ಇನ್ಮುಂದೆ ಭಾರತದಲ್ಲಿ ಸಿಗಲಿದೆ 15 ರೂಪಾಯಿಗೆ ಪೆಟ್ರೋಲ್‌ ! ಅದು ಹೇಗೆ ಸಾಧ್ಯ? ಓದಿ ಈ ವರದಿ

India: ಭವಿಷ್ಯದ ಪೆಟ್ರೋಲ್‌ ಎಂದು ಎಥೆನಾಲ್‌ (Ethanol is used as petrol) ಇಂಧನವನ್ನು ವ್ಯಾಖ್ಯಾನಿಸಲಾಗುತ್ತಿದೆ. ಸಂಪೂರ್ಣ ಸ್ವದೇಶಿಯಾಗಿ ಉತ್ಪಾದಿಸಬಹುದಾದ ಕಡಿಮೆ ವೆಚ್ಚದ ಮಾಲಿನ್ಯ

ಮುಕ್ತ ಇಂಧನದಿಂದ ಭಾರತದಲ್ಲಿ ಪೆಟ್ರೋಲ್‌ ದರವನ್ನು 15 ರೂ.ಗೆ ಕಡಿತಗೊಳಿಸಬಹುದು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari) ಇತ್ತೀಚಿಗಷ್ಟೇ ಹೇಳಿದ್ದರು. ಎಥೆನಾಲ್‌, ಸಕ್ಕರೆ

ಕಾರ್ಖಾನೆಗಳಿಗೆ ಶಕ್ತಿ ತುಂಬಿದ್ದೇ ಆದರೆ ಇದು ಅಮೃತವಾಗಿ ಪರಿವರ್ತನೆಯಾಗುತ್ತದೆ ಅನ್ನುವುದು (Ethanol is used as petrol) ಕೃಷಿ ತಜ್ಞರ ಅಭಿಪ್ರಾಯ.

ಭಾರತದಲ್ಲಿ ಪೆಟ್ರೋಲ್‌ (Petrol) ಬೆಲೆ ಇನ್ನು ಕೆಲವೇ ವರ್ಷಗಳಲ್ಲಿ ಕೇವಲ 15 ರೂ. ಆಗಲಿದ್ದು, ದೇಶದ ಎಲ್ಲಾ ವಾಹನಗಳೂ ರೈತರು ಉತ್ಪಾದಿಸುವ ಎಥೆನಾಲ್‌ ಇಂಧನದಿಂದ ಸಂಚರಿಸುವ ದಿನಗಳು

ದೂರದಲಿಲ್ಲ ಎಂದು ಗಡ್ಕರಿ ಅವರು ರಾಜಸ್ಥಾನದ ಪ್ರತಾಪಗಢದಲ್ಲಿ ಹೇಳಿದ್ರು. ಆ ಸಮಯದಲ್ಲಿ ಎಲ್ಲ ಟಿವಿಗಳಲ್ಲೂ ಬ್ರೇಕಿಂಗ್‌ ನ್ಯೂಸ್‌ (Breaking News) ಆಗಿತ್ತು. ವೃತ್ತ ಪತ್ರಿಕೆಗಳ ಮುಖಪುಟದಲ್ಲಿ ಈ ಸುದ್ದಿ

ಜಾಗ ಪಡೆದಿತ್ತು. ದೇಶದೆಲ್ಲೆಡೆ ಈ ಕುರಿತು ಚರ್ಚೆಗಳೆದ್ದವು. ಇದೆಲ್ಲ ಸಾಧ್ಯವಿಧಿಯಾ, ಇನ್ನು ಪೆಟ್ರೋಲ್‌ ದರವನ್ನು ಕೇವಲ 15 ರೂ.ಗೆ ಸೀಮಿತಗೊಳಿಸುವುದಾದರೂ ಹೇಗೆ ಎಂದು ಕೆಲವರಲ್ಲಿ ಪ್ರಶ್ನೆಗಳೂ ಮೂಡಿದವು.

ಇದನ್ನು ಓದಿ: ‘ಸೂಪರ್ ಸ್ಟಾರ್’ ಟ್ಯಾಗ್ ತೆಗೆಯಿರಿ ಅಂದ್ರು ನಟ ರಜನಿಕಾಂತ್ ! ‘ಜೈಲರ್‌’ ಟ್ರೈಲರ್‌ನಲ್ಲಿ ರಜನಿ ಯಾಕೆ ಹಾಗೆ ಹೇಳಿದ್ರು?

ಬೈಕು, ಕಾರುಗಳಿಗೆ ಲೀಟರ್‌ಗಟ್ಟಲೆ ತುಂಬಿಸಿಕೊಳ್ಳುವ ಪೆಟ್ರೋಲ್‌ (Petrol) ಭವಿಷ್ಯದಲ್ಲಿ ಭೂಮಿಯಿಂದ ಸಂಪೂರ್ಣ ಖಾಲಿಯಾಗುವ ಸಂಭವವಿದೆ ಎಂದು ಭೂಗರ್ಭಶಾಸ್ತ್ರಜ್ಞರ ಬಹುದಿನಗಳ ಆತಂಕ.

ಇದು ನಿಜವೂ ಹೌದು, ನಾಶವಾಗಬಹುದಾದ ಇಂಧನಗಳಿಗೆ ಪರ್ಯಾಯವಾಗಿ ಪರಿಸರಕ್ಕೆ ಹಾನಿಯಾಗದಂತೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗುವಂಥ ಇತರೆ ಇಂಧನಗಳಿಗೆ ಜಗತ್ತು ಹುಡುಕಾಡುತ್ತಲೇ

ಇದ್ದು, ಈ ನಿಟ್ಟಿನಲ್ಲಿ ಎಥೆನಾಲ್‌ (Ethanol) ವಿಜ್ಞಾನಿಗಳ ಕಣ್ಣಿಗೆ ಅಮೃತದಂತೆ ತೋರುತ್ತಿದೆ. ಈ ಎಥೆನಾಲ್‌ ಎಲ್ಲಾ ಜೀವರಾಶಿಗಳ ಆರೋಗ್ಯದ ದೃಷ್ಟಿಯಿಂದಲೂ ದಿ ಬೆಸ್ಟ್‌.

ಗಲ್ಫ್‌ ರಾಷ್ಟ್ರಗಳಿಗೋ, ರಷ್ಯಾಕ್ಕೋ ಎಥೆನಾಲ್‌ ಇಂಧನ ಹುಡುಕಿಕೊಂಡು ಹೋಗಬೇಕಾಗಿಲ್ಲ. ಇದು ನಮ್ಮಲ್ಲಿಯೇ ಸಿಗುವ ಕಬ್ಬು, ಮೆಕ್ಕೆಜೋಳ, ಹಣ್ಣು, ಅಕ್ಕಿ, ಹುಲ್ಲು, ತರಕಾರಿ ಹಾಗೂ ಇನ್ನಿತರ ಹಲವು ಧಾನ್ಯಗಳಿಂದ

ತಯಾರಿಸಬಹುದಾದಂಥ ಸಸ್ಯ ಜನ್ಯ ಇಂಧನ. ಸುಲಭ ನವೀಕರಣ ಇದರ ಬಹುದೊಡ್ಡ ಪ್ಲಸ್‌ಪಾಯಿಂಟ್‌ (Pluspoint) . ಗುಣಮಟ್ಟದ ಕಬ್ಬು ಕಡಿಮೆ ಖರ್ಚಿನಲ್ಲಿ ಎಥೆನಾಲ್‌ ಉತ್ಪಾದಿಸಲು ಪ್ರಮುಖ ಕಚ್ಚಾವಸ್ತು.

ಕಬ್ಬಿನಲ್ಲಿರುವ ಆಲ್ಕೋಹಾಲ್‌ ಸಂಬಂಧಿ ಅಂಶಗಳು ಗುಣಮಟ್ಟದ ಎಥೆನಾಲ್‌ ಉತ್ಪಾದನೆಗೆ ಸಹಾಯಕಾರಿಯಾಗಿದೆ. ಎಥೆನಾಲ್‌ನಲ್ಲಿ ಯಾವುದೇ ರೀತಿಯ ರಾಸಾಯನಿಕಗಳ ಮಿಶ್ರಣ ಇಲ್ಲದಿರುವುದರಿಂದ

ಜೀವಿಗಳಿಗೆ ಹಾಗೂ ಪರಿಸರಕ್ಕೆ ಹಾನಿಕಾರಕವಾಗಿಲ್ಲ ಎಂಬುದು ವಿಶೇಷ.

ಭಾರತದಲ್ಲಿ ಎಥೆನಾಲ್‌ ತಯಾರಿಸುವ ತಂತ್ರಜ್ಞಾನವು ಕಬ್ಬಿನ ಹಾಲಿನಿಂದ ನೇರವಾಗಿ ಪ್ರಾರಂಭವಾಗಿರುವುದು ಸ್ವಾಗತಾರ್ಹ. ಎಥೆನಾಲ್‌ ಉತ್ಪಾದಿಸುವ ತಂತ್ರಜ್ಞಾನ ಅಳವಡಿಸಿಕೊಂಡಿರುವ ಕರ್ನಾಟಕದ

ಪ್ರಥಮ ಕಾರ್ಖಾನೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ (Jamkhandi) ಸಕ್ಕರೆ ಕಾರ್ಖಾನೆ ಪ್ರಖ್ಯಾತಿಗೊಂಡಿದೆ. ಕಬ್ಬಿಗಿಂತಲೂ ಮೆಕ್ಕೆಜೋಳದ ಎಥೆನಾಲ್‌ ಉತ್ಪಾದನೆಯು ಹೆಚ್ಚು ವೆಚ್ಚದಾಯಕವಾಗಿದೆ.

ಆದರೆ ಮೆಕ್ಕೆಜೋಳದ ಕಟಾವಿನ ಅವಧಿ ಕಬ್ಬಿಗಿಂತ ಕಡಿಮೆ ಎನ್ನುವುದೂ ಗಮನಾರ್ಹ. ಜಗತ್ತಿನಲ್ಲಿ ಹಲವು ರಾಷ್ಟ್ರಗಳು ಈಗಾಗಲೇ ಎಥೆನಾಲ್‌ ಬಳಕೆಯಿಂದ ಆರಂಭಗೊಂಡಿದೆ. ಈ ಮೂಲಕ ಅಪಾರ

ಪ್ರಮಾಣದ ವಿದೇಶಿ ವಿನಿಮಯವನ್ನೂ ಆ ರಾಷ್ಟ್ರಗಳು ಉಳಿಸುತ್ತಿವೆ.

ಭವ್ಯಶ್ರೀ ಆರ್.ಜೆ

Exit mobile version