Bengaluru: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನಗರದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ವಿಶ್ವಕಪ್ 2023 ಕ್ರಿಕೆಟ್ (Cricket) ಪಂದ್ಯಾವಳಿಗೆ ಬಿಎಂಟಿಸಿ ಬಸ್ಗಳನ್ನು ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿದ್ದು, ನಿಗಮವು ಪ್ರಯಾಣಿಕರಿಗೆ ದಕ್ಷ, ವಿಶ್ವಾಸಾರ್ಹ, ಆರಾಮದಾಯಕ ಮತ್ತು ಕೈಗೆಟುಕುವ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ.
ನಗರದಲ್ಲಿ ವಿಶ್ವಕಪ್ ಪಂದ್ಯವು ಐದು ದಿನಗಳ ಕಾಲ ನಡೆಯುತ್ತಿದ್ದು, ಆ ಐದು ದಿನಗಳು ಅಂದರೆ 20-10-2023, 26-10-2023, 04-11-2023, 09-11-2023, 12-11-2023 ರಂದು ಕ್ರಿಕೆಟ್ ವಿಶ್ವಕಪ್ 2023 ಪಂದ್ಯವಳಿಗೆ ಹಾಜರಾಗುವ ಪ್ರೇಕ್ಷಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆ ಸೇವೆಗಳನ್ನು ನಿರ್ವಹಿಸಲು ಯೋಜಿಸಿಸಲಾಗಿದ್ದು, ಬಸ್ (Bus) ಮಾರ್ಗಗಳ ವಿವರಗಳು ಈ ಕೆಳಕಂಡಂತಿದೆ.
ಮಾರ್ಗಗಳು:
- SBS-1K ಮತ್ತು SBS – 12K: ಕಾಡುಗೋಡಿ ಬಸ್ ನಿಲ್ದಾಣ, ಎಚ್.ಎ.ಎಲ್ (HAL)
- SBS – 13K ಹೂಡಿ (Hoodi) ರಸ್ತೆಯ ಮಾರ್ಗದಿಂದ ಕಾರ್ಯನಿರ್ವಹಿಸುತ್ತದೆ.
- G2, G3, ಮತ್ತು G4: ಸರ್ಜಾಪುರ (Sarjapura), ದೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ (Electronic City) ಮತ್ತು ಬನ್ನೇರುಘಟ್ಟದಿಂದ ಪ್ರಾಂಭವಾಗಿ ಅಗರ, ಹೊಸೂರು (Hosur) ರಸ್ತೆ ಮತ್ತು ಜಯದೇವ ಆಸ್ಪತ್ರೆಯ ಮೂಲಕ ಹಾದು ಹೋಗಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ತಲುಪಲಿದೆ.
- G6,G7,G8,G9, G10 ಇಂದ G11: ಜನಪ್ರಿಯ ಟೌನ್ ಶಿಪ್ (Janapriya Township)ನಿಂದ ಬಾಗಲುರುವರೆಗಿನ ಪ್ರದೇಶಗಳನ್ನು ಒಳಗೊಂಡಿರುವ ಮಾಗಡಿ ರಸ್ತೆ, ಯಶವಂತಪುರ ಮತ್ತು ಹೆಣ್ಣೂರು (Hennuru) ರಸ್ತೆಯಂತಹ ಪ್ರಮುಖ ಪ್ರದೇಶಗಳ ಮೂಲಕ ಹಾದು ಹೊಗಲಿದ್ದು, ಪ್ರಯಾಣಿಕರಿಗೆ ವಿವಿಧ ಆಯ್ಕೆಗಳನ್ನು ಒದಗಿಸಲಿದೆ.
- KBS-12HK : ಈ ಮಾರ್ಗದ ಮೂಲಕ ಹಾಡು ಹೋಗುವ ಬಸ್ ಗಳು ಹೊಸಕೋಟೆಯಿಂದ ಟಿನ್ ಫ್ಯಾಕ್ಟರಿ (Tin Factory) ಮೂಲಕ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸಲಿದೆ.
ಹೆಚ್ಚಿನ ವಿವರಗಳಿಗೆ ಮತ್ತು ಸಹಾಯಕ್ಕಾಗಿ ಪ್ರಯಾಣಿಕರು ಬಿಎಂಟಿಸಿ (BMTC) ಸಹಾಯವಾಣಿಯನ್ನು (22483777) ಸಂಪರ್ಕಿಸಬಹುದು ಅಥವಾ ಅಧಿಕೃತ ವೆಬ್ಸೈಟ್ ಗೆ www.mybmtc.com ಭೇಟಿ ನೀಡಬಹುದಾಗಿದೆ.
ಭವ್ಯಶ್ರೀ ಆರ್.ಜೆ