ಕಾಶ್ಮೀರ ಎಂದಿಗೂ ಭಾರತದ ಅಂಗ – ಫಾರುಕ್ ಅಬ್ದುಲ್ಲಾ

ಶ್ರೀನಗರ ಅ 14 : ಕಾಶ್ಮೀರ ಭಾರತದ ಭಾಗವಾಗಿದ್ದು, ಅದು ಎಂದಿಗೂ ಪಾಕಿಸ್ತಾನಕ್ಕೆ ಸೇರುವುದಿಲ್ಲ. ನನ್ನನು ಪಾಕಿಸ್ತಾನದವರು ಕೊಂದರೂ ಕೂಡ ಕಾಶ್ಮೀರ ಭಾರತದ ಭಾಗವೇ ಆಗಿರುತ್ತದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ  (ಎನ್‌ಸಿ) ಫಾರುಕ್ ಅಬ್ದುಲ್ಲಾ ಹೇಳಿದರು.

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, , “ನಾವು ಈ ಪ್ರಾಣಿಗಳ ವಿರುದ್ಧ ಹೋರಾಡಬೇಕು. ಕಾಶ್ಮೀರ ಎಂದಿಗೂ ಪಾಕಿಸ್ತಾನವಾಗುವುದಿಲ್ಲ, ನೆನಪಿಡಿ. ನಾವು ಭಾರತದ ಭಾಗವಾಗಿದ್ದೇವೆ ಮತ್ತು ಏನೇ ಆಗಲಿ ನಾವು ಭಾರತದ ಭಾಗವಾಗಿರುತ್ತೇವೆ. ಅವರು ನನಗೆ ಗುಂಡು ಹಾರಿಸಿದರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕೌರ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ ಅಬ್ದುಲ್ಲಾ, 1990 ರ ದಶಕದಲ್ಲಿ ಸಿಖ್ ಸಮುದಾಯವು ಕಾಶ್ಮೀರವನ್ನು ತೊರೆಯಲಿಲ್ಲ, ಅನೇಕ ಜನರು ಭಯದಿಂದ ಕಣಿವೆಯನ್ನು ತೊರೆದರು. ನಾವು ನಮ್ಮ ಮನೋಬಲವನ್ನು ಹೆಚ್ಚಿಸಿಕೊಂಡು ಧೈರ್ಯದಿಂದ ಇರಬೇಕು ಎಂದು ಹೇಳಿದರು.. ನಾವು ಧೈರ್ಯದಿಂದ ಹೋರಾಡಬೇಕು. ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕನನ್ನು ಕೊಲ್ಲುವುದು ಇಸ್ಲಾಂ ಸೇವೆ ಅಲ್ಲ, ಅವರು ಭೂತದ ಸೇವೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಶ್ಮೀರವನ್ನು ಪಡೆಯುವ ಉಗ್ರರ ಯೋಜನೆಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ಅದು ವಿಫಲವಾಗುತ್ತದೆ. ಆದರೆ, ಮುಸ್ಲಿಮರು, ಸಿಬ್ಬರು, ಹಿಂದೂಗಳು ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲರೂ ಅವರ ವಿರುದ್ಧ ಹೋರಾಡಲು ಒಂದಾಗಬೇಕಿದೆ ಎಂದು ಫಾರುಕ್ ಅಬ್ದುಲ್ಲಾ ಹೇಳಿದರು.

Exit mobile version