`ಇವಿಎಂ ಟ್ಯಾಂಪರಿಂಗ್’ ಆರೋಪವನ್ನು ತಿರಸ್ಕರಿಸಿದ ಚುನಾವಣಾ ಆಯುಕ್ತರು!

up elections

ಮಾರ್ಚ್ 10 ರಂದು ಐದು ರಾಜ್ಯಗಳ ಮತಗಳ ಎಣಿಕೆ ಈಗಾಗಲೇ ಪ್ರಾರಂಭವಾಗಿ ಮುನ್ನಡೆಯುತ್ತಿದೆ. ಇವಿಎಂ ಹ್ಯಾಕ್ ವಿಚಾರ ಕುರಿತು ಕೇಳಿಬಂದ ಆರೋಪದ ಬೆನ್ನಲ್ಲೇ ಇಂದು ಮುಖ್ಯ ಚುನಾವಣಾ ಆಯುಕ್ತರಾದ ಸುಶೀಲ್ ಚಂದ್ರ ಅವರು ಮಾತನಾಡಿದ್ದು, ಇವಿಎಂ ಟ್ಯಾಂಪರಿಂಗ್ ಆರೋಪಗಳನ್ನು ತಿರಸ್ಕರಿಸಿದ್ದಾರೆ. ರಾಜಕೀಯ ಪಕ್ಷದ ಏಜೆಂಟರ ಸಮ್ಮುಖದಲ್ಲಿ ಇವಿಎಂಗಳನ್ನು ಸೀಲ್ ಮಾಡಲಾಗಿದೆ.

ಇವಿಎಂ ಟ್ಯಾಂಪರಿಂಗ್ ಮಾಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಕೇಳಿಬಂದಿರುವ ಆರೋಪಗಳನ್ನು ನಾನು ಪರಿಗಣಿಸುವುದಿಲ್ಲ. ಇವಿಎಂಗಳನ್ನು 2004 ರಿಂದಲೂ ನಿರಂತರವಾಗಿ ಬಳಸಲಾಗುತ್ತಿದೆ. 2019ರಲ್ಲಿ ನಾವು ಪ್ರತಿ ಮತಗಟ್ಟೆಯಲ್ಲಿ ವಿವಿಪ್ಯಾಟ್ ಬಳಸಲು ಪ್ರಾರಂಭಿಸಿದ್ದೇವೆ. ರಾಜಕೀಯ ಪಕ್ಷದ ಏಜೆಂಟರ ಸಮ್ಮುಖದಲ್ಲಿ ಇವಿಎಂಗಳನ್ನು ಸೀಲ್ ಮಾಡಲಾಗಿದೆ ಎಂದು ಸುಶೀಲ್ ಚಂದ್ರ ಹೇಳಿದರು. ಮತಎಣಿಕೆಯ ಇವಿಎಂ ಯಂತ್ರಗಳ ಬಗ್ಗೆ ಬುಧವಾರ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿರುವ ಅಖಿಲೇಶ್ ಯಾದವ್ ಮಾಡಿದ ಗಂಭೀರ ಆರೋಪಕ್ಕೆ ಇದು ಸರಿಯಾದ ತಿರುಗೇಟು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಬುಧವಾರ ವಾರಣಾಸಿ ಜಿಲ್ಲೆಯಲ್ಲಿ ಮ್ಯಾಜಿಸ್ಟ್ರೇಟ್ ವಿಡಿಯೋದಲ್ಲಿರುವ ಇವಿಎಂಗಳನ್ನು ಮತದಾನಕ್ಕೆ ಬಳಸಿಲ್ಲ. ಅವುಗಳು ‘ಹ್ಯಾಂಡ್-ಆನ್’ ತರಬೇತಿಗಾಗಿ ಬಳಸಲಾಗುತ್ತಿರುವ ಮತಯಂತ್ರಗಳಾಗಿವೆ. ಕೆಲ ರಾಜಕೀಯ ಪಕ್ಷಗಳು ಸತ್ಯಾಸತ್ಯತೆಯನ್ನು ಅರಿಯದೇ ಕೇವಲ ವದಂತಿ ಹರಡುತ್ತಿವೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದರು. ಪ್ರತಿಬಾರಿ ಚುನಾವಣೆ ನಡೆದಾಗಲೂ ಇವಿಎಂ ವಿವಾದ ಸದ್ದು ಮಾಡುತ್ತದೆ. ಆದರೆ ಮತದಾನ ಪೂರ್ವದಲ್ಲಿ ಯಾವುದೇ ವಿವಾದ ಇರುವುದಿಲ್ಲ.

ಮತದಾನವಾದ ನಂತರ ಅದರಲ್ಲೂ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದ ನಂತರ ಇವಿಎಂ ಗಲಾಟೆ ಜೋರಾಗುತ್ತದೆ. ಇನ್ನು ಇವಿಎಂ ಕುರಿತು ಗಂಭೀರವಾಗಿ ಯೋಚಿಸಬೇಕಾದ ಕೆಲ ಮೂಲಭೂತ ಸಂಗತಿಗಳ ಬಗ್ಗೆ ಮಾತ್ರ ಯಾವುದೇ ರಾಜಕೀಯ ಪಕ್ಷದ ನಾಯಕರು ಮಾತನಾಡುವುದಿಲ್ಲ. ಆರೋಪ ಮಾಡುವಾಗ ತೋರುವ ಬದ್ದತೆಯನ್ನು ಅದಕ್ಕೆ ಉತ್ತರ ಕಂಡುಕೊಳ್ಳುವಾಗ ಮಾತ್ರ ಇರುವುದಿಲ್ಲ ಎಂದು ಹೇಳಿದ್ದಾರೆ.

Exit mobile version