ಪ್ಯಾಲೆಸ್ತೀನ್ ಪರವಾಗಿ ಬೆಂಗಳೂರಲ್ಲಿ ಪ್ರತಿಭಟಿಸಿದವರ ಮೇಲೆ ಎಫ್ಐಆರ್ ದಾಖಲು

Bengaluru: ಹಮಾಸ್ (FIR against on Palestine protestors) ಉಗ್ರರು ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿದ ನಂತರ ಇದಕ್ಕೆ ಪ್ರತಿಕಾರವಾಗಿ ಗಾಜಾಪಟ್ಟಿಯ ಮೇಲೆ ಇಸ್ರೇಲ್

ಸೇನೆ ನಡೆಸುತ್ತಿರುವ ಭೀಕರದಾಳಿಯನ್ನು ಖಂಡಿಸಿ, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ಬೆಂಗಳೂರು ಪೊಲೀಸರು ಎಫ್ಐಆರ್ (FIR) ದಾಖಲಿಸಿದ್ದಾರೆ.

ಗಾಜಾಪಟ್ಟಿಯ (Gazapatti) ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ವಾಯುದಾಳಿಯನ್ನು ನಿಲ್ಲಿಸಬೇಕು, ಗಾಜಾಪಟ್ಟಿಯ ಮೇಲೆ ಇಸ್ರೇಲ್ ವಿಧಿಸಿರುವ ದಿಗ್ಭಂಧನವನ್ನು ಹಿಂತೆಗೆದುಕೊಳ್ಳಬೇಕು.

ಭಾರತ ಇಸ್ರೇಲ್ (Israel) ಮೇಲೆ ಒತ್ತಡ ಹೇರಿ, ಕೂಡಲೇ ಶಾಂತಿ ನೆಲೆಸುವಂತೆ ಮಾಡಬೇಕೆಂದು ಆಗ್ರಹಿಸಿ, ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ನೂರಕ್ಕೂ ಹೆಚ್ಚು

ಜನ ಸೇರಿಕೊಂಡು, ಮಾನವ ಸರಪಳಿ ನಿರ್ಮಿಸಿ, ಧಿಕ್ಕಾರ (FIR against on Palestine protestors) ಕೂಗುತ್ತಾ ಪ್ರತಿಭಟನೆ ನಡೆಸಿದ್ದರು.

ಬಹುತ್ವ ಕರ್ನಾಟಕ (Karntaka) ಎಂಬ ಸಂಘಟನೆ ಇದರ ನೇತೃತ್ವವನ್ನು ವಹಿಸಿಕೊಂಡಿತ್ತು. ಪ್ರತಿಭಟನೆ ನಡೆಸಲು ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ಅನುಮತಿ

ಪಡೆಯದಿರುವ ಹಿನ್ನಲೆ ಬೆಂಗಳೂರು (Bengaluru) ಪೊಲೀಸರು ಬಹುತ್ವ ಕರ್ನಾಟಕ ಸಂಘಟನೆಯ ಮೇಲೆ ಮತ್ತು ಪ್ರತಿಭಟನೆಯಲ್ಲಿ ಭಾಗಿಯಾದವರ ಮೇಲೆ ಕೇಸ್ ದಾಖಲಿಸಿದೆ.

ಇನ್ನು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ದ ಯುದ್ದ ಘೋಷಣೆ ಮಾಡಿದ್ದು, ಇಸ್ರೇಲ್ಗೆ ಭಾರತ ಬೆಂಬಲ ಘೋಷಿಸಿದೆ. ಪ್ರಧಾನಿ ನರೇಂದ್ರ

ಮೋದಿ (Narendra Modi) ಅವರು ಇಸ್ರೇಲ್ ಹಮಾಸ್ ಉಗ್ರರ ವಿರುದ್ದ ನಡೆಸುತ್ತಿರುವ ಕಾರ್ಯಾಚರಣೆಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ. ಸಂಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್

ಜೊತೆಗೆ ನಿಲ್ಲಲಿದೆ ಎಂದು ಹೇಳಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಕುರಿತು ಮಾತನಾಡಿದ್ದು, ಬೆಂಬಲ ನೀಡುವಂತೆ ಕೋರಿದ್ದರು.

ಇದನ್ನು ಓದಿ: ಕೋರಮಂಗಲ ಅಗ್ನಿ ದುರಂತ: ಫೋರಂಮಾಲ್‌ ಮುಂಭಾಗದ ಮಡ್‌ಪೈಪ್‌ ಕೆಫೆಯಲ್ಲಿ ಭಾರೀ ಸ್ಪೋಟ, ಸುಟ್ಟು ಕರಕಲಾದ ಮಹಡಿಗಳು

Exit mobile version