ದೆಹಲಿ ಮದ್ಯ ನೀತಿ ಪ್ರಕರಣ: ಇಡಿ ಅಧಿಕಾರಿಗಳಿಂದ ಕೆಸಿಆರ್ ಪುತ್ರಿ ಕೆ.ಕವಿತಾ ಬಂಧನ ತೆಲಂಗಾಣ ರಾಜಕೀಯದ ಮೇಲೆ ಭಾರಿ ಪರಿಣಾಮ .

New Delhi: ದೆಹಲಿ ಸರ್ಕಾರದ ಮಧ್ಯ ನೀತಿ ಅನುಷ್ಠಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ವಿಚಾರಣೆಗೆ ಒಳಪಟ್ಟಿದ್ದ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (K Chandrashekar Rao) ಅವರ ಪುತ್ರಿ ಹಾಗೂ ವಿಧಾನಪರಿಷತ್ ಸದಸ್ಯೆ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಹೈದರಾಬಾದ್ ನಿವಾಸದ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೆ ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು ವಿಚಾರಣೆಯ ಬಳಿಕ ಅವರನ್ನು ಬಂಧಿಸಿ ದೆಹಲಿಗೆ ಕರೆತರಲಾಗಿದೆ.

ಲೋಕಸಭೆ ಚುನಾವಣೆಯ ವೇಳಾಪಟ್ಟಿ ಘೋಷಣೆಗೆ ಕೇವಲ ಒಂದು ದಿನದ ಮೊದಲು ಈ ಬಂಧನ ನಡೆಸಿರುವುದು ತೆಲಂಗಾಣದ ರಾಜಕೀಯ ಪಕ್ಷಗಳ ಮೇಲೆ ಪರಿಣಾಮಗಳನ್ನು ಬೀರುವ ಹಲವಾರು ಸೂಚನೆಗಳು ಕಾಣುತ್ತಿವೆ.ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬೃಹತ್ ರಾಜಕೀಯ ರ್ಯಾಲಿ ಮತ್ತು ರೋಡ್‌ಶೋಗಾಗಿ ಹೈದರಾಬಾದ್‌ನಲ್ಲಿದ್ದ ದಿನವೇ ಈ ಬಂಧನ ನಡೆದಿರುವುದು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ವಾಸ್ತವವಾಗಿ, BRS ಪಕ್ಷದ ನಾಯಕಿ ಕವಿತಾ ಅವರ ಬಂಧನವು ಈಗಾಗಲೇ ತೊಂದರೆಗೀಡಾದ BRS ಮೇಲೆ ಹೊಸ ಒತ್ತಡದ ಅಲೆಯನ್ನು ಸೃಷ್ಟಿಸಿದೆ. ಸಾರ್ವಜನಿಕ ಬೆಂಬಲದ ಕೊರತೆ ಮತ್ತು ಪಕ್ಷಾಂತರಗೊಳ್ಳುತ್ತಿರುವ ಸದಸ್ಯರಿಂದಾಗಿ ಭಾರೀ ಸಮಸ್ಯೆಗೆ ಒಳಗಾಗಿದೆ. BRS ಪಕ್ಷದ ಸದಸ್ಯರನ್ನು ಇತರ ಪಕ್ಷಗಳ ಕಡೆಗೆ ಸೆಳೆದುಕೊಳ್ಳಲು ಇದೆ ಸುಸಮಯ ಎಂದು ಇತರ ರಾಜಕೀಯ ಪಕ್ಷಗಳು ಮುಂದಾಗಿವೆ. ಇನ್ನು ಬಿಜೆಪಿಗೂ (BJP) ಕೂಡ ಇದು ಪ್ರಬಲ ಅವಕಾಶ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರೇವಂತ್‌ ರೆಡ್ಡಿ (Revanth Reddy) ಅವರು ಬಿಆರ್‌ಎಸ್‌ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಈ ಸಮರ್ಥನೆಯು BRS ಕಾರ್ಯನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರಿತು, ಇದರ ಪರಿಣಾಮವಾಗಿ ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಹೊರಟರು. ರೇವಂತ್ ಮತ್ತೊಮ್ಮೆ ಇದೇ ರೀತಿಯ ತಂತ್ರವನ್ನು ಬಳಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ ಆದರೆ ಈ ಬಂಧನದಿಂದ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಿದೆ ಎಂದು ರಜನಿಕಾಂತ್ ಟಾಂಗ್ ನೀಡಿದ್ದಾರೆ.

Exit mobile version