ಕೆ.ಎಸ್. ಈಶ್ವರಪ್ಪ ವಿರುದ್ದ 40% ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆ ; ಡೆತ್‍ನೋಟ್‍ನಲ್ಲಿ ಏನಿದೆ?

political

ಸಚಿವ(Minster) ಕೆ.ಎಸ್. ಈಶ್ವರಪ್ಪ(KS Eshwarappa) ವಿರುದ್ದ 40% ಕಮೀಷನ್(Comission) ಆರೋಪ ಮಾಡಿದ್ದ ಬೆಳಗಾವಿ(Belagavi) ಬಿಜೆಪಿ(BJP) ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ ಪಾಟೀಲ್(Santhosh Patil) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಆತ್ಮಹತ್ಯೆಗೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ನೇರ ಕಾರಣ ಎಂದು ಡೆತ್‍ನೋಟ್(DeathNote) ಬರೆದಿದ್ದಾನೆ ಎನ್ನಲಾಗಿದೆ.

ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಪ ಪಾಟೀಲ್ ಮಾದ್ಯಮ ಪ್ರತಿನಿಧಿಗಳಿಗೆ ತಡರಾತ್ರಿ ವಾಟ್ಸಪ್ ಸಂದೇಶ ರವಾನಿಸಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಆಗ ಮಾದ್ಯಮ ಪ್ರತಿನಿಧಿಗಳು ಪೋಲಿಸರಿಗೆ ಈ ಕುರಿತು ಮಾಹಿತಿ ನೀಡಿದ್ದರು. ಸಂತೋಷನನ್ನು ಹುಡುಕಾಟ ನಡೆಸಿದ ಪೋಲಿಸರಿಗೆ ಉಡುಪಿ ಜಿಲ್ಲೆಯ ಲಾಡ್ಜ್‍ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಂತೋಷ ಪಾಟೀಲ್ ಮೃತ ದೇಹ ಪತ್ತೆಯಾಗಿದೆ.

ಡೆತ್‍ನೋಟ್‍ನಲ್ಲಿ ಏನಿದೆ..?

ನನ್ನ ಸಾವಿಗೆ ಕೆ.ಎಸ್. ಈಶ್ವರಪ್ಪ ಕಾರಣ, ಅವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹೆಂಡತಿ, ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು ಸಹಾಯ ಮಾಡಬೇಕು. ಅದೇ ರೀತಿ ನಮ್ಮ ಸಮುದಾಯದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರು ನನ್ನ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತೇನೆ.

ಇನ್ನು ನನ್ನನ್ನು ಬೆಂಬಲಿಸಿದ ಮಾದ್ಯಮ ಪ್ರತಿನಿಧಿಗಳಿಗೆ ದನ್ಯವಾದಗಳು. ಇನ್ನು ನನ್ನ ಜೊತೆ ಬಂದ ನನ್ನ ಗೆಳೆಯರಾದ ಸಂತೋಷ ಮತ್ತು ಪ್ರಶಾಂತ್‍ಗೆ ಪ್ರವಾಸಕ್ಕೆ ಹೋಗೋಣ ಎಂದು ಕರೆದುಕೊಂಡು ಬಂದಿರುತ್ತೇನೆ. ಅವರಿಗೂ ನನ್ನ ಸಾವಿಗೂ ಯಾವುದೇ ಸಂಬಂಧವಿಲ್ಲ. ಕೆ.ಎಸ್. ಈಶ್ವರಪ್ಪ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಕರ್ನಾಟಕ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದಾನೆ.

Exit mobile version