ಪತ್ರಕರ್ತ ಕಿರಣ್ ಪೊಜಾರಿಯ ವಿರುದ್ಧ ಸುಳ್ಳು ಕೇಸ್ ಹಾಕಿ ಅರೆಸ್ಟ್ ಮಾಡಿಸಿದ ನಕಲಿ ವೈದ್ಯನ ವಿರುದ್ಧ FIR!

Fake doctor

ನಕಲಿ(Fake) ಅಲೋಪತಿ ವೈದ್ಯಕೀಯ(Aloepathy Doctor) ಜಗತ್ತಿನ ವಿರುದ್ಧ ಹೋರಾಟ ಮಾಡಿದ ಸ್ಟಿಂಗ್ ಪತ್ರಕರ್ತ,

Kiran Poojary

ಸಾಮಾಜಿಕ ಕಾಳಜಿಯ ಹೋರಾಟಗಾರ ಕಿರಣ್ ಪೂಜಾರಿಯವರು(Kiran Poojary) ನೀಡಿದ ದಾಖಲೆಯನ್ನು ಪರಿಶೀಲಿಸಿ ನಕಲಿ ವೈದ್ಯ ಚಂದ್ರಶೇಖರ ಶೆಟ್ಟಿ(Chandrshekar Shetty) ಅವರ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿ ಡಾಕ್ಟರ್ ನಾಗಭೂಷಣ್ ಉಡುಪ ಸಲ್ಲಿಸಿದ ಮಾಹಿತಿಯ ಮೇರೆಗೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಎಂ ಕೂರ್ಮಾರಾವ್ ಎಫ್ಐಆರ್ ದಾಖಲಿಸಿ 5 ಮೆಂಬರ್ ಕಮಿಟಿಯನ್ನು ಮುಂದಿನ ತನಿಖೆಗೆ ನಿಯೋಜಿಸಿದೆ.

ಹಾಗೆಯೇ ಇನ್ನುಳಿದ ಹತ್ತು ನಕಲಿ ಅಲೋಪತಿ ವೈದ್ಯರ ಮೇಲೆ ಇದೇ ರೀತಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ . ಇನ್ನಾದರೂ ಜಿಲ್ಲಾಡಳಿತ , ತಾಲೂಕು ಆರೋಗ್ಯಾಧಿಕಾರಿ ಇಂತಹ ನಕಲಿ ಅಲೋಪತಿ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಎಲ್ಲರ ಆಶಯ. ಇನ್ನೂ ದಾಖಲೆಗಳ ಪ್ರಕಾರ ಸುಮಾರು 25 ನಕಲಿ ಅಲೋಪತಿ ವೈದ್ಯರ ವಿರುದ್ಧ ಶೀಘ್ರದಲ್ಲೇ ಅವರು ಮಾಡಿರುವ ಅಕ್ರಮದ ಬಗ್ಗೆ ದಾಖಲೆಗಳು ಜಿಲ್ಲಾಡಳಿತ ಕೈ ಸೇರಲಿದೆ. ಆದಷ್ಟು ಬೇಗ ನಕಲಿ ಅಲೋಪತಿ ವೈದ್ಯರ ವಿರುದ್ಧ ಜಿಲ್ಲಾಡಳಿತ ಮತ್ತು ಜಿಲ್ಲಾ ಅರೋಗ್ಯಾಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಂಡು ರಾಜ್ಯಕ್ಕೆ ಮಾದರಿಯಾಗಬೇಕಾಗಿದೆ.

Chandrashekar shetty

ನಿಷ್ಟಾವಂತ ಪತ್ರಕರ್ತರ ಮೇಲೆ ರಾಜಕೀಯ ಬೆಂಬಲ ಬಳಿಸಿ ಸುಳ್ಳು ಕೇಸ್ ದಾಖಲಿಸಿದ ಆರೋಪಿಯ ವಿರುದ್ಧ ಜಿಲ್ಲಾಡಳಿತ FIR ಮಾಡಿ 5 ಮೆಂಬರ್ ತನಿಖೆ ತಂಡವನ್ನು ನೇಮಿಸಿದ್ದು, ಶ್ಲಾಘನೀಯ.
ಅಷ್ಟೇ ಅಲ್ಲದೆ ಈಗಾಗಲೇ ನಕಲಿ ಅಲೋಪತಿ ವೈದ್ಯರಿಗೆ ಅಲೋಪತಿ ಔಷಧವನ್ನು ನೀಡುತ್ತಿದ್ದ ಕೆಲವು ಔಷಧ ಡಿಸ್ತ್ರುಬ್ಯೂಟರ್ಸ್ ಅಮಾನತು ಮಾಡಿದ್ದಾರೆ ಎಂದು ಡ್ರಗ್ ಕಂಟ್ರೋಲರ್ ಕೆ.ವಿ ನಾಗರಾಜ್ ತಿಳಿಸಿದ್ದಾರೆ.

ಹಾಗೂ ಕೆಪಿಎಂಎ ಆ್ಯಕ್ಟ್ ಅಡಿಯಲ್ಲಿ ಬರುವ ನಿಯಮಗಳನ್ನು ಚಾಚೂ ತಪ್ಪದಂತೆ ಜಿಲ್ಲಾಡಳಿತ ಪಾಲಿಸಬೇಕೆಂದು ಅಧಿಕೃತವಾಗಿ ಘೋಷಿಸಬೇಕು ಎಂಬುವುದು ಸಾರ್ವಜನಿಕರ ಆಕ್ರೋಶವಾಗಿದೆ .

Exit mobile version