ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸಿದರೆ ಹೋರಾಟ – ಬಿ.ಕೆ ಹರಿಪ್ರಸಾದ್

ಬೆಂಗಳೂರು, ಆ. 10: ಇಂದಿರಾ ಕ್ಯಾಂಟಿನ್ ಗೆ ಇಟ್ಟಿರುವ ಇಂದಿರಾಗಾಂಧಿ ಅವರ ಹೆಸರನ್ನು ಬದಲಾಯಿಸಿದರೆ ಪರಿಣಾಮ  ನೆಟ್ಟಗಿರೋದಿಲ್ಲ ಹಾಗೇನಾದರೂ ಬದಲಾವಣೆ ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ, ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಾವರ್ಕರ್, ದೀನ್ ದಯಾಳ ಉಪಾಧ್ಯಾಯ, ಶ್ಯಾಂ ಪ್ರಕಾಶ್ ಮುಖರ್ಜಿ ಇವರೆಲ್ಲರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಇವರು ಸ್ವಾತಂತ್ರ್ಯಕ್ಕೆ ವಿರೋಧವಾಗಿದ್ದರು. ಇವರೆಲ್ಲಾ ಬ್ರಿಟಿಷ್ ಎಜೆಂಟರಾಗಿದ್ದರು. ಆದರೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ್ದಾರೆ ಹಾಗಾಗಿ ಇಂದಿರಾ ಕ್ಯಾಂಟಿನ್ ಗೆ ಇಟ್ಟಿರುವ ಇಂದಿರಾ ಗಾಂಧಿ ಅವರ ಹೆಸರನ್ನು ತೆಗೆದರೆ ಸಾವರ್ಕರ್, ದೀನ್ ದಯಾಳ ಉಪಧ್ಯಾಯ, ಶ್ಯಾಂ ಪ್ರಕಾಶ್ ಮುಖರ್ಜಿ ಅವರ ಹೆಸರಿಟ್ಟಿರೊ ಕಡೆಗೆಲ್ಲಾ ಮಸಿ ಬಳಿಯುದಾಗಿ ಎಚ್ಚರಿಸಿದ್ದಾರೆ. ಜೊತೆಗೆ ಇಂದಿರಾ ಕ್ಯಾಂಟಿನ್ ಗೆ ಇಂದಿರಾ ಗಾಂಧಿ ಅವರ ಹೆಸರನ್ನು ತೆಗೆದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂದು ಬಿಜೆಪಿ ವಿರುದ್ದ ಅವರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ.

ಖೇಲ್ ರತ್ನ ಹೆಸರು ಬದಲಾವಣೆಗೂ ಆಕ್ರೋಶ :

ರಾಜೀವ್ ಗಾಂಧಿ ಹೆಸರಿನಲ್ಲಿದ್ದ ಪ್ರಶಸ್ತಿಯ ಹೆಸರನ್ನು ಬದಲಾಯಿಸಿದ ಬಗ್ಗೆ ಆಕ್ರೋಶ ವ್ಯೆಕ್ತ ಪಡಿಸಿದ ಅವರು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಧ್ಯಾನ್ ಚಂದ್ ಹೆಸರಿನಲ್ಲಿ 5 ಲಕ್ಷ ಮೊತ್ತದ ಪ್ರಶಸ್ತಿಯನ್ನು ಹಾಕಿಯಲ್ಲಿ ಸಾಧನೆ ಮಾಡಿದವರಿಗಾಗಿ ಮೀಸಲಿಟ್ಟಿದ್ದರು. ಅದರೆ ಈಗ ಖೇಲ್ ರತ್ನ ಹೆಸರು ಬದಲಾವಣೆ ಮಾಡಿದ್ದಾರೆ, ಜೊತಗೆ ಸರ್ದಾರ್  ವಲ್ಲಭಬಾಯಿ ಪಟೇಲ್ ಹೆಸರಿನಲ್ಲಿದ್ದ ಕ್ರೀಡಾಂಗಣವನ್ನು ಮೋದಿ ತಮ್ಮ ಹೆಸರಿಗೆ ಬದಲಾಯಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

Exit mobile version