Bengaluru: ಒಂದು ಸಮುದಾಯದ ಕುರಿತು ಆಕ್ಷೇಪಾರ್ಯ ಹೇಳಿಕೆ ನೀಡಿದ್ಧಾರೆ ಎಂದು ಆರೋಪಿಸಿ ನಟ, ನಿರ್ದೇಶಕ ಉಪೇಂದ್ರ (fir on Upendra) ವಿರುದ್ದ ಬೆಂಗಳೂರಿನ ವಿವಿಧ ಪೊಲೀಸ್
ಠಾಣೆಗಳಲ್ಲಿ ದೂರು ದಾಖಲಾಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನಟ ಉಪೇಂದ್ರ ಅವರು ನೀಡಿರುವ ಹೇಳಿಕೆ ಎಲ್ಲೆಡೆ ಸದ್ದು
ಮಾಡುತ್ತಿದ್ದಂತೆ, ತಮ್ಮ ಹೇಳಿಕೆಯ ಕುರಿತು ಕ್ಷಮೆಯಾಚನೆ (fir on Upendra) ಮಾಡಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಅನೇಕರು ಅಂದು ಹುಟ್ಟಿರಲಿಲ್ಲ. 50 ವರ್ಷಗಳ
ಹಿಂದಿನ ನನ್ನ ಬಾಲ್ಯ, ಎಂತಹ ವಾತಾವರಣದಲ್ಲಿ ಬೆಳೆದೆ.. ಬಾಲ್ಯದಲ್ಲಿ ಕಂಡ ಕ್ರೂರ ಬಡತನ, ಕಣ್ಣೆದುರೇ ಬೆಂಕಿ ಹಚ್ಚಿಕೊಂಡ ಆತ್ಮಹತ್ಯೆಗಳು, ಹಸಿವು, ಅವಮಾನ, ದಬ್ಬಾಳಿಕೆ…. ನಾನು ಬೆಳೆಯುವುದೇ?
ಇಂದು ಒಂದು ವರ್ಗದ ಜನರಿಗೆ ಈ ಅವಮಾನವನ್ನು ಅನುಭವಿಸುತ್ತಿದೆಯೇ? ನಾನು ಹುಚ್ಚನಾ? ಅದಕ್ಕೆ ಕಾರಣವೇನು? ಅದರಿಂದ ನನಗೇನು ಲಾಭ? ಕ್ಷಮೆಯನ್ನು ಒಪ್ಪಿಕೊಳ್ಳುವ ದೊಡ್ಡತನವಿಲ್ಲವೇ?
ಇಷ್ಟೊಂದು ದ್ವೇಷ ಏಕೆ? ಎಂದು ಪ್ರಶ್ನಿಸಿದ್ದಾರೆ.
ಲೋಕಸಮರ ಗೆಲ್ಲಲು ಬಿಜೆಪಿ-ಜೆಡಿಎಸ್ ನಾಯಕರಿಗೆ ಗಾಳ ಹಾಕುತ್ತಿದೆ ಕಾಂಗ್ರೆಸ್..!
ಇನ್ನು ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬೈರಪ್ಪ ಹರೀಶ್ ಕುಮಾರ್ (Bhairappa Harish Kumar) ಅವರು ಬೆಂಗಳೂರಿನ ಹಲಸೂರು ಗೇಟ್ ಪೊಲೀಸರಿಗೆ ನಟ ಉಪೇಂದ್ರ ವಿರುದ್ದ
ದೂರು ನೀಡಿದ್ದಾರೆ. ಅದೇ ರೀತಿ ಉಪೇಂದ್ರ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂಧನ್ ಕೆ.ಎನ್ (Madhusudhan K.N) ಅವರು ಬೆಂಗಳೂರಿನ ಚನ್ನಮಮ್ನ ಕೆರೆ
ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಉಪೇಂದ್ರ ವಿರುದ್ಧ ದಾಖಲಾದ ಎರಡನೇ ಎಫ್ಐಆಆರ್ ಇದಾಗಿದೆ. ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಈ ಎರಡು ದೂರುಗಳನ್ನು
ಪೊಲೀಸರು ದಾಖಲಿಸಿದ್ದಾರೆ. ಇನ್ನೊಂದೆಡೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಟ ಉಪೇಂದ್ರ ಹೇಳಿಕೆ ಖಂಡಿಸಿ ದಲಿತಪರ ಸಂಘಟನೆಗಳು, ಸಮತಾ ಸೈನಿಕ ದಳ, ದಲಿತ ಪರ ಒಕ್ಕೂಟಗಳು ಆಕ್ರೋಶ ಹಾಕಿ,
ಪ್ರತಿಭಟನೆ ನಡೆಸಿವೆ.