Sochi: ನಾಗರಿಕರ ಹಿತಾಸಕ್ತಿಗಾಗಿ ಭಾರತ ಸರ್ಕಾರವು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದು, ರಷ್ಯಾ (Ind is Powerful Country – Putin) ಮತ್ತು ಭಾರತದ ಮಧ್ಯೆ ಕಿತ್ತಾಟ ಸೃಷ್ಟಿಸುವ
ಪಶ್ಚಿಮದ ಯಾವುದೇ ಪ್ರಯತ್ನಗಳು ಕೈಗೂಡುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ದೇಶಗಳು ಸಂಕಷ್ಟದಲ್ಲಿ ಇರುವವರ ಮಧ್ಯೆ ವೈರತ್ವ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಭಾರತದ ವಿಚಾರದಲ್ಲಿಯೂ ಕೂಡ ಈ ಪ್ರಯತ್ನ ನಡೆಯುತ್ತಿದೆ. ಆದರೆ ಭಾರತದ ನಾಯಕತ್ವವು ತನ್ನ
ದೇಶದ ಹಿತಾಸಕ್ತಿಗೆ ಅನುಗುಣವಾಗಿ ಸ್ವತಂತ್ರವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಸೋಚಿಯ ರಷ್ಯನ್ ಬ್ಲ್ಯಾಕ್ ಸೀ ರೆಸಾರ್ಟ್ನಲ್ಲಿ (Black Sea Resort) ಮಾಡಿದ ಭಾಷಣದಲ್ಲಿ ಪುಟಿನ್ ಮಾತನಾಡಿದ್ದಾರೆ.
ಭಾರತ ಒಂದು ಸ್ವತಂತ್ರ ದೇಶ ಹಾಗಾಗಿ ಭಾರತವನ್ನು ರಷ್ಯಾದಿಂದ ದೂರ ಸರಿಸುವ ಪ್ರಯತ್ನಗಳು ನಿಷ್ಪ್ರಯೋಜಕ ಎಂದು ಪುಟಿನ್ ಅವರು ಉಕ್ರೇನ್ (Ukraine) ವಿರುದ್ಧದ ಯುದ್ಧದ ವಿಚಾರವಾಗಿ ರಷ್ಯಾ
ಪ್ರತಿಕ್ರಿಯೆ ನೀಡುವಂತೆ ಅಮೆರಿಕ ಹಾಗೂ ಇತರೆ ದೇಶಗಳು ಭಾರತದ ಮೇಲೆ ಒತ್ತಡ ಹೇರಿದ್ದರ ಕುರಿತು (Ind is Powerful Country – Putin) ಅಸಮಾಧಾನ ವ್ಯಕ್ತಪಡಿಸಿದರು.
ರಷ್ಯಾವು ಉಕ್ರೇನ್ ಜೊತೆ ಯುದ್ಧ ಆರಂಭಿಸಿದ ನಂತರ ಪಶ್ಚಿಮ ದೇಶಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದವು. ಇದರ ಬೆನ್ನಲ್ಲೇ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಆಮದು
ಮಾಡಿಕೊಳ್ಳಲು ಆರಂಭಿಸಿತ್ತು. ಇದನ್ನು ವಿವಿಧ ದೇಶಗಳು ಟೀಕಿಸಿದ್ದವು. ರಷ್ಯಾ ಜೊತೆಗಿನ ವ್ಯವಹಾರ ನಿಲ್ಲಿಸುವಂತೆ ಒತ್ತಡ ಹೇರಲು ಪ್ರಯತ್ನಿಸಿದ್ದವು. ಆದರೆ ಇವುಗಳಿಗೆ ಭಾರತ ಕಿವಿಗೊಟ್ಟಿರಲಿಲ್ಲ.
150 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಭಾರತವು ಹೊಂದಿದ್ದು, ಆರ್ಥಿಕ ಪ್ರಗತಿಯು ಶೇ 7ಕ್ಕಿಂತ ಅಧಿಕ ಪಾಲು ಹೊಂದಿದೆ. ಅದು ಬಹಳ ಶಕ್ತಿಶಾಲಿ ಹಾಗೂ ಬೃಹತ್ ದೇಶ. ಪ್ರಧಾನಿ ನರೇಂದ್ರ ಮೋದಿ
(Narendra Modi) ಅವರ ನಾಯಕತ್ವದ ಅಡಿಯಲ್ಲಿ ಅದು ಇನ್ನಷ್ಟು ಪ್ರಬಲವಾಗಿ ಬೆಳೆಯುತ್ತಿದೆ” ಎಂದು ಪ್ರಶಂಸಿಸಿದರು. ರಷ್ಯಾದಂತೆಯೇ ಭಾರತಕ್ಕೆ ಯಾವುದೇ ಗಡಿಗಳಿಲ್ಲ ಮತ್ತು ಭಾರತೀಯರು
ಜಗತ್ತಿನ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ತಮ್ಮ ಹೆಗ್ಗುರುತು ಮೂಡಿಸಿದ್ದಾರೆ ಎಂದು ಹೇಳಿದರು.
- ಭವ್ಯಶ್ರೀ ಆರ್,ಜೆ