಸ್ಟ್ ಪಂದ್ಯ ಆಂಧ್ರಪ್ರದೇಶದ (Andrapradesh) ವೈಝಾಗ್ನ ಫೆ.2ರಿಂದ 6ರವರೆಗೆ ನಡೆಯಲಿದೆ.

ಭಾರತ ತಂಡ :
ರೋಹಿತ್ ಶರ್ಮಾ (Rohith Sharma) (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (KL Rahul), ಕೆಎಸ್ ಭರತ್, ಧೃವ್ ಜುರೆಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಅವೇಶ್ ಖಾನ್

Exit mobile version