ಅಲ್ಲಾಗೆ ಕಿವಿ ಕೇಳಿಸಲ್ವಾ?’ ಕೆ.ಎಸ್‌ ಈಶ್ವರಪ್ಪ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ!

Karnataka : ಅಲ್ಲಾ ಕಿವುಡನೇ? ಧ್ವನಿವರ್ಧಕ ಬಳಸಿದಿದ್ದರೇ ಅಲ್ಲಾಗೆ ಕೇಳಿಸಲ್ವಾ? ಎಂದು ಆಜಾನ್‌ ವಿರುದ್ಧ ಕೆ.ಎಸ್‌ ಈಶ್ವರಪ್ಪ (KS Eshwarappa) ನೀಡಿದ ವಿವಾದಾತ್ಮಕ ಹೇಳಿಕೆಗೆ (Eshwarappa Statement on Azan) ಇದೀಗ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಭಾರತೀಯ ಜನತಾ ಪಕ್ಷದ (bjp) ನಾಯಕ ಮತ್ತು ಕರ್ನಾಟಕದ (Karnataka) ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಆಜಾನ್ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ,

ಇದೀಗ ತೀವ್ರ ವಿರೋಧ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಭಾನುವಾರ ಮಂಗಳೂರಿನಲ್ಲಿ ನಡೆದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijay Sankalpa Yatra) ಭಾಗಿಯಾಗಿ, ಮಾತನಾಡಿದ ಕೆ.ಎಸ್‌ ಈಶ್ವರಪ್ಪ,

ಭಾಷಣ ಮಾಡುವಾಗ ಮಸೀದಿಯಿಂದ ಕೇಳಿಬಂದ ಆಜಾನ್‌ ಶಬ್ದಕ್ಕೆ ಕೋಪಗೊಂಡು ನಾನು ಎಲ್ಲಿಗೆ ಹೋದ್ರೂ ಇದೊಂದು ತಲೆನೋವು ನನಗೆ ಕಾಡುತ್ತದೆ.

ಮೈಕ್‌ ಹಾಕಿದ್ರೆ ಮಾತ್ರ ಅಲ್ಲಾಗೆ ಕೇಳಿಸೋದಾ? ಇಲ್ಲದೇ ಹೋದ್ರೆ ಕೇಳಿಸಲ್ವಾ? ಅಲ್ಲಾ ಕಿವುಡನೇ? ಎಂದು ಆಜಾನ್‌ ವಿರುದ್ಧ ವಿವಾದಾತ್ಮಕ Eshwarappa Statement on Azan) ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/oscar-award-list/


ಕಳೆದ ವರ್ಷವು ಕೂಡ ಆಜಾನ್‌ ವಿರುದ್ಧ ಭುಗಿಲೆದ್ದಿದ್ದ ಚರ್ಚೆಯೂ ಹೈಕೋರ್ಟ್‌ನ (High Court) ಮೆಟ್ಟಿಲೇರಿತ್ತು. ಅಂದು ಕೂಡ ಆಜಾನ್ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ತೀವ್ರ ಚರ್ಚೆಗೆ ಕಾರಣವಾಗಿತ್ತು.

ಸದ್ಯ ಇದೀಗ ಬಿಜೆಪಿ ಪಕ್ಷದ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಅವರು ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.

ಮೈಕ್‌ನಲ್ಲಿ ಕಿರುಚಿದರೆ ಮಾತ್ರ ಅಲ್ಲಾ ಪ್ರಾರ್ಥನೆಯನ್ನು ಕೇಳುತ್ತಾನೆಯೇ? ಅಲ್ಲಾ ಕಿವುಡನೇ? ಇದೆಲ್ಲದಕ್ಕೂ ಶೀಘ್ರದಲ್ಲೇ ಅಂತ್ಯವಿರುತ್ತದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ.

ಪ್ರಧಾನಿ ಮೋದಿಯವರು ಎಲ್ಲಾ ಧರ್ಮಗಳನ್ನು ಗೌರವಿಸುವಂತೆ ಕೇಳಿದ್ದಾರೆ, ಆದರೆ ನೀವು ಮೈಕ್‌ನಲ್ಲಿ ಕಿರುಚಿದರೆ ಮಾತ್ರ ಅಲ್ಲಾ ಕೇಳಬಹುದೇ? ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹಾರವಾಗುತ್ತದೆ.

ಇದನ್ನೂ ಓದಿ : https://vijayatimes.com/outrage-against-rapido/

ಭಾರತದ ಎಲ್ಲಾ ದೇವಾಲಯಗಳಲ್ಲೂ ಪೂಜೆ ಮಾಡುತ್ತೇವೆ. ಶ್ಲೋಕ, ಭಜನೆಗಳನ್ನು ಪಠಿಸಲಾಗುತ್ತದೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲಿ ಇದೆ. ಪ್ರಪಂಚದಲ್ಲಿ ಧರ್ಮವನ್ನು ಉಳಿಸುವಂತಹ ದೇಶ ಭಾರತ ಮಾತ್ರ.

ಆದರೆ ಮೈಕ್ ಹಿಡ್ಕೊಂಡು ಹೇಳಿದರೆ ಮಾತ್ರ ಅಲ್ಲಾಗೆ ಕೇಳುವುದಾ? ಅಲ್ಲಾ ಕಿವುಡಾ? ಎಂದು ಕೇಳಬೇಕಾಗುತ್ತದೆ.

ಆದ್ದರಿಂದ ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಎಂದು ಆಜಾನ್‌ ವಿರುದ್ಧ ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

Exit mobile version