ಬೆಂಗಳೂರು (ಜೂ.30) : ಇದೀಗ ರಾಜ್ಯಾದ್ಯಂತ ನಕಲಿ ನೋಟು(Fake Note) ಚಲಾವಣೆ ಮತ್ತು ಹಾವಳಿ ಮತ್ತೆ ಶುರುವಾಗಿದೆ ಈಗಾಗಲೇ ಕೇವಲ ಎರಡು ದಿನದಲ್ಲಿ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. 100 ರೂಪಾಯಿ ಮುಖಬೆಲೆಯ 30 ನಕಲಿ ನೋಟುಗಳು ರಾಜ್ಯದ ಉಡುಪಿ(Udupi) , ಹುಬ್ಬಳ್ಳಿ(Hubli), ಮಣಿಪಾಲ(Manipal) ಮತ್ತು ಮಲ್ಲೇಶ್ವರ(Malleshwaram) ಬ್ರಾಂಚ್ ನ ಬ್ಯಾಂಕ್ ಗಳಲ್ಲಿ ಪತ್ತೆಯಾಗಿವೆ. ಈ ನಕಲಿ ನೋಟುಗಳು RBI ಗೆ ರಿಮೀಟ್ ಮಾಡುವ ಸಂಧರ್ಭದಲ್ಲಿ ಪತ್ತೆಯಾಗಿದೆ.

ಒಂದು ವೇಳೆ ನಕಲಿ ನೋಟುಗಳ ಚಲಾವಣೆಯಾದರೆ ಆ ಸಂದರ್ಭದಲ್ಲಿ ಆಯಾ ಬ್ಯಾಂಕ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗಿದೆ, ಈ ಸಂಬಂಧ ಒಟ್ಟು ನಾಲ್ಕು ಎಫ್‌ಐ ಆರ್ ಗಳನ್ನು(FIR) ಹಲವು ಬ್ಯಾಂಕ್‌ಗಳ ವಿರುದ್ಧ ದಾಖಲಿಸಲಾಗಿದೆ. ಆಯಾ ಬ್ಯಾಂಕ್‌ಗಳೇ ಇನ್ನು ಮುಂದೆ ನಕಲಿ ನೋಟುಗಳ ಪ್ರಕರಣಗಳಿಗೆ ಹೊಣೆ ಆಗಲಿದೆ .
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಇದೀಗ ಬ್ಯಾಂಕ್ ಆಫ್ ಬರೋಡಾ(Bank Of Baroda) , ಯುಬಿಐ ಬ್ಯಾಂಕ್(UBI Bank) , ಕೆನರಾ ಬ್ಯಾಂಕ್(Canara Bank) , ಮ್ಯಾನೇಜರ್ ಮೇಲೆ ನಕಲಿ ನೋಟುಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಬಿಐ(RBI) ಮ್ಯಾನೇಜರ್ ಆನಂದ ದೂರು ನೀಡಿದ್ದಾರೆ. ಈ ನಕಲಿ ನೋಟುಗಳ ಹಾವಳಿ ಬಗ್ಗೆ ಹಲಸೂರ್ ಗೇಟ್(Halsur Gate) ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು ನಂತರ ನಕಲಿ ನೋಟು ಜಾಲದ ಹಿಂದೆ ಬಿದ್ದ ಪೊಲೀಸರು.

ಕಳೆದ ವರ್ಷ ಅಪಾರ ಪ್ರಮಾಣದಲ್ಲಿ ನಕಲಿ ನೋಟುಗಳ ಪ್ರಕರಣ ದಾಖಲಾಗಿತ್ತು ಅದಾದ ನಂತರ ಆ ಪ್ರಕರಣಗಳ ಬಳಿಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಯಿತು ನಂತರ ಈ ನಕಲಿ ನೋಟುಗಳ ಹಾವಳಿ ನಿಯಂತ್ರಣಕ್ಕೆ ಬಂದಿತ್ತು ನಂತರದ ದಿನಗಳಲ್ಲಿ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿರಲಿಲ್ಲ. ಆದರೆ ಈಗ ರಾಜ್ಯಾದ್ಯಂತ ಅನೇಕ ಜಿಲ್ಲೆಗಳಲ್ಲಿ ನಕಲಿ ನೋಟು ಪತ್ತೆಯಾಗಿರುವುದು ಶಾಕ್ ನೀಡಿದೆ.
ರಶ್ಮಿತಾ ಅನೀಶ್