ಸುಂದರವಾದ ಈ ಸೃಷ್ಟಿಯಲ್ಲಿ ಎಷ್ಟೊಂದು ಜಾತಿಯ ಹೂವುಗಳು ಕಾಣಸಿಗುತ್ತವೆ. ಇಂತಹ ಹೂವುಗಳಲ್ಲಿ(Facts about nilgiri hills) ಕೆಲವು ಪ್ರತಿ ಸೀಸನ್‌ನಲ್ಲೂ ಪ್ರತಿದಿನ ಹೂಬಿಟ್ಟರೆ, ಇನ್ನೂ ಕೆಲವು ಸೀಸನ್ ಗೆ ತಕ್ಕಂತೆ ಹೂವು ಬಿಡುತ್ತವೆ.
ಕೆಲವು ಹೂವು, ಮೇ ತಿಂಗಳಲ್ಲಿ, ಡಿಸೆಂಬರ್ ತಿಂಗಳಲ್ಲಿ ಅರಳಿದರೆ ಇನ್ನೂ ಕೆಲವು ಮಳೆಗಾಲದಲ್ಲಿ ಮಾತ್ರ ಹೂ ಬಿಡುತ್ತವೆ. ಈ ರೀತಿ, ಒಂದೊಂದು ಹೂವಿಗೂ ಅರಳಲು ಅದರದ್ದೇ ಆದ ಕಾಲ ಹಾಗೂ ಸಮಯವಿದೆ.
ಈಗ ಹೇಳುತ್ತಿರುವುದು ಅಂತದ್ದೇ ಒಂದು ವಿಶೇಷ ಹೂವಿನ ಬಗ್ಗೆ, ವಿಚಿತ್ರ ಎಂದರೆ ಇದು 12 ವರ್ಷಗಳಿಗೊಮ್ಮೆ ಮಾತ್ರ ಅರಳುತ್ತದೆ.
ಈ ಹೂವಿನ ಹೆಸರನ್ನು ನೀವು ಕೇಳಿರಬಹುದು. ಇದರ ಹೆಸರು ನೀಲಕುರಿಂಜಿ ಎನ್ನುವುದು, ಇದು 12 ವರ್ಷಗಳಿಗೊಮ್ಮೆ ಅರಳುವ ವಿಶಿಷ್ಟ ಹೂವು.
ಇದು ದಕ್ಷಿಣ(Facts about nilgiri hills) ಭಾರತದಲ್ಲಿನ ನೀಲಗಿರಿ ಬೆಟ್ಟದಲ್ಲಿರುವ ಸೋಲಾ ಎನ್ನುವ ಕಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಇದರ ವೈಜ್ಞಾನಿಕ ಹೆಸರು ಸಹ ವಿಶಿಷ್ಟವಾಗಿದೆ, ವೈಜ್ಞಾನಿಕವಾಗಿ ಇದನ್ನು ‘ಸ್ಟ್ರೊಬಿಯಾಂತಸ್ ಕುಂತಿಯಾನ’ ಎಂದು ಕರೆಯುತ್ತಾರೆ. ನೀಲಗಿರಿ ಬೆಟ್ಟವನ್ನು ಈ ಹೆಸರಿನಿಂದ ಕರೆಯಲು ಈ ಹೂವೇ ಕಾರಣ ಎನ್ನುವ ನಂಬಿಕೆಯೂ ಇದೆ.
ಏಕೆಂದರೆ, ನೀಲಕುರಿಂಜಿ ಹೂವು ಅರಳಿದಾಗ ಇದು ನೀಲಿ ಬಣ್ಣದಲ್ಲಿರುತ್ತದೆ. ಈ ಹೂವು ಅರಳಿದ ಸಮಯದಲ್ಲಿ, ಬೆಟ್ಟವಿಡೀ ನೀಲಿ ಬಣ್ಣದಿಂದ ಕಂಗೊಳಿಸುತ್ತದೆ. ಹಾಗಾಗಿಯೇ ಈ ಬೆಟ್ಟವನ್ನು ನೀಲಗಿರಿ ಎನ್ನಲಾಗುತ್ತದೆ.
https://vijayatimes.com/facts-about-shraddha-murder/
ಮೊತ್ತ ಮೊದಲು ಹತ್ತೊಂಬತ್ತನೇ ಶತಮಾನದ ಕಾಲಘಟ್ಟದಲ್ಲಿ ‘ಕ್ರಿಶ್ಚಿಯನ್ ಗಾಟ್ಫ್ರೈಡ್ ಡೇನಿಯಲ್ ನೀಸ್ ವಾನ್ ಎಸೆನ್ಬೆಕ್’ ಎಂಬ ವ್ಯಕ್ತಿ ಈ ಹೂವನ್ನು ಗುರುತಿಸಿದ್ದರು.
ಸಾಮಾನ್ಯವಾಗಿ, ಈ ಕುರುಂಜಿ ಹೂವಿನಲ್ಲಿ ಸರಿಸುಮಾರು 250 ಜಾತಿಗಳಿವೆ. ಇದರಲ್ಲಿ 46 ಜಾತಿಯ ಹೂವುಗಳು ನಮ್ಮ ಭಾರತದಲ್ಲೇ ಕಾಣಸಿಗುತ್ತದೆ.
ಈ ಹೂವು ಸುಮಾರು 1300 ರಿಂದ 2400ಪರ್ವತಗಳಲ್ಲಿ ಕಂಡು ಬರುತ್ತದೆ. ಈ ಗಿಡ ಮೂವತ್ತರಿಂದ ಅರವತ್ತು ಸೆ.ಮೀ ಉದ್ದ ಬೆಳೆಯುತ್ತದೆ, ಆದರೆ ಇದಕ್ಕೆ 180 ಸೆಂಟಿಮೀಟರ್ ತನಕ ಬೆಳೆಯುವ ಸಾಮರ್ಥ್ಯವಿದೆ.
ಇಂತಹ ವಿಶಿಷ್ಟ ಹೂವಿನ ಸೌಂದರ್ಯವನ್ನು ಸವಿಯಲು ಪ್ರಪಂಚದ ನಾನಾ ಭಾಗಗಳಿಂದ ಜನ ಬರುತ್ತಾರೆ, ಹಾಗಾಗಿ ನೀಲಗಿರಿ ಬೆಟ್ಟವು ಒಂದು ಉತ್ತಮ ಪ್ರವಾಸಿ ತಾಣವಾಗಿದೆ.
ಸಂಶೋಧನೆಗಳ ಪ್ರಕಾರ, ಈ ಹೂವು ಪೂರ್ವ ಘಟ್ಟ ಹಾಗೂ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿನ ಸಂದುರ್ ಬೆಟ್ಟದಲ್ಲಿ ಅತೀ ಹೆಚ್ಚಾಗಿ ಕಂಡುಬರುತ್ತದೆ.
ಈ ಹೂವು 2006 ರಲ್ಲಿ ಕೇರಳ ಮತ್ತು ತಮಿಳು ನಾಡಿನಲ್ಲಿ ಅರಳಿತ್ತು, ನಂತರ 2018ರಲ್ಲಿ ಮತ್ತೆ ಅರಳಿತ್ತು.
ಮುಂದೆ ಈ ಹೂವು ಮತ್ತೆ ಅರಳುವುದು 2030 ರಲ್ಲಿ! ಕುರಿಂಜಿಮಾಲ ಎನ್ನುವ ಅಭಯಾರಣ್ಯದಲ್ಲಿ ಕುರಿಂಜಿ ಹೂವಿನ ಮರಗಳು ಸರಿಸುಮಾರು 32 ಕಿಮೀ ಸ್ಥಳವನ್ನು ಆವರಿಸಿಕೊಂಡಿದೆ.
ಈ ಕುರಿಂಜಿಮಾಲ ಅಭಯಾರಣ್ಯವು ಕೇರಳದ ಹಿಡುಕ್ಕಿ ಜಿಲ್ಲೆಯ ಕೊತ್ತಕಂಬುರ್ ಮತ್ತು ವತವಾಡ ಹಳ್ಳಿಯಲ್ಲಿ ದೆ.
ಪವಿತ್ರ