ಏಷ್ಯನ್ ಗೆಮ್ಸ್ 2023: ಆಫ್ರಿಕಾ ಮೂಲದ ಅಥ್ಲೀಟ್ಗಳು ಇರದೇ ಇದ್ದಲ್ಲಿ, ಭಾರತ ಇನ್ನೂ ಹೆಚ್ಚಿನ ಪದಕ ಗೆಲ್ತಿತ್ತು – ಎಫ್ಐ ಅಧ್ಯಕ್ಷ

New Delhi: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೆಮ್ಸ್ನಲ್ಲಿ (fi president about asian games) ಭಾರತ ಈ ಬಾರಿ ಅತ್ಯುತ್ತಮ ಸಾಧನೆ ಮಾಡಿದೆ. ಈ ಕುರಿತು ಪ್ರತಿಕ್ರಿಯೆ

ನೀಡಿರುವಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಅಧ್ಯಕ್ಷ ಆದಿಲ್ ಸುಮರಿವಾಲಾ ಅವರು, ಕೆಲವು ಏಷ್ಯನ್ ದೇಶಗಳು ಪದಕಗಳನ್ನು ಗೆಲ್ಲಬೇಕೆಂದು ದುರಾಸೆಯಿಂದಾಗಿ,

ಆಫ್ರಿಕನ್ ಮೂಲದ ಅಥ್ಲೀಟ್ಗಳನ್ನು (fi president about asian games) ತಮ್ಮ ದೇಶದ ಪರವಾಗಿ ಕಣಕ್ಕಿಳಿಸದೇ ಇದ್ದಲ್ಲಿ ಭಾರತ ಇನ್ನೂ ಹೆಚ್ಚಿನ ಪದಕಗಳನ್ನು ಗೆಲ್ಲುತ್ತಿತ್ತು

ಎಂದು ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ಹ್ಯಾಂಗ್ಝೌನಲ್ಲಿ (Hangzhou) ನಡೆಯುತ್ತಿರುವ ಏಷ್ಯನ್ ಗೆಮ್ಸ್ನಲ್ಲಿ ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ಗಳ ಪ್ರದರ್ಶನದ ಬಗ್ಗೆ ಅತೀವ ಸಂತೋಷವನ್ನು ವ್ಯಕ್ತಪಡಿಸಿರುವ ಅಥ್ಲೆಟಿಕ್ಸ್

ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಸುಮರಿವಾಲಾ ಅವರು, ಭಾರತದಿಂದ, 65 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇವುಗಳಲ್ಲಿ 6 ಚಿನ್ನ, 14 ಬೆಳ್ಳಿ ಮತ್ತು 9 ಕಂಚು ಸೇರಿವೆ.

ಆದರೆ ಆಫ್ರಿಕನ್ ಅಥ್ಲೀಟ್ಗಳಿಂದಾಗಿ ಭಾರತ ಕನಿಷ್ಠ 7 ಚಿನ್ನದ ಪದಕಗಳು ಮತ್ತು 5 ಬೆಳ್ಳಿ ಪದಕಗಳನ್ನು ಅಥ್ಲೆಟಿಕ್ಸ್ನಲ್ಲಿ ಕಳೆದುಕೊಂಡಿದೆ. ಇನ್ನು ಅಫ್ರಿಕಾ ಮೂಲದ ಅಥ್ಲೀಟ್ಗಳು ಏಷ್ಯಾದ ಬೇರೆ ದೇಶಗಳ

ಪರವಾಗಿ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಹಿಂದೆಯೂ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಅಧ್ಯಕ್ಷ ಆದಿಲ್ ಸುಮರಿವಾಲಾ (Adil Sumariwalla) ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಏಷ್ಯನ್ ಗೆಮ್ಸ್ನಲ್ಲಿ ಏಳು ಭಾರತೀಯ ಅಥ್ಲೀಟ್ಗಳು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡಿದರೆ, ಮೂವರು ಅಥ್ಲೀಟ್ಗಳು ಹೊಸ ರಾಷ್ಟ್ರೀಯ ದಾಖಲೆಗಳನ್ನು ಬರೆದರು, ಇಬ್ಬರು ಹೊಸ

ಏಷ್ಯನ್ ಗೇಮ್ಸ್ ದಾಖಲೆಗಳನ್ನು ಬರೆದಿದ್ದಾರೆ. ಒಟ್ಟಾರೆಯಾಗಿ ಚೀನಾದ ಹ್ಯಾಂಗ್ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಯಶಸ್ಸಿಗೆ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್

(Athletics Federation) ಗ್ರಾಮೀಣ ಮಟ್ಟದಲ್ಲಿ ಮಾಡಿದ ಕಾರ್ಯಕ್ರಮಗಳೇ ಕಾರಣವಾಗಿವೆ. ಭಾರತದ ಗ್ರಾಮೀಣ ಪ್ರತಿಭೆಗಳು ಈ ಬಾರಿ ಉತ್ತಮ ಪ್ರದರ್ಶನ ತೋರಿವೆ ಎಂದು ಆದಿಲ್

ಸುಮರಿವಾಲಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : ಭಾರತ ಒಂದು ಸ್ವತಂತ್ರ್ಯ ದೇಶ ಅದರ ತಂಟೆಗೆ ಹೋಗಬೇಡಿ: ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ

Exit mobile version