Cricket : ಕ್ರೀಡಾಂಗಣದಲ್ಲೇ ಬಡಿದಾಡಿಕೊಂಡ  ಪಾಕ್‌– ಅಫ್ಘಾನಿಸ್ತಾನ ಅಭಿಮಾನಿಗಳು ; ವಿಡಿಯೋ ವೈರಲ್‌!

Dubai : ಏಷ್ಯಾಕಪ್‌ನಲ್ಲಿ(Asia Cup 2022) ನಿನ್ನೆ ನಡೆದ ಪಾಕಿಸ್ತಾನ(Pakistan) ಮತ್ತು ಅಫ್ಘಾನಿಸ್ತಾನ(Afghanisthan) ಪಂದ್ಯದ ನಂತರ ಎರಡು ದೇಶಗಳ ಅಭಿಮಾನಿಗಳು ಪರಸ್ಪರ ಕುರ್ಚಿಗಳಿಂದ ಬಡಿದಾಡಿಕೊಂಡಿದ್ದಾರೆ. 

ಇದನ್ನೂ ಓದಿ : https://vijayatimes.com/siddaramaiah-slams-bjp-sunil-kumar-2/

ಏಷ್ಯಾಕಪ್‌ನಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನವನ್ನು ಸೋಲಿಸಿದ(Fans fight at asia cup cricket match) ನಂತರ ಎರಡು ತಂಡಗಳ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುರ್ಚಿಗಳಿಂದ ಪರಸ್ಪರ ಹೊಡೆದಾಡಿಕೊಂಡು, ದಾಂಧಲೆ ನಡೆಸಿದ್ದಾರೆ.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ(Shaarja Cricket Stadium) ನಿನ್ನೆ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಪಾಕಿಸ್ತಾನ ವಿರುದ್ಧ ಸೋತ ನಂತರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದೆ. ಎರಡೂ ತಂಡಗಳ ಬೆಂಬಲಿಗರು ಪರಸ್ಪರ ಕುರ್ಚಿಗಳಿಂದ ಹೊಡೆದಿದ್ದರಿಂದ ಘರ್ಷಣೆ ವಿಕೋಪಕ್ಕೆ ತಿರುಗಿತು.

ಏಷ್ಯಾಕಪ್‌ನಲ್ಲಿ ತಮ್ಮ ತಂಡ ಅಫ್ಘಾನಿಸ್ತಾನ ತಂಡವನ್ನು  ಸೋಲಿಸಿದ ನಂತರ ಅಫ್ಘಾನ್ ಅಭಿಮಾನಿಗಳು ಪಾಕಿಸ್ತಾನಿ ಅಭಿಮಾನಿಗಳನ್ನು ಕ್ರೀಡಾಂಗಣದಲ್ಲಿ ಹೊಡೆದಿದ್ದಾರೆ. “ಅಫ್ಘಾನಿಸ್ತಾನ್ ಜಿಂದಾಬಾದ್” ಎಂಬ ಘೋಷಣೆಗಳನ್ನು ಎತ್ತಿದ ಅಭಿಮಾನಿಗಳು ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಅನ್ನು ಧ್ವಂಸ ಮಾಡಲು ಪ್ರಾರಂಭಿಸಿದರು ಎಂದು ಪಾಕ್‌ ಆರೋಪಿಸಿದೆ.

ಇದನ್ನೂ ಓದಿ : https://vijayatimes.com/man-who-fooled-everybody-by-his-incident/

ದುಬೈನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ  ನಿನ್ನೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ನೀಡಿದ 130 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ, ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡು, ಕೊನೆಯ ಓವರ್‌ನಲ್ಲಿ 11 ರನ್‌ಗಳನ್ನು ಗಳಿಸಬೇಕಿತ್ತು. 

https://twitter.com/shoaib100mph/status/1567589651598172161

ಈ ವೇಳೆಯಲ್ಲಿ  ಪಾಕಿಸ್ತಾನದ ನಂ.10 ಬ್ಯಾಟರ್ ನಸೀಮ್ ಶಾ ಅಂತಿಮ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಗೆಲುವು ಸಾಧಿಸಲು ಕಾರಣರಾದರು.

 https://twitter.com/Meme_Canteen/status/1567585227295301633

ಪಂದ್ಯದ ನಂತರ ಪಾಕ್‌ ಮತ್ತು ಅಫ್ಘಾನಿಸ್ತಾನ್ ಅಭಿಮಾನಿಗಳ ಮಧ್ಯೆ ಸಂಘರ್ಷ ಪ್ರಾರಂಭವಾಗಿ ವಿಕೋಪಕ್ಕೆ ತಿರುಗಿತು. ಅಂತಿಮವಾಗಿ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
Exit mobile version