ಸುಳ್‌ ಸುದ್ದಿ ಹಬ್ಬಿಸಿದ್ರೆ ಹುಷಾರ್‌ ! ಸಾಮಾಜಿಕ ಜಾಲತಾಣಗಳಲ್ಲಿ ಸುಳ್‌ಸುದ್ದಿ ಪತ್ತೆ ಹಚ್ಚುವ ಫ್ಯಾಕ್ಟ್ ಚೆಕ್ unit ಗೆ ಸಿಎಂ ಗ್ರೀನ್ ಸಿಗ್ನಲ್

Bengaluru: ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಡುವ ಸುಳ್ಳು ಸುದ್ದಿಗಳನ್ನು (fact check unit start) ಪತ್ತೆ ಹಚ್ಚಲು ಮತ್ತು ನಿಯಂತ್ರಿಸಲು ಸತ್ಯ ಪರಿಶೀಲನಾ

ಘಟಕವನ್ನು ರಚಿಸಲು ಮತ್ತು ನಕಲಿ ಸುದ್ದಿಗಳನ್ನು ಸೃಷ್ಟಿಸುವ ಗುಂಪುಗಳಿಗೆ ದಂಡ ವಿಧಿಸುವ ಕಾನೂನುಗಳನ್ನು ರೂಪಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಅನುಮೋದಿಸಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ (Krishna) ಅವರು ಸೋಮವಾರ ನಡೆಸಿದ ಸೈಬರ್‌ ಸೆಕ್ಯುರಿಟಿ (Cyber security) ವಿಚಾರವಾಗಿ ನಡೆಸಿದ ಸಭೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ

ಸುಳ್ಳು ಸುದ್ದಿಗಳನ್ನು ಹರಡುವುದರಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಅದರ ನಿಯಂತ್ರಣ ಬಹುಮುಖ್ಯ. ಹೀಗಾಗಿ ರಾಜ್ಯದಲ್ಲಿ ವಾಸ್ತವಾಂಶ ತಪಾಸಣಾ ಘಟಕ ಸ್ಥಾಪನೆ ಅಗತ್ಯ. ಈ ಉದ್ದೇಶಕ್ಕಾಗಿ

ಅಗತ್ಯವಿರುವ ಎಲ್ಲಾ ನಿಯಮಗಳು ಮತ್ತು ಕಾನೂನುಗಳನ್ನು ಮಾಡುವಂತೆ ಅವರು ಗೃಹ ಸಚಿವಾಲಯ ಮತ್ತು ಐಟಿ-ಬಿಟಿ (IT BT) ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದನ್ನೂ ಓದಿ : ಸಾಲ ಪಡೆದ ವ್ಯಕ್ತಿ ವಕೀಲನೇ ಆಗಿರಲಿ, ನ್ಯಾಯಾಧೀಶರಾಗಿರಲಿ ರಕ್ಷಣೆ ನೀಡಲಾಗದು: ಹೈಕೋರ್ಟ್ ಸ್ಪಷ್ಟನೆ

ಸಭೆಯಲ್ಲಿ ಫ್ಯಾಕ್ಟ್ ಚೆಕ್ (Fact check)ಪರಿಶೀಲನಾ ಘಟಕದ ಉಸ್ತುವಾರಿ ಸಮಿತಿ,ವಿಶ್ಲೇಷಣಾ ಗುಂಪು, ನೋಡಲ್‌ ಅಧಿಕಾರಿಗಳ ನೇಮಕ, ಸಾಮರ್ಥ್ಯ ವರ್ಧನೆಯ ಗುಂಪು ಮತ್ತು ತಂತ್ರಜ್ಞಾನದ

ವ್ಯವಸ್ಥಿತ ಬಳಕೆಯನ್ನು ಸಭೆಯಲ್ಲಿ ವಿವರಿಸಲಾಯಿತು.ಇದೀಗ ಬೆಂಗಳೂರು (Bengaluru) ಪೊಲೀಸರು (Police) ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಸಕ್ರಿಯರಾಗಿದ್ದಾರೆ ಎಂದು ಐಟಿ-ಬಿಟಿ ಸಚಿವ

ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ವಾಸ್ತವ ಪರಿಶೀಲನಾ ಘಟಕದ ಅಗತ್ಯವಿದೆ. ನಕಲಿ ಸುದ್ದಿಗಳನ್ನು ಹರಡಲು AI ಅನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸುಳ್ಳು ಸುದ್ದಿ ಗುರುತಿಸಲು ಈ ಘಟಕದ ಅವಶ್ಯಕತೆಯಿದೆ. ಐಟಿ-ಬಿಟಿ ಇಲಾಖೆ ಎಲ್ಲ ರೀತಿಯ ಸಹಕಾರವನ್ನು ಆರಂಭಿಕ ಹಂತದಲ್ಲಿ ನೀಡುತ್ತದೆ. ಹಾಗೂ ಎಲ್ಲ

ರೀತಿಯ ಕ್ರಮಗಳನ್ನು ಘಟಕವನ್ನು ಕಾನೂನಿನ ವ್ಯಾಪ್ತಿಯಲ್ಲಿ ತರಲು ಕೈಗೊಳ್ಳಬೇಕು. ಕ್ರಮೇಣ ಗೃಹ ಇಲಾಖೆಯ ವ್ಯಾಪ್ತಿಯಲ್ಲಿಯೇ ಘಟಕವು ಇರುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಸದ್ಯ ಆರಂಭಿಕ

ಹಂತದಲ್ಲಿ ಸುಳ್ಳು ಸುದ್ದಿ ಹರಡುವ ಜಾಲ ಇದ್ದರೂ ಅದು ವ್ಯಾಪಕವಾಗಿ ಮುಂದಿನ ದಿನಗಳಲ್ಲಿ ಬಳಕೆಯಾಗುವ (fact check unit start) ಸಾಧ್ಯತೆಗಳಿವೆ.

ಇದನ್ನೂ ಓದಿ :ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಶಕ್ತಿ ಯೋಜನೆ ಕೊನೆಗೊಳ್ಳುತ್ತಿದೆ ಎಂಬ ಸುದ್ದಿ : ಯೋಜನೆ ಕೊನೆಯಾಗುತ್ತಾ, ಸರ್ಕಾರ ಏನು ಹೇಳುತ್ತೆ?

ಸುಳ್ಳು ಸುದ್ದಿ ಹರಡುವವರಿಗೆ ಕಠಿಣ ಶಿಕ್ಷೆ ಕೂಡ ಆಗಬೇಕು. ಕೂಡಲೇ ಈ ಸಮಿತಿಯನ್ನು ರಚಿಸುವ ಕೆಲಸವಾಗಬೇಕು. ಅಲ್ಲದೆ ಜನರಿಗೆ ಸುಳ್ಳು ಸುದ್ದಿ ಹರಡುವುದು ಶಿಕ್ಷಾರ್ಹ ಅಪರಾಧ ಎಂಬುದು

ಮನವರಿಕೆಯಾಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌(Dr G Parameshwar) ಮಾತನಾಡಿ ಹೇಳಿದರು. ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌,

ಕಂದಾಯ ಸಚಿವ ಕೃಷ್ಣ ಬೈರೇಗೌಡ,ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ , ಅಪರ ಮುಖ್ಯ

ಕಾರ್ಯದರ್ಶಿ ಡಾ.ರಜನೀಶ್‌ ಗೋಯಲ್‌ ಇತರರಿದ್ದರು.

ಫೇಸ್ಬುಕ್ಕಲ್ಲಿ ಪೊಲೀಸರೂ ಇದ್ದಾರೆ, ಹುಷಾರಾಗಿರಿ!

ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ರಾಜ್ಯದ ಪೊಲೀಸರು ಕೂಡ ಸಕ್ರಿಯರಾಗಿದ್ದಾರೆ. ರಾಜ್ಯಕ್ಕೆ ಫ್ಯಾಕ್ಟ್ ಚೆಕ್ ಘಟಕದ ಅವಶ್ಯಕತೆ ಸದ್ಯದ ಪರಿಸ್ಥಿತಿಯಲ್ಲಿ ಜಾಸ್ತಿಯಿದೆ. ಸುಳ್ಳು ಸುದ್ದಿಗಳನ್ನು

ಕೃತಕ ಬುದ್ಧಿಮತ್ತೆ ಬಳಕೆ ಮಾಡಿ ಹರಡಲಾಗುತ್ತಿದೆ. ಪ್ರತ್ಯೇಕ ಘಟಕಗಳನ್ನು ಅದನ್ನು ತಡೆಯಲು ಸ್ಥಾಪಿಸಲಾಗುತ್ತದೆ. ಐಟಿ-ಬಿಟಿ ಇಲಾಖೆ ಎಲ್ಲ ಸಹಕಾರವನ್ನು ಗೃಹ ಇಲಾಖೆಗೆ ನೀಡಲಿದೆ.

ರಶ್ಮಿತಾ ಅನೀಶ್

Exit mobile version