ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸುವ ಮೊದಲು ಈ ವಿಷಯಗಳು ನಿಮ್ಮ ಗಮನಕ್ಕಿರಲಿ !

Health Tips : ಮೊಳಕೆ(Facts Of Bean Sprouts) ಬರಿಸಿದ ಕಾಳುಗಳು ಆರೋಗ್ಯಕ್ಕೆ ಉತ್ತಮ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ.

ಮೊಳಕೆ ಬರಿಸಿದ ಕಾಳುಗಳಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ದೇಹದ ಆರೋಗ್ಯಕ್ಕೆ ಉತ್ತಮವಾಗಿವೆ.

ಉದಾಹರಣೆಗೆ, ಹೆಸರು ಕಾಳಿನಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಯಿದ್ದು, ಒಂದು ಲೋಟ ಮೊಳಕೆ ಬರಿಸಿದ ಹೆಸರುಕಾಳಿನಲ್ಲಿ ಕೇವಲ 31 ಕ್ಯಾಲೋರಿಗಳಿರುತ್ತವೆ.

ಜೊತೆಗೆ, ಕಾರ್ಬೋಹೈಡ್ರೇಟ್ಸ್, ಪ್ರೋಟೀನ್‍, ಪೋಲೇಟ್, ವಿಟಮಿನ್ ಸಿ ಮತ್ತು ಕಬ್ಬಿಣಾಂಶವೂ ಇರುತ್ತದೆ.

ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ಕರ್ಷಣ ನಿರೋಧಕ ಶಕ್ತಿಯೂ ಹೆಚ್ಚುವುದರ ಜೊತೆಗೆ ಕ್ಯಾನ್ಸರ್(Cancer) ನಂತಹ ಮಾರಣಾಂತಿಕ ಕಾಯಿಲೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಈ ಕಾಳನ್ನು ಬೇಯಿಸುವುದು ಅಥವಾ ಮೊಳಕೆ ಬರಿಸಿ ವಿವಿಧ ಆಹಾರ ಪದಾರ್ಥಗಳ ಜೊತೆಗೆ ಸೇರಿಸಿ ಸೇವಿಸಬಹುದು.

ಇದನ್ನೂ ಓದಿ : https://vijayatimes.com/give-that-power-to-me/


ಅದೇ ರೀತಿ, ಮೊಳಕೆ ಬರಿಸಿದ ಕಡಲೆ ಕಾಳಿನ ವಿಶೇಷತೆಯೆಂದರೆ ಇದು ಕೊಲೆಸ್ಟ್ರಾಲ್ ನ ಪ್ರಮಾಣವನ್ನು ಹೆಚ್ಚಿಸುವುದಿಲ್ಲ. ಇದರ ಬದಲು ಕೆಟ್ಟ ಕೊಲೆಸ್ಟ್ರಾಲ್ ಅಥವಾ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತೆ. ಮೊಳಕೆ ಬರಿಸಿದ ಕಡ್ಲೆಯನ್ನು ಚಾಟ್ ತಿಂಡಿಗಳ ಜೊತೆ ಅಥವಾ ಬೇಯಿಸಿ ಒಗ್ಗರಣೆ ಮಾಡಿಕೊಂಡು ಸೇವಿಸಬಹುದು.

https://youtu.be/cvWkSjzuPg0


ಆದರೆ, ಈ ಮೊಳಕೆ ಕಾಳುಗಳನ್ನು ಸೇವಿಸುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಬೇಯಿಸಿದ ಮೊಳಕೆ ಕಾಳುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಏಕೆಂದರೆ ಕಾಳುಗಳು ಅಥವಾ ಧಾನ್ಯಗಳು ಮೊಳಕೆಯೊಡೆಯಬೇಕಾದರೆ ಉಷ್ಣತೆ ಮತ್ತು ತೇವಾಂಶದ ಅಗತ್ಯವಿದೆ.

ಕಾಳುಗಳು ಮೊಳಕೆ ಬರುವ ಸಂದರ್ಭದಲ್ಲಿ ಎಕೋಲಿ ರೀತಿಯ ಅನೇಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗುತ್ತವೆ. ಇವು ಬೇರೆ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.

ಇನ್ನು, ಪ್ರತಿದಿನ ಮೊಳಕೆ ಕಾಳುಗಳನ್ನು ಸೇವಿಸುವುದು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ ಎಂದು ಆಯುರ್ವೇದ ಹೇಳುತ್ತದೆ.

ಹೀಗೆ, ಪ್ರತಿದಿನ ಮೊಳಕೆ ಕಾಳು ಸೇವನೆಯಿಂದ ಅಜೀರ್ಣ ಮತ್ತು ಮಲಬದ್ಧತೆ ಉಂಟಾಗುವ ಸಾಧ್ಯತೆಯಿರುತ್ತದೆ. ಮೊಳಕೆ ಬರಿಸಿದ ಕಾಳುಗಳನ್ನು ಬೇಯಿಸದೇ ಪ್ರತಿನಿತ್ಯ ಸೇವಿಸಿದರೆ,

ಮೂಲವ್ಯಾಧಿ ಅಥವಾ ಮಲಬದ್ಧತೆಗೆ ಕಾರಣವಾಗುತ್ತದೆ. ಮೊಳಕೆ ಕಾಳುಗಳು ಸರಿಯಾಗಿ ಜೀರ್ಣವಾಗದೇ ಹೋದರೆ, ಹೊಟ್ಟೆಯುಬ್ಬರ, ಮಲಬದ್ಧತೆ ಹಾಗೂ ಹೊಟ್ಟೆನೋವಿಗೂ ಕಾರಣವಾಗುತ್ತದೆ.

ಇದನ್ನೂ ಓದಿ : https://vijayatimes.com/bommai-about-border-dispute/

ಇಂತಹ ಆರೋಗ್ಯ ಸಮಸ್ಯೆಗಳ ಜೊತೆಗೂ ಪೈಲ್ಸ್ ಗೂ ಕಾರಣವಾಗಬಹುದು. ಹಾಗಾಗಿ, ವೃದ್ಧರು, ಪುಟ್ಟ ಮಕ್ಕಳು, ಅನಾರೋಗ್ಯ ಹೊಂದಿದ ವ್ಯಕ್ತಿಗಳು ಮತ್ತು ದುರ್ಬಲ ಜೀರ್ಣಕ್ರಿಯೆ ಹೊಂದಿರುವವರು ಮೊಳಕೆ ಕಾಳು ಸೇವನೆ ಮಾಡದಿರುವುದು ಒಳ್ಳೆಯದು. ಈ ಎಲ್ಲಾ ಕಾರಣಗಳಿಂದಾಗಿ, ಮೊಳಕೆಯೊಡೆದ ಕಾಳುಗಳನ್ನು ಹಾಗೆಯೇ ತಿನ್ನುವುದಕ್ಕಿಂತ ಬೇಯಿಸಿ ತಿನ್ನುವುದೇ ಸೂಕ್ತ ಎನ್ನುವುದು ತಜ್ಞರ ಸಲಹೆಯಾಗಿದೆ.

Exit mobile version