ಎರಡೇ ಗಂಟೆಯಲ್ಲಿ 26 ಲಕ್ಷ ರೂ. ದಂಡ ಸಂಗ್ರಹಣೆ

ಬೆಂಗಳೂರು, ಡಿ. 18: ಲಾಕ್ ಡೌನ್ ನಂತರ ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲವೆಂದು ಸಂಚಾರಿ ಪೊಲೀಸರು ಪ್ರತಿದಿನ ಅಂತಹವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ದಂಡ ವಿಧಿಸಲಾಗುತ್ತಿದೆ. ಆದರೆ ಈಗ ಸಂಚಾರಿ ಪೊಲೀಸರು ಕೇವಲ ಎರಡೇ ಗಂಟೆಯಲ್ಲಿ ಸರಿಸುಮಾರು 26,26,800 ರೂ. ಮೊತ್ತವನ್ನು ದಂಡ ಸಂಗ್ರಹಿಸಿದ್ದಾರೆ. 174 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಬೆಂಗಳೂರಿನ ಸಂಚಾರಿ ಪೊಲೀಸರು, ನಿಯಮ ಉಲ್ಲಂಘನೆ ಮಾಡಿದವರಿಂದ ದಂಡ ಸಂಗ್ರಹಣೆ ಮಾಡಿರುವುದು ತಿಳಿದು ಬಂದಿದೆ.

ಇದು ಒಂದು ಅಚ್ಚರಿಯ ಸಂಗತಿಯಾಗಿ ಕಂಡರೂ, ಇಷ್ಟು ಬೃಹತ್‌ ಪ್ರಮಾಣದಲ್ಲಿ ನಿಯಮ ಉಲ್ಲಂಘನೆಗಳನ್ನು ಮೀರುತ್ತಿರುವ ಸಾರ್ವಜನಿಕರು ಎಂಬುದು ವಿಪರ್ಯಾಸದ ಸಂಗತಿ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಡಾ. ಬಿ. ಆರ್. ರವಿಕಾಂತೇ ಗೌಡ ಟ್ವೀಟ್ ಮೂಲಕ ತಿಳಿಸಿದ್ದಾರೆ.

Exit mobile version