ಹೊಸ ಆದಾಯ ತೆರಿಗೆ ವೆಬ್‌ಸೈಟ್‌ನ ಸಮಸ್ಯೆಯನ್ನು ಸರಿಪಡಿಸುವಂತೆ ಸೂಚಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ, ಜೂ. 08: ಆದಾಯ ತೆರಿಗೆ ಇಲಾಖೆ ಹೊಸ ಇ- ಫೈಲಿಂಗ್​ ವೆಬ್​ಸೈಟ್​ನಲ್ಲಿ ದೋಷ ಕಂಡು ಬಂದಿದೆ. ಇದರಿಂದ ತೆರಿಗೆದಾರರು ಸಮಸ್ಯೆ ಅನುಭವಿಸುವಂತೆ ಆಗಿದ್ದು, ಇದನ್ನು ಸರಿಪಡಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇನ್ಫೋಸಿಸ್​ ಮತ್ತು ನಂದನ್​ ನಿಲೇಕಣಿ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಸಮಸ್ಯೆ ಶೀಘ್ರದಲ್ಲಿಯೇ ಬಗೆಹರಿಯಲಿದ್ದು, ತೇರಿಗೆದಾರರನ್ನು ನಮ್ಮ ಸೇವೆ ಗುಣಮಟ್ಟದಲ್ಲಿ ನಿರಾಸೆಗೊಳಿಸುವುದಿಲ್ಲ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

ಹೊಸದಾಗಿ ಆರಂಭಗೊಂಡಿರುವ ಈ ಪೋರ್ಟ್​ಲ್​ನಲ್ಲಿ ಸಮಸ್ಯೆ ಕಂಡು ಬಂದ ತಕ್ಷಣ ಸೇವಾದಾರರು ಈ ಕುರಿತು ನಿರ್ಮಲಾ ಸೀತಾರಾಮನ್​ ಅವರ ಗಮನ ಸೆಳೆದಿದ್ದಾರೆ. ಈ ಕುರಿತು ಟ್ವೀಟ್​ ಮೂಲಕ ತಿಳಿಸಿರುವ ವಿತ್ತ ಸಚಿವರು, ಬಹುನಿರೀಕ್ಷಿತ ಇ ಫೈಲಿಂಗ್​ ಪೋರ್ಟಲ್​ 2.0 ಅನ್ನು ಕಳೆದ ರಾತ್ರಿ ಅಂದರೆ ಜೂನ್​ 7ರ ಸೋಮವಾರ ರಾತ್ರಿ 10-45ಕ್ಕೆ ಪ್ರಾರಂಭಿಸಲಾಗಿದೆ. ಈ ಪೋರ್ಟಲ್​ನ ಟೈಮ್​ಲೈನ್​ನಲ್ಲಿ ತೊಂದರೆಗಳು ಕಂಡು ಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಈ ಸಮಸ್ಯೆಯನ್ನು ಶೀಘ್ರದಲ್ಲಿಯೇ ಐಟಿ ದಿಗ್ಗಜ ಇನ್ಫೋಸಿಸ್​ ಸಂಸ್ಥೆ ಮತ್ತು ನಂದನ್ ನಿಲೇಕಣಿ ಅವರು ಸರಿಮಾಡುವ ಭರವಸೆ ಹೊಂದಿದ್ದೇನೆ ಎಂದು ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ನೂತನ ತೆರಿಗೆ ಪಾವತಿ ಪೋರ್ಟಲ್​ ತೆರಿಗೆದಾರರಿಗೆ ಅನುಕೂಲವಾಗುವಂತೆ ಹಲವು ಹೊಸ ಫೀಚರ್​ಗೊಳಿಂದಿಗೆ ನಿನ್ನೆ ಹೊಸ ಇ ಫೈಲಿಂಗ್​ ವೆಬ್​ ಸೈಲ್​ ಪ್ರಾರಂಭ ಮಾಡಲಾಗಿದೆ. ವೆಬ್​ಸೈಟ್​ ಲಾಂಚ್​ ಬಳಿಕ ಮಾತನಾಡಿದ ಅಧಿಕಾರಿಗಳು, ಹೊಸದಾಗಿ ಪ್ರಾರಂಭಗೊಂಡಿರುವ ವೆಬ್​ತಾಣ ಜನರ ಬಳಕೆಗೆ ಸರಾಗವಾಗುವ ಮುನ್ನ ಅದು ಸ್ಥಿರತೆ ಪಡೆಯಲು ಕೆಲ ಸಮಯ ಪಡೆಯಲಿದ್ದು, ಬಳಿಕ ಜನರು ಬಳಕೆಗೆ ಮುಂದಾಬಹುದು ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಇ ಆಡಳಿತದ ಯೋಜನೆ ಅಡಿ ಈ ಪೋರ್ಟಲ್​ ಅಭಿವೃದ್ಧಿ ಪಡಿಸಲಾಗಿದೆ. ತೆರಿಗೆದಾರರು ಮತ್ತು ಇತರ ಮಧ್ಯಸ್ಥಗಾರರಿಗೆ ಆದಾಯ ತೆರಿಗೆ ಸಂಬಂಧಿತ ಸೇವೆಗಳಿಗೆ ಒಂದೇ ವೇದಿಕೆ ಒದಗಿಸುವುದು ಈ ಪೋರ್ಟಲ್​ನ ಉದ್ದೇಶವಾಗಿದೆ. ಸೋಮವಾರ ಪ್ರಾರಂಭವಾಗಿರುವ ಸೆಂಟ್ರಲ್​ ಬೋರ್ಡ್​ ಆಫ್​ ಡೈರೆಕ್ಟ್​ ಟಾಕ್ಸ್​ (ಸಿಬಿಡಿಟಿ) ಮೂಲಕ ಜನರು ಆನ್​ಲೈನ್​ ತೆರಿಗೆ ಪಾವತಿ ಮಾಡಲು ಹಾಗೂ ಮೊಬೈಲ್​ ನಲ್ಲಿ ಈ ಅಪ್ಲಿಕೇಶನ್​ ಬಳಸಲು ಜೂ 18ರವರೆಗೆ ಕಾಯವೇಕು ಎಂದು ಅಧಿಕಾರಿಗಳು ತಿಳಿಸಿದ್ದರು.

ಹೆಚ್ಚಿನ ಬಳಕೆದಾರರ ಆಗಮನದಿಂದ ಸಮಸ್ಯೆ ಈ ಪೋರ್ಟಲ್​ ಆರಂಭವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಆಗಮಿಸಿದ ಕಾರಣ ಈ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಏಕ ಕಾಲದಲ್ಲಿ ಹೆಚ್ಚಿನ ಜನರು ಈ ತಾಣಕ್ಕೆ ಭೇಟಿ ನೀಡಿದ ಪರಿಣಾಮ ಪೋರ್ಟಲ್​ನಲ್ಲಿ ಲೋಡ್​ ಮಾಡಲು ಹೆಚ್ಚಿನ ಸಮಯ ಪಡೆಯುತ್ತಿದೆ ಎಂದು ಕೆಲವರು ತಿಳಿಸಿದ್ದಾರೆ. ಶೀಘ್ರ ಮರುಪಾವತಿ ಆದಾಯ ತೆರಿಗೆ ರಿಟರ್ನ್ಸ್​​ ಅನ್ನು ಶೀಘ್ರ ಪ್ರಕ್ರಿಯೆಗಾಗಿ ಈ ಮರುಪಾವತಿ ಹೊಸ ಪೋರ್ಟ್​ಲ್​ ಅನ್ನು ಸಿದ್ದಪಡಿಸಲಾಗಿದೆ. ಈ ಮೂಲಕ ತೆರಿಗೆದಾರರರು ಮತ್ತು ಕೇಂದ್ರ ಮಂಡಳಿ ಎಲ್ಲಾ ಕಾರ್ಯಚಟುವಟಿಕೆಗಳು ಕುರಿತು ಒಂದೇ ಡ್ಯಾಶ್​ ಬೋರ್ಡ್​ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಇನ್ಫೋಸಿಸ್​ ಸಂಸ್ಥೆ 2017ರಲ್ಲಿ ಕೂಡ ಸರ್ಕಾರ ಜಿಎಸ್​ಟಿ ತೆರಿಗೆದಾರರು ಮತ್ತು ರಿಟನ್​ ಫೈಲಿಂಗ್​ಗಾಗಿ ಈ ಜಿಎಸ್​ಟಿಎನ್​ ​ ಪೋರ್ಟಲ್​ ಅನ್ನು ​ ಅಭಿವೃದ್ಧಿ ಪಡಿಸಿತು. ಈ ಸಂದರ್ಭದಲ್ಲಿ ಸಮಸ್ಯೆ ಕಂಡು ಬಂದು ತೊಂದರೆಯಾಗಿತ್ತು.

Exit mobile version